Neer Dose Karnataka
Take a fresh look at your lifestyle.

ಕನ್ನಡತಿ ಕಿರಣರಾಜ್ ರವರ ಬಳಿ ಇರುವ ಮೊಬೈಲ್ ಯಾವುದು ಗೊತ್ತೇ?? ಆದಲ್ಲಿ ಇರುವ ಕಾಂಟಾಕ್ಟ್ ನಂಬರ್ ಗಳು ಎಷ್ಟು ಗೊತ್ತೇ??

ಕನ್ನಡತಿ ಧಾರಾವಾಹಿಯ ನಾಯಕ ಕಿರಣ್ ರಾಜ್ ಅವರು ಇಂದು ಯಾರಿಗೆ ತಾನೇ ಗೊತ್ತಿಲ್ಲ, ಕರ್ನಾಟಕದಲ್ಲಿ ಕನ್ನಡತಿ ಧಾರಾವಾಹಿ ಮೂಲಕ ಕಿರಣ್ ರಾಜ್ ಅವರು ಭಾರಿ ಸದ್ದು ಮಾಡುತ್ತಿದ್ದಾರೆ. ಹರ್ಷ ಪಾತ್ರ ಅವರಿಗೆ ಬಹಳಷ್ಟು ಜನಪ್ರಿಯತೆ ಮತ್ತು ಹೆಸರು, ಕೀರ್ತಿ ತಂದುಕೊಟ್ಟಿದೆ. ಕಿರಣ್ ರಾಜ್ ಅವರಿಗೆ ಜನರಿಗೆ ಸಹಾಯ ಮಾಡುವ ಮನೋಭಾವ, ತಮ್ಮದೇ ಆದ ಒಂದು ಟ್ರಸ್ಟ್ ಶುರು ಮಾಡಿ ಅದರ ಮೂಲಕ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕರೊನಾ ಲಾಕ್ ಡೌನ್ ಸಮಯದಲ್ಲಿ ಕಷ್ಟದಲ್ಲಿರುವ ಜನರಿಗೆ ಆಹಾರ ಹಂಚುವುದು, ಬೀದಿಯಲ್ಲಿ ಮಲಗಿರುವವರಿಗೆ ಬೆಡ್ ಶೀಟ್ ನೀಡುವುದು ಹೀಗೆ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ..

ಕಿರಣ್ ರಾಜ್ ಅವರ ಈ ಒಳ್ಳೆಯ ಗುಣಗಳು ಮತ್ತು ಅವರ ಅಭಿನಯ ಸಾಕಷ್ಟು ಜನರಿಗೆ ಇಷ್ಟವಾಗಿದೆ. ಕಿರಣ್ ರಾಜ್ ಅವರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.. ಕಿರಣ್ ರಾಜ್ ಅವರು ಬಳಸುವ ಫೋನ್ ಯಾವುದು ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಇದೆ, ಕಿರಣ್ ರಾಜ್ ಅವರ ಬಳಿ ಇರುವುದು ಐಫೋನ್ 12, ಇದು ಎರಡು ವರ್ಷದ ಹಿಂದೆ ಲಾಂಚ್ ಆಗಿರುವ ಮಾಡೆಲ್ ಆಗಿದೆ. ಇದು 5ಜಿ ಸ್ಪೀಡ್ ಇರುವ ಮೊಬೈಲ್, ಜೊತೆಗೆ ಎ14 ಎನ್ನುವ ಸ್ಮಾರ್ಟ್ ಚಿಪ್ ಈ ಮೊಬೈಲ್ ನಲ್ಲಿದೆ. 6.1 ಇಂಚ್ ಇರುವ ಕಿರಣ್ ರಾಜ್ ಅವರ ಮೊಬೈಲ್ ನ ಸ್ಟೋರೇಜ್ ಕೆಪಾಸಿಟಿ 512 ಜಿಬಿ ಎನ್ನಲಾಗಿದೆ. ಈ ಫೋನ್ ನಲ್ಲಿ ಕಿರಣ್ ರಾಜ್ ಅವರು ಹೆಚ್ಚಾಗಿ ಬಳಸುವುದು ಇನ್ಸ್ಟಾಗ್ರಾಮ್ ಆಪ್, ಇನ್ಸ್ಟಾಗ್ರಾಮ್ ನಲ್ಲಿ ಆಗಾಗ ಫೋಟೋಸ್ ಶೇರ್ ಮಾಡಿಕೊಳ್ಳುತ್ತಾರೆ.

ಇನ್ನು ವಾಟ್ಸಾಪ್ ಬಳಸುತ್ತಾರೆ ಕಿರಣ್ ರಾಜ್, ಅದರಲ್ಲಿ ಗಂಟೆಗಟ್ಟಲೆ ಚಾಟ್ ಮಾಡುತ್ತಾ ಕೂರುವುದಿಲ್ಲ. ಮುಖ್ಯವಾದ ವಿಚಾರ ಇದ್ದರೆ ಮಾತ್ರ ವಾಟ್ಸಾಪ್ ಚಾಟ್ ಮಾಡುತ್ತಾರೆ. ಇನ್ನು ಕಿರಣ್ ರಾಜ್ ಅವರ ಮೊಬೈಲ್ ನಲ್ಲಿ ಇರುವ ಕಾಂಟ್ಯಾಕ್ಟ್ ಸಂಖ್ಯೆ, ಕೇವಲ 50. ನಮ್ಮೆಲ್ಲರ ಮೊಬೈಲ್ ಗಳಲ್ಲಿ ಸಹ ವಾಟ್ಸಾಪ್ ಕಾಂಟ್ಯಾಕ್ ಸಂಖ್ಯೆ 100ಕ್ಕಿಂತ ಹೆಚ್ಚಿರುತ್ತದೆ. ಆದರೆ ಕಿರಣ್ ರಾಜ್ ಅವರು ಅಷ್ಟು ನಂಬರ್ ಗಳನ್ನು ಸೇವ್ ಮಾಡುವುದಿಲ್ಲ. ತುಂಬಾ ಹತ್ತಿರದವರ ನಂಬರ್ ಗಳನ್ನು ಮಾತ್ರ ಸೇವ್ ಮಾಡಿಕೊಳ್ಳುತ್ತಾರೆ ಕಿರಣ್ ರಾಜ್. ಇನ್ನು ಧಾರಾವಾಹಿಯಲ್ಲಿ ಎಲ್ಲರ ಫೇವರೆಟ್ ಆಗಿರು ಹರ್ಷನ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ, ಹರ್ಷ ಭುವಿ ಜೊತೆಗೆ ಆಗಾಗ ಸೆಲ್ಫಿ ಸಹ ತೆಗೆದುಕೊಳ್ಳುತ್ತಾನೆ, ಆದರೆ ನಿಜ ಜೀವನದಲ್ಲಿ ಕಿರಣ್ ರಾಜ್ ಅವರು ಒಂದೇ ಒಂದು ಸೆಲ್ಫಿ ಸಹ ತೆಗೆದುಕೊಳ್ಳುವುದಿಲ್ಲ. ಅವರ ಮೊಬೈಲ್ ಎಷ್ಟೇ ಹುಡುಕಿದರೂ ಒಂದು ಸೆಲ್ಫಿ ಕೂಡ ಸಿಗುವುದಿಲ್ಲ. ಕಿರಣ್ ರಾಜ್ ಅವರು ತಮ್ಮ ಮೊಬೈಲ್ ನಲ್ಲಿ ತೆಗೆದಿರುವುದು ಒಂದು ಮುದ್ದಾದ ನಾಯಿಯ ಫೋಟೋ ಆಗಿದ್ದು, ಆ ನಾಯಿಯ ಹೆಸರು ಪ್ರಿನ್ಸ್. ಈ ಮಾಹಿತಿಗಳನ್ನು ಕಿರಣ್ ರಾಜ್ ಅವರು, ರಾಪಿಡ್ ರಶ್ಮಿ ಶೋ ನಲ್ಲಿ ಹಂಚಿಕೊಂಡಿದ್ದಾರೆ.

Comments are closed.