ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮಿಂಚಿ ಸ್ಯಾಂಡೆಲ್ವುಡ್ ಗೆ ಕಾಲಿಟ್ಟಿರುವ ಅನು ಸಿರಿಮನೆ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ??
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ನಟನೆ ಶುರು ಮಾಡಿ ಇಂದು ಎಲ್ಲರ ಕ್ರಶ್ ಆಗಿರುವವರು ನಟಿ ಮೇಘಾ ಶೆಟ್ಟಿ. ಮೊದಲ ಧಾರಾವಾಹಿಯಲ್ಲೇ ಮುಗ್ಧ ಅಭಿನಯದ ಮೂಲಕ ಕರ್ನಾಟಕದ ಜನರ ಹೃದಯ ಗೆದ್ದರು. ಬೆಂಗಳೂರಿನ ಬೆಡಗಿ ಮೇಘಾ ಶೆಟ್ಟಿ ಅವರು ಇಂದು ಕರ್ನಾಟಕದ ಹುಡುಗರ ಕ್ರಶ್, ಹುಡುಗಿ ಅನು ಸಿರಿಮನೆ ಹಾಗೆ ಮುಗ್ಧವಾಗಿ ಕ್ಯೂಟ್ ಆಗಿ ಇರಬೇಕು ಎನ್ನುತ್ತಾರೆ ಹುಡುಗರು. ತಮ್ಮ ಕ್ಯೂಟ್ನೆಸ್ ಇಂದಲೇ ಹೆಚ್ಚು ಫೇಮಸ್ ಆಗಿರುವ ಮೇಘಾ ಶೆಟ್ಟಿ ಅವರ ವಯಸ್ಸು ಎಷ್ಟು ಗೊತ್ತಾ?
ಜೊತೆ ಜೊತೆಯಲಿ ಧಾರಾವಾಹಿ ಶುರುವಾಗಿ 600 ಸಂಚಿಕೆಗಳನ್ನು ಪೂರೈಸಿದೆ. ಮೇಘಾ ಶೆಟ್ಟಿ ಮತ್ತು ನಟ ಅನಿರುದ್ಧ್ ಅವರ ಅಭಿನಯ ಮತ್ತು ಹೊಸ ಟ್ವಿಸ್ಟ್ ಗಳೊಂದಿಗೆ ಧಾರಾವಾಹಿ ಸಾಗುತ್ತಿರುವ ರೀತಿಗೆ ಜನರು ಪ್ರತಿದಿನ ತಪ್ಪದೇ ಜೊತೆ ಜೊತೆಯಲಿ ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ಪ್ರಸ್ತುತ ಧಾರಾವಾಹಿಯಲ್ಲಿ ರಾಜನಂದಿನಿ ಫ್ಲ್ಯಾಶ್ ಬ್ಯಾಕ್ ನಡೆಯುತ್ತಿದ್ದು, ಅನು ವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನಿಜ ಜೀವನದಲ್ಲಿ ಮೇಘಾ ಶೆಟ್ಟಿ ಅವರು ತುಂಬಾ ಲಕ್ಕಿ ಎಂದೇ ಹೇಳಬಹುದು. ಏಕೆಂದರೆ ಮೊದಲ ಧಾರವಾಹಿಯಲ್ಲೇ ಇಷ್ಟು ಜನಪ್ರಿಯತೆ ಪಡೆದುಕೊಂಡರು.
ಜೊತೆ ಜೊತೆಯಲಿ ಧಾರಾವಾಹಿಯ ಯಶಸ್ಸು ಇವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಸಹ ತಂದುಕೊಟ್ಟಿತು. ಗಣೇಶ್ ಅವರೊಡನೆ ತ್ರಿಬಲ್ ರೈಡಿಂಗ್, ಡಾರ್ಲಿಂಗ್ ಕೃಷ್ಣ ಅವರೊಡನೆ ದಿಲ್ ಪಸಂದ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಮೇಘಾ. ಜೊತೆಗೆ ಒಂದು ಪ್ಯಾನ್ ಇಂಡಿಯಾ ಸಿನಿಮಾವನ್ನು ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಹೊಸ ಪ್ರೊಡಕ್ಷನ್ ಹೌಸ್ ಶುರು ಮಾಡಿ, ಒಂದು ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಮೇಘಾ ಶೆಟ್ಟಿ. ಇವರ ವಯಸ್ಸು ಕೇವಲ 23 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಮೇಘಾ ಶೆಟ್ಟಿ ಅವರು ಕೆಲಸದ ಮೇಲಿನ ಶ್ರದ್ಧೆಯಿಂದ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ.
Comments are closed.