ವಿಶ್ವದ ಎಲ್ಲೆಡೆ ಉತ್ತಮ ಪ್ರಶಂಸೆ ಪಡೆಯುತ್ತಿರುವ ಕೆಜಿಎಫ್ -2 ಚಿತ್ರ ಇಲ್ಲಿಯವರೆಗೂ ಗಳಿಸಿರುವ ಅಸಲಿ ಕಲೆಕ್ಷನ್ ಎಷ್ಟು ಗೊತ್ತೇ?
ಕೆಜಿಎಫ್2 ಸಿನಿಮಾ ಬಿಡುಗಡೆಯಾಗಿ ನಾಲ್ಕು ದಿನಗಳು ಕಳೆದಿದ್ದು, ಈಗಲೂ ಕೆಜಿಎಫ್2 ಸಿನಿಮಾ ಕ್ರೇಜ್ ಕಡಿಮೆಯಾಗಿಲ್ಲ. ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಸಾಲು ಸಾಲು ರಜೆ ಸಹ ಇದ್ದ ಕಾರಣ ಹಣಗಳಿಕೆಗೆ ಅದು ಸಹಾಯ ಮಾಡಿಕೊಟ್ಟಿದೆ. ಕೆಜಿಎಫ್2 ಸಿನಿಮಾ ನೋಡಿದ ಪ್ರೇಕ್ಷಕ ವಾವ್ ಎನ್ನುತ್ತಿದ್ದಾರೆ. ಈಗಾಗಲೇ ಕನ್ನಡದ ಈ ಹಿಂದಿನ ಎಲ್ಲಾ ಸಿನಿಮಾಗಳ ಗಳಿಕೆಯ ಮೊತ್ತವನ್ನು ಒಂದೇ ದಿನದಲ್ಲಿ ಉಡೀಸ್ ಮಾಡಿದೆ ಕೆಜಿಎಫ್2 ಸಿನಿಮಾ. ಸಿನಿಪ್ರಿಯರಂತೂ ಮತ್ತೆ ಮತ್ತೆ ಥಿಯೇಟರ್ ಗೆ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಮೂರು ದಿನಗಳಲ್ಲಿ ಕೆಜಿಎಫ್2 ಸಿನಿಮಾ ಮಾಡಿರುವ ಗಳಿಕೆ ಎಷ್ಟು ಕೋಟಿ ಗೊತ್ತಾ?
ಈಗಾಗಲೇ ಕೆಜಿಎಫ್2 ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ತಿಳಿಸಿದ ಹಾಗೆ, ಏಪ್ರಿಲ್ 14ರಂದು ಬಿಡುಗಡೆಯಾದ ಮೊದಲ ದಿನ, ಭಾರತದಲ್ಲಿಯೇ 134 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಕೆಜಿಎಫ್2. ಎರಡನೇ ದಿನಕ್ಕೆ ಭಾರತದಲ್ಲಿ ಒಟ್ಟಾಗಿ 240 ಕೋಟಿ ಕಲೆಕ್ಷನ್ ಮಾಡಿದೆ. ಇದನ್ನು ಲೆಕ್ಕ ಹಾಕಿದರೆ, ಎರಡನೇ ದಿನವೂ 106 ಕೋಟಿ ರೂಪಾಯಿ ಹಣಗಳಿಕೆ ಮಾಡಿದೆ. ಅದರಲ್ಲೂ ಹಿಂದಿ ಪ್ರದೇಶಗಳಲ್ಲಿ ಕೆಜಿಎಫ್2 ಹವಾ ಜೊರಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬಾಲಿವುಡ್ ನಲ್ಲಿ ಕೆಜಿಎಫ್2 ಸಿನಿಮಾ ಕಲೆಕ್ಷನ್ ಜೋರಾಗಿಯೇ ನಡೆಯುತ್ತಿದೆ, ಸಿನಿಮಾ ಬಿಡುಗಡೆಯಾದ ಮೂರನೇ ದಿನ ಅಂದರೆ ಶನಿವಾರ ಸಹ ಕೆಜಿಎಫ್2 ಕಲೆಕ್ಷನ್ 42.90 ಕೋಟಿ ರೂಪಾಯಿ. ಮೊದಲ ದಿನ ಹಿಂದಿಯಲ್ಲಿ 54 ಕೋಟಿ ರೂಪಾಯಿ ಹಣಗಳಿಕೆ ಆಗಿತ್ತು. ಭಾನುವಾರ ಸಹ ಇದೆ ಹಂತ ತಲುಪಿದೆ.
ಹಿಂದಿ ಪ್ರದೇಶದಲ್ಲೇ 150 ಕೋಟಿ ಕಲೆಕ್ಷನ್ ಸಮೀಪಕ್ಕೆ ಬಂದಿದೆ. ಇನ್ನು ದಕ್ಷಿಣ ಭಾರತ ಸಹ ಕಡಿಮೆಯಿಲ್ಲ. ದಕ್ಷಿಣ ಭಾರತದಲ್ಲಿ, ಸುಮಾರು 150ಕೋಟಿ ಕಲೆಕ್ಷನ್ ಮಾಡಿದೆ ಕೆಜಿಎಫ್2 ಸಿನಿಮಾ. ಭಾರತದಲ್ಲಿ ಮಾತ್ರವಲ್ಲದೆ, ಅಮೆರಿಕಾದಲ್ಲಿ ಸಹ ಕೆಜಿಎಫ್2 ಹವಾ ಜೋರಾಗಿದೆ. ಅಮೆರಿಕಾದಲ್ಲಿ ಮೊದಲ ಮೂರು ದಿನದಲ್ಲೇ 3 ಮಿಲಿಯನ್ ಹಣ ಗಳಿಕೆ ಮಾಡಿದೆ ಕೆಜಿಎಫ್2..ಭಾರತದ ರೂಪಾಯಿಯ ಮೌಲ್ಯದಲ್ಲಿ ಹೇಳಬೇಕೆಂದರೆ, ಸುಮಾರು 22.90 ಕೋಟಿ ರೂಪಾಯಿ ಆಗಿದೆ. ಅಮೆರಿಕಾದಲ್ಲಿ ಇಷ್ಟು ದೊಡ್ಡ ಮೊತ್ತ ಗಳಿಸಿದ ಮೊದಲ ಕನ್ನಡ ಸಿನಿಮಾ ಆಗಿದೆ ಕೆಜಿಎಫ್2. ಕೆಜಿಎಫ್2 ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿ, ಕನ್ನಡದ ಅತ್ಯಂತ ದೊಡ್ಡ ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿದ್ದು, ರಾಕಿ ಭಾಯ್ ಪ್ರಪಂಚ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.. ಈ ಯಶಸ್ಸು ಹೀಗೆ ಮುಂದುವರೆಯಲಿ ಎಂದು ಹಾರೈಸೋಣ.
Comments are closed.