ನಿಮ್ಮ ಹಣವನ್ನು ಡಬಲ್ ಮಾಡುವ ಪೋಸ್ಟ್ ಆಫೀಸ್ ಯೋಜನೆ ಕುರಿತು ನಿಮಗೆ ಗೊತ್ತೇ?? ಉಳಿಕೆಯ ಹಣ ಡಬಲ್ ಮಾಡುವ ಯೋಜನೆ ಯಾವುದು ಗೊತ್ತೇ??
ಭಾರತ ಅಂಚೆ ಕಚೇರಿಯಲ್ಲಿ ನೀವು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಲೆಟರ್ ಗಳನ್ನು ಅಥವಾ ಬೇರೆ ವಸ್ತುಗಳನ್ನು ಭಾರತದ ಬೇರೆ ಬೇರೆ ಊರುಗಳಿಗೆ, ರಾಜ್ಯಗಳಿಗೆ ಒಬ್ಬರಿಂದ ಮತ್ತೊಬ್ಬರಿಗೆ ವಸ್ತುಗಳನ್ನು ತಲುಪಿಸುವುದು ಮಾತ್ರವಲ್ಲದೆ, ನಿಮ್ಮ ಹಣ ಉಳಿತಾಯ ಯೋಜನೆಗಳನ್ನು ಸಹ ಪೋಸ್ಟ್ ಆಫೀಸ್ ನಲ್ಲಿ ರೂಪಿಸಲಾಗಿದೆ. ಹಣ ಹೂಡಿಕೆ ಮಾಡುವ ಪ್ಲಾನ್ ನಿಮ್ಮಲ್ಲಿದ್ದರೆ, ದೀರ್ಘಾವಧಿಯಲ್ಲಿ ಹಣ ದುಪ್ಪಟ್ಟಾಗುವ ಪ್ಲಾನ್ ಗಳು, ಭಾರತ ಅಂಚೆ ಕಚೇರಿ ಗಳಲ್ಲಿವೆ.
ಪೋಸ್ಟ್ ಆಫೀಸ್ ನಲ್ಲಿ ನೀವು ಮಾಡುವ ಹೂಡಿಕೆಯ ದರಗಳು, ಈಗಿನ ಮಾರುಕಟ್ಟೆಯ ದರಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಈ ಹಣವು ರಿಟರ್ನ್ಸ್ ಬಂದಾಗ, ನಿಮ್ಮ ಖಾತೆಗೆ ಖಾತ್ರಿಯಾಗಿರುತ್ತದೆ. ಅಂಚೆ ಕಚೇರಿಯಲ್ಲಿ ಇರುವ ಒಂದು ಪ್ರಮುಖವಾದ ಪ್ಲಾನ್ ಕಿಸಾನ್ ವಿಕಾಸ್ ಪತ್ರ ಯೋಜನೆ ಆಗಿದೆ. ಈ ಯೋಜನೆಯು, ಹೆಚ್ಚಿನ ವರ್ಷಗಳಲ್ಲಿ ನಿಮ್ಮ ಹಣವನ್ನು ದುಪ್ಪಟ್ಟು ಮಾಡುವ ಪ್ಲಾನ್ ಆಗಿದೆ. ಅಂಚೆ ಕಚೇರಿಯಲ್ಲಿ ಸಿಗುವ ಈ ಕಿಸಾನ್ ವಿಕಾಸ್ ಪತ್ರ ಯೋಜನೆಯು ಕಡಿಮೆಯಾಗಿ, 1000 ರೂಪಾಯಿಯಿಂದ ಆರಂಭವಾಗುತ್ತಿದೆ. ಈ ಪೋಸ್ಟ್ ಆಫೀಸ್ ಯೋಜನೆಯನ್ನು, ಒಬ್ಬ ವ್ಯಕ್ತಿ ತಮಗಾಗಿ ಅಥವಾ ಅಪ್ರಾಪ್ತರಿಗಾಗಿ ಖಾತೆಯನ್ನು ತೆರೆಯಬಹುದು..ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಜಂಟಿ ಖಾತೆಯನ್ನು ಸಹ ತೆರೆಯಬಹುದು.
ಈ ಯೋಜನೆಯಲ್ಲಿ ಹೂಡಿಕೆಯ ಮೊತ್ತವು 1000 ರೂಪಾಯಿ ಆಗಿದ್ದು, ಇದಕ್ಕೆ ಗರಿಷ್ಠ ಮೊತ್ತ ಇಷ್ಟೇ ಇರಬೇಕು ಎಂದು ರೂಲ್ಸ್ ಇಲ್ಲ. ಪೋಸ್ಟ್ ಆಫೀಸ್ ನ ವೆಬ್ಸೈಟ್ ನಲ್ಲಿ ಈ ನೀಡಲಾಗಿರುವ ವಿವರಗಳನ್ನು ಭರ್ತಿ ಮಾಡಿ, ಹೂಡಿಕೆದಾರರು 124 ತಿಂಗಳುಗಳನ್ನು ಆಯ್ಕೆ ಮಾಡಿಕೊಂಡರೆ, 10 ವರ್ಷಗಳಲ್ಲಿ ನೀವು ಹೂಡಿಕೆ ಮಾಡಿರುವ ಹಣ ದುಪ್ಪಟ್ಟು ಆಗುತ್ತದೆ. ಈ ಕಿಸಾನ್ ವಿಕಾಸ್ ಪತ್ರ ಯೋಜನೆಯು 6.9% ಬಡ್ಡಿ ದರ ನೀಡುತ್ತದೆ. ಈ ಯೋಜನೆಯನ್ನು ಒಂದು ಅಂಚೆ ಕಛೇರಿಯಿಂದ ಮತ್ತೊಂದು ಅಂಚೆಕಛೇರಿಗೆ ವರ್ಗಾಯಿಸಬಹುದು. ಈ ಯೋಜನೆಗೆ ನಾಮಿನಿ ಆಯ್ಕೆ ಸಹ ಮಾಡಬಹುದಾಗಿದೆ. ಹಾಗೂ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಸಹ ವರ್ಗಾವಣೆ ಮಾಡಬಹುದಾಗಿದೆ
Comments are closed.