Neer Dose Karnataka
Take a fresh look at your lifestyle.

ಕನ್ನಡ ಕಿರುತೆರೆಯ ಖ್ಯಾತ ನಟಿ ರಮ್ಯಾ ಜೀವನದಲ್ಲಿ ಎದುರಿಸಿದ ಸವಾಲುಗಳೇನು ಗೊತ್ತೇ??

ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ವಿಲ್ಲನ್ ಗಳದ್ದೇ ಕಾರು ಬಾರು. ಧಾರಾವಾಹಿಗಳಲ್ಲಿ ಮಹಿಳಾ ವಿಲ್ಲನ್ ಗಳೇ ಹೆಚ್ಚಾಗಿದ್ದಾರೆ. ಸುಂದರ ಮುಖದ ವಿಲ್ಲನ್ ಗಳನ್ನೇ ನಾವು ಧಾರಾವಾಹಿಗಳಲ್ಲಿ ನೋಡುತ್ತೇವೆ. ಹೀಗೆ ಕನ್ನಡ ಕಿರುತೆರೆಯಲ್ಲಿ ವಿಲ್ಲನ್ ಆಗಿ ಫೇಮಸ್ ಆಗಿರುವವರು ನಟಿ ಕೋಳಿ ರಮ್ಯಾ. ಮುದ್ದಾಗಿರುವ ನಟಿ ಕೋಳಿ ರಮ್ಯಾ ಅವರು, ಸದಾ ಎಲ್ಲರ ಮೇಲೆ ಸಿಡುಕುವ ವಿಲ್ಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಿಥುನ ರಾಶಿ ಧಾರವಾಹಿಯಲ್ಲಿ ಮುದ್ದಾಗಿ ಕಾಣುವ ಖಡಕ್ ವಿಲ್ಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಕೋಳಿ ರಮ್ಯಾ. ಇವರು ಜೀವನದಲ್ಲಿ ಅನುಭವಿಸಿದ ಕಷ್ಟಹಳೆಷ್ಟು ಗೊತ್ತಾ?

ಕೋಳಿ ರಮ್ಯಾ ಅವರು ಮೂಲತಃ ಭದ್ರಾವತಿಯಲ್ಲಿ ಹುಟ್ಟಿ ಬೆಳೆದವರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಕಾರಣ, 14ನೇ ವಯಸ್ಸಿಗೆ ಮನೆಯ ಜವಾಬ್ದಾರಿ ರಮ್ಯಾ ಅವರ ಮೇಲೆ ಬಿದ್ದಿತ್ತು. ಮನೆಯನ್ನು ನೋಡಿಕೊಳ್ಳಬೇಕು ಎನ್ನುವ ಜವಾಬ್ದಾರಿ ಇಂದಲೇ ಇವರು ಚಿಕ್ಕ ವಯಸ್ಸಿಗೆ ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎಂದು ಬೆಂಗಳೂರಿಗೆ ಬಂದರು. ಇಲ್ಲಿ ಅವಕಾಶಕ್ಕಾಗಿ ಹುಡುಕುತ್ತಿದ್ದರು. 9ನೇ ತರಗತಿ ಓದುವಾಗಲೇ ರಮ್ಯಾ ಅವರು ತನನಂ ತನನಂ ಎನ್ನುವ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಆಯ್ಕೆಯಾಗಿದ್ದರು.

ಈ ಮೂಲಕ ಅವರಿಗೆ ಬಣ್ಣದ ನಂಟು ಶುರುವಾಯಿತು. ರಮ್ಯಾ ಅವರಿಗೆ ಹೆಸರು ತಂದುಕೊಟ್ಟಿದ್ದು ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫ್ ರಿಯಾಲಿಟಿ ಶೋ. ಈ ಶೋನಲ್ಲಿ ಕೋಳಿ ಹಿಡಿಯುವ ಟಾಸ್ಕ್ ನಲ್ಕ್ ಎಲ್ಲರಿಗಿಂತ ಹೆಚ್ಚಿನ ಕೋಳಿಗಳನ್ನು ಹಿಡಿದ ಕಾರಣ ರಮ್ಯಾ ಅವರಿಗೆ ಕೋಳಿ ರಮ್ಯಾ ಎಂದು ಹೆಸರು ಅಂಟಿಕೊಂಡಿತು. ಆಗಿನಿಂದ ಈಗಿನವರೆಗೂ ಕೋಳಿ ರಮ್ಯಾ ಎಂದೇ ಫೇಮಸ್ ಆಗಿದ್ದಾರೆ ಈ ನಟಿ. ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫ್ ನಲ್ಲಿ ಫಿನಾಲೆ ವರೆಗೂ ಇದ್ದು, ಎರಡನೇ ಸ್ಥಾನ ಪಡೆದುಕೊಂಡಿದ್ದರು. ಅದಾದ ಬಳಿಕ ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟರು..

ಕೋಳಿ ರಮ್ಯಾ ಅವರು ನಟಿಸಿದ ಮೊದಲ ಧಾರಾವಾಹಿ ಸೊಸೆ ತಂದ ಸೌಭಾಗ್ಯ, ಈ ಧಾರಾವಾಹಿ ಮೂಲಕ ಶುರುವಾದ ಇವರ ಧಾರಾವಾಹಿ ಜರ್ನಿ ಇಂದು ತೆಲುಗು ತಮಿಳು ಭಾಷೆಯ ಜನರನ್ನು ಸಹ ಆಕರ್ಷಿಸಿದೆ. ಕೋಳಿ ರಮ್ಯಾ ಅವರು ಅನೇಕ ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರನ್ನು ಹೆಚ್ಚಾಗಿ ಹುಡುಕಿಕೊಂಡು ಬರುವುದು ವಿಲ್ಲನ್ ಪಾತ್ರಗಳೇ ಆಗಿವೆ. ಮುದ್ದು ಮುಖದ ಖಡಕ್ ವಿಲ್ಲನ್ ಆಗಿ ಕಾಣಿಸಿಕೊಳ್ಳುತ್ತಾರೆ ಕೋಳಿ ರಮ್ಯಾ. ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ತಮಿಳು ಧಾರಾವಾಹಿಗಳಲ್ಲಿ ಸಹ ನಟಿಸಿದ್ದಾರೆ..

ಸತ್ಯ ಧಾರಾವಾಹಿಯ ತಮಿಳು ಅವತರಣಿಕೆಯಲ್ಲಿ ಸತ್ಯ ಅಕ್ಕನ ಪಾತ್ರ ನಿರ್ವಹಿಸುತ್ತಿದ್ದಾರೆ ನಟಿ ಕೋಳಿ ರಮ್ಯಾ. ಈ ಧಾರಾವಾಹಿ ಇವರಿಗೆ ತಮಿಳು ಭಾಷೆಯಲ್ಲಿ ಒಳ್ಳೆಯ ಹೆಸರು ತಂದುಕೊಟ್ಟಿದೆ. ಕನ್ನಡ ಧಾರಾವಾಹಿಯಲ್ಲಿ ಸಹ ಕಂಬ್ಯಾಕ್ ಮಾಡಿರುವ ರಮ್ಯಾ ಅವರು ಮಿಥುನ ರಾಶಿ ಧಾರಾವಾಹಿಯಲ್ಲಿ ವಿಲ್ಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಈ ಮೊದಲು ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಅದೊಂದೇ ಅಲ್ಲದೆ, ಇನ್ನು ಕೆಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಇನ್ನು ಕೋಳಿ ರಮ್ಯಾ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೆ, ಇವರು ಮದುವೆಯಾಗಿದ್ದು ಸಹ ಕಿರುತೆರೆಯ ನಟನ ಜೊತೆ. ಕನ್ನಡದ ಕುಲವಧು ಧಾರಾವಾಹಿಯಲ್ಲಿ ವೇದ್ ಪಾತ್ರದಲ್ಲಿ ನಟಿಸಿದ್ದ, ಶಿಶಿರ್ ಶಾಸ್ತ್ರಿ ಅವರೊಡನೆ ಮದುವೆಯಾದರು. ಆದರೆ ಈಗ ಆ ಮದುವೆ ಉಳಿದಿಲ್ಲ, ಇಬ್ಬರು ಸಹ ದೂರವಾಗಿದ್ದಾರೆ. ಪ್ರಸ್ತುತ ಇಬ್ಬರು ಸಹ ತಮ್ಮ ಕೆರಿಯರ್ ಕಡೆಗೆ ಗಮನ ಹರಿಸುತ್ತಿದ್ದಾರೆ.

Comments are closed.