ರೋಹಿತ್ ಶರ್ಮ ರವರ ಕಳಪೆ ಫಾರ್ಮ್ ಬಗ್ಗೆ ಮೌನ ಮುರಿದ ಮುಂಬೈ ಕೋಚ್ ಜಯವರ್ಧನೆ ಹೇಳಿದ್ದೇನು ಗೊತ್ತೇ?
2022ರ ಐಪಿಎಲ್ ಪಂದ್ಯಗಳನ್ನು ನೋಡುತ್ತಿದ್ದರೆ, ಮುಂಬೈ ಇಂಡಿಯನ್ಸ್ ತಂಡ ಸತತ ಸೋಲಿನಿಂದ ಕಂಗೆಟ್ಟಿದೆ. ಮೊನ್ನೆ ನಡೆದ ಪಂಜಾಬ್ ತಂಡದ ವಿರುದ್ಧದ ಪಂದ್ಯದಲ್ಲೂ ಸೋಲುವ ಮೂಲಕ ಐದನೇ ಸೋಲಜನು ದಾಖಲಿಸಿದೆ ಮುಂಬೈ ಇಂಡಿಯನ್ಸ್ ತಂಡ. ಇದೇ ರೀತಿ ಮುಂದುವರೆದರೆ, ಮುಂಬೈ ಇಂಡಿಯನ್ಸ್ ತಂಡ ಲೀಗ್ ಇಂದ ಹೊರ ಹೋಗಬಹುದು ಎನ್ನಲಾಗುತ್ತಿದೆ. ಮುಂಬೈ ತಂಡದ ಈ ಸೋಲಿಗೆ ರೋಹಿತ್ ಶರ್ಮ ಅವರ ಕಳಪೆ ಕ್ಯಾಪ್ಟನ್ಸಿ ಕಾರಣ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿ, ರೋಹಿತ್ ಶರ್ಮಾ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ವಿಚಾರದ ಬಗ್ಗೆ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲಾ ಜಯಚಂದ್ರನ್ ಅವರು ರೋಹಿತ್ ಶರ್ಮ ಅವರ ಬ್ಯಾಟಿಂಗ್ ಬಗ್ಗೆ ಮಾತನಾಡಿದ್ದಾರೆ.
“ರೋಹಿತ್ ಶರ್ಮಾ ಅವರು ಫಾರ್ಮ್ ನಲ್ಲಿ ಇಲ್ಲದೆ ಇರುವ ಬಗ್ಗೆ ನನಗೆ ಹೆಚ್ಚು ಚಿಂತೆ ಇಲ್ಲಜ್ ಒಂದು ದೊಡ್ಡ ಇನ್ನಿಂಗ್ಸ್ ಆಡಿದರೆ ಎಲ್ಲವೂ ಸರಿ ಹೋಗುತ್ತದೆ. ಆದರೆ ಮುಂಬೈ ತಂಡವು ಸೋಲನ್ನು ಕಾಣುತ್ತಿರುವ ಕಾರಣ, ಒಳ್ಳೆಯ ಇನ್ನಿಂಗ್ಸ್ ಗಾಗಿ ಕಾಯುತ್ತಿದೆ ಮುಂಬೈ ತಂಡ. ಮುಂಬೈ ಇಂಡಿಯನ್ಸ್ ತಂಡ ಇಲ್ಲಿಯವರೆಗು ಆಡಿರುವ ಪಂದ್ಯಗಳಲ್ಲಿ 116 ರನ್ ಗಳನ್ನು ಗಳಿಸಿದ್ದಾರೆ. ಜಯಚಂದ್ರನ್ ಅವರು ಹೇಳುವಂತೆ, “ರೋಹಿತ್ ಶರ್ಮಾ ಅವರು ಬ್ಯಾಟಿಂಗ್ ಮಾಡುವ ರೀತಿ, ಚೆಂಡುಗಳನ್ನು ಫೇಸ್ ಮಾಡುವ ಪರಿ ಎಲ್ಲವೂ ಅದ್ಭುತವಾಗಿದೆ. ಒಳ್ಳೆಯ ಟೈಮಿಂಗ್ ನಲ್ಲಿ ಚೆಂಡನ್ನು ಹೊಡೆಯುತ್ತಾರೆ. ರೋಹಿತ್ ಶರ್ಮಾ ಅವರು ಒಳ್ಳೆಯ ಆರಂಭಗಳನ್ನು ಪಡೆದಿದ್ದಾರೆ. ಆದರೆ ದೊಡ್ಡ ಇನ್ನಿಂಗ್ಸ್ ಗಳನ್ನು ಆಡಲಾಗದೆ ನಿರಾಸೆಯನ್ನು ಸಹ ಅನುಭವಿಸಿದ್ದಾರೆ. ರೋಹಿತ್ ಶರ್ಮಾ ಅವರು ದೊಡ್ಡ ಇನ್ನಿಂಗ್ಸ್ ಗಳನ್ನು ಆಡಿ, ಹೆಚ್ಚು ರನ್ ಗಳನ್ನು ಗಳಿಸುವುದನ್ನು ನೋಡಿದ್ದೇವೆ. ಇದು ಸಮಯ ಅಷ್ಟೇ, ಅವರ ಫಾರ್ಮ್ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ..” ಎಂದು ಹೇಳಿದ್ದಾರೆ ಮುಂಬೈ ಇಂಡಿಯನ್ಸ್ ಟೀಮ್ ಕೋಚ್ ಮಹೇಲಾ ಜಯಚಂದ್ರನ್.
ರೋಹಿತ್ ಅವರನ್ನು ಹೊರತುಪಡಿಸಿ, ಇನ್ನು ಮಾತನಾಡಿರುವ ಮಹೇಲಾ ಜಯಚಂದ್ರನ್ ಅವರು.. “ನಮ್ಮ ತಂಡದಲ್ಲಿ ಆರು ಉತ್ತಮವಾದ ಬ್ಯಾಟ್ಸ್ಮನ್ ಗಳಿದ್ದಾರೆ. ಸೂರ್ಯಕುಮಾರ್ ಅವರ ಬ್ಯಾಟಿಂಗ್ ಬಗ್ಗೆ ನಾನು ಚಿಂತೆ ಮಾಡುವುದಿಲ್ಲ. ಪಂದ್ಯ ಗೆಲ್ಲಲು ಸೂರ್ಯಕುಮಾರ್ ಯಾದವ್ ಸೂಕ್ತ ವ್ಯಕ್ತಿ. ಪವರ್ ಪ್ಲೇ ಸಮಯದಲ್ಲಿ ಬೌಲರ್ ಗಳು ಸ್ಪಿನ್ ಬಾಲ್ ಗಳನ್ನು ಹಾಕುತ್ತಾರೆ. ಹಾಗಿರುವಾಗ, ಸೂರ್ಯಕುಮಾರ್ ಅವರನ್ನು ಆ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡಲು ಕಳಿಸಲು ಆಗುವುದಿಲ್ಲ. ಮಧ್ಯ ಕ್ರಮದಲ್ಲಿ ಬ್ಯಾಟಿಂಗ್ ಮಾಡಲು ಯುವ ಆಟಗಾರರಿಗೆ ಸೂಕ್ತವಾಗಿರುತ್ತದೆ. ಸೂರ್ಯಕುಮಾರ್ ಮತ್ತು ಕೀರಾನ್ ಪೋಲಾರ್ಡ್ ಇಬ್ಬರು ಸಹ ಉತ್ತಮ ಫಿನಿಷರ್ ಗಳಾಗಿದ್ದಾರೆ. ಇವು ಎದುರಾಳಿ ತಂಡಕ್ಕೆ ಮಾಡಿರುವ ತಂತ್ರ..”ಎಂದು ಹೇಳಿದ್ದಾರೆ. ಬೌಲಿಂಗ್ ನಲ್ಲಿ ಜೋಫ್ರ ಅರ್ಚರ್ ಅವರ ಅನುಪಸ್ಥಿತಿ ತಂಡಕ್ಕೆ ನೋವನ್ನು ಉಂಟು ಮಾಡಿದೆ ಎಂದು ಹೇಳಿದ್ದಾರೆ ಕೋಚ್ ಜಯಚಂದ್ರನ್.
Comments are closed.