Neer Dose Karnataka
Take a fresh look at your lifestyle.

ಕಳೆಗುಂದಿದ ಐಪಿಎಲ್, ಟಿಆರ್ಪಿ ಲೆಕ್ಕಾಚಾರದಲ್ಲಿ ಇದ್ದಕ್ಕಿಂದ್ದತೇ ಕಡಿಮೆಯಾಗಲು ಕಾರಣವೇನು ಗೊತ್ತೇ??

ಐಪಿಎಲ್ ಪಂದ್ಯಗಳಿಗೆ ಭಾರತದಲ್ಲಿ ಭಾರಿ ಕ್ರೇಜ್ ಇದೆ. ಯೂತ್ಸ್ ಗಳು ತುಂಬಾ ಇಷ್ಟುಪಟ್ಟು ನೋಡುವ ಟೂರ್ನಿ ಇದು. ಐಪಿಎಲ್ ಪಂದ್ಯಗಳು ಶುರುವಾದವು ಎಂದರೆ, ಟಿ.ಆರ್.ಪಿ ಯಲ್ಲಿ ಟಾಪ್ ಸ್ಥಾನದಲ್ಲಿ ಇರುತ್ತದೆ. ಐಪಿಎಲ್ ಶುರುವಾಗಿ 15 ವರ್ಷಗಳಾಗಿವೆ, ಈ ವರ್ಷ 15ನೇ ಸೀಸನ್ ನಡೆಯುತ್ತಿದ್ದು, ಈ ಬಾರಿ ಐಪಿಎಲ್ ಟಿ.ಆರ್.ಪಿ ಯಲ್ಲಿ ಕುಸಿತ ಕಂಡಿದೆ.. BARC (ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ಮಾಡಿರುವ ವರದಿಯ ಪ್ರಕಾರ, 2021ರ ಐಪಿಎಲ್ ನಲ್ಲಿ ಶೇ.31ರಷ್ಟು ಟಿ.ಆರ್.ಪಿ ಯಲ್ಲಿ ಕುಸಿತ ಕಂಡಿತ್ತು. ಇದೀಗ ಕಳೆದ ವರ್ಷಕ್ಕೆ ಹೋಲಿಕೆ ಮಾಡಿ ನೋಡಿದರೆ, ಈ ವರ್ಷ ಶೇ.14ರಷ್ಟು ಇಳಿಕೆ ಕಂಡಿದೆ. ಇದಕ್ಕೆ ಕಾರಣ ಏನು ಎನ್ನುವುದು ಸಹ ಚರ್ಚೆಯಾಗುತ್ತಿದೆ. ಕಾರಣಗಳು ಹೀಗಿವೆ ನೋಡಿ..

ಐಪಿಎಲ್ ನಲ್ಲಿ ಬಲಿಷ್ಠ ತಂಡಗಳು ಎಂದು ಹೆಸರಾಗಿದ್ದದ್ದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು. ಈ ಸೀಸನ್ ನಲ್ಲಿ ಈ ಎರಡು ತಂಡಗಳು ಸಹ ಕಳಪೆ ಪ್ರದರ್ಶನ ನೀಡುತ್ತಿದೆ. ಸತತ ಸೋಲುಗಳಿಂದ ಎರಡು ತಂಡಗಳು ಸಹ ಕಂಗೆಟ್ಟಿವೆ. ಸಿ.ಎಸ್.ಕೆ ತಂಡ 4 ಮ್ಯಾಚ್ ಗಳನ್ನು ಸೋತು, 5ನೇ ಮ್ಯಾಚ್ ನಲ್ಲಿ ಆರ್.ಸಿ.ಬಿ ತಂಡದ ವಿರುದ್ಧದ ಪಂದ್ಯದಲ್ಲಿ ಗೆಲುವನ್ನು ಕಂಡಿದೆ. ಆದರೆ ಮುಂಬೈ ತಂಡ ಐದು ಪಂದ್ಯಗಳಲ್ಲೂ ಸೋತು ಹಿನ್ನಡೆ ಕಂಡಿದೆ. 9 ಬಾರಿ ಚಾಂಪಿಯನ್ಸ್ ಆಗಿದ್ದ ತಂಡಗಳು ,ಈ ರೀತಿ ಹಿನ್ನಡೆ ಕಾಣುತ್ತಿರುವುದು ಜನಪ್ರಿಯತೆಯನ್ನು ಕಡಿಮೆ ಮಾಡಿದೆ.

ಎಲ್ಲಾ ಐಪಿಎಲ್ ಸೀಸನ್ ಗಳನ್ನು ಕೆಲವು ಪ್ರಮುಖ ಆಟಗಾರಿಗಾಗಿ ವೀಕ್ಷಕರು ತಪ್ಪದೇ ವೀಕ್ಷಣೆ ಮಾಡುತ್ತಿದ್ದರು. ಆದರೆ ಈ ಬಾರಿ ಅಂತಹ ಆಟಗಾರರು ಸಹ ಮಿಸ್ ಆಗಿದ್ದಾರೆ. ಆರ್.ಸಿ.ಬಿ ತಂಡದ ಎಬಿಡಿ ವಿಲಿಯರ್ಸ್ ಅವರಿಗೆ ದೊಡ್ಡ ಫ್ಯಾನ್ ಬೇಸ್ ಇತ್ತು, ಅವರು ಈಗ ನಿವೃತ್ತಿ ಪಡೆದುಕೊಂಡಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ತಂಡದ ಕ್ರಿಕೆಟರ್ ಕ್ರಿಸ್ ಗೇಲ್, ಜೋಫ್ರ ಆರ್ಚರ್, ಬೆನ್ ಸ್ಟೋಕ್ಸ್, ಸುರೇಶ್ ರೈನಾ, ಜೋ ರೂಟ್ ಅವರಂತಹ ಸ್ಟಾರ್ ಆಟಗಾರರು ಈ ಬಾರಿ ಐಪಿಎಲ್ ಪಂದ್ಯಗಳಲ್ಲಿ ಇಲ್ಲದೆ ಇರುವುದು ಸಹ ಜನಪ್ರಿಯತೆ ಕಡಿಮೆ ಆಗುವ ಹಾಗೆ ಮಾಡಿದೆ.

ಈ ಬಾರಿ ಐಪಿಎಲ್ ತಂಡಗಳಲ್ಲಿ ಆಟಗಾರರ ಬದಲಾವಣೆ ಆಗಿದೆ. ಈ ಬಾರಿ ಆಗಿರುವುದು ಮೇಜರ್ ಬದಲಾವಣೆಗಳು. ಆರ್.ಸಿ.ಬಿ ತಂಡದ ಚಾಣಾಕ್ಷ ಬೌಲರ್ ಚಹಲ್ ಅವರು ಹಾಗೂ ದೇವದತ್ ಪಡಿಕ್ಕಲ್ ಇಬ್ಬರು ಸಹ ಈ ಬಾರಿ ಆರ್.ಸಿ.ಬಿ ತಂಡದಲ್ಲಿ ಇಲ್ಲ, ಇವರಿಬ್ಬರು ರಾಜಸ್ತಾನ್ ರಾಯಲ್ಸ್ ತಂಡದಲ್ಲಿದ್ದಾರೆ. ಸಿ.ಎಸ್.ಕೆ ತಂಡದ ಬ್ಯಾಟ್ಸ್ಮನ್ ಆಗಿದ್ದ, ಫಾಫ್ ಡು ಪ್ಲೆಸಿಸ್ ಅವರು ಆರ್.ಸಿ.ಬಿ ತಂಡದ ಕ್ಯಾಪ್ಟನ್ ಆಗಿದ್ದರೆ. ಪಂಜಾಬ್ ತಂಡದ ಕ್ಯಾಪ್ಟನ್ ಆಗಿದ್ದ ಕೆ.ಎಲ್.ರಾಹುಲ್ ಲಕ್ನೌ ತಂಡದ ಕ್ಯಾಪ್ಟನ್ ಹಾಗೂ ಸನ್ ರೈಸರ್ಸ್ ತಂಡದ ಡೇವಿಡ್ ವಾರ್ನರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾರೆ. ಈ ಬದಲಾವಣೆಗಳು ಸಹ ಟಿ.ಆರ್.ಪಿ.ಕಡಿಮೆಯಾಗಲು ಕಾರಣವಾಗಿದೆ.

ಕೋವಿಡ್ ಇಂದಾಗಿ ಕಳೆದ ವರ್ಷ ಐಪಿಎಲ್ ಪಂದ್ಯಗಳು ತಡವಾಗಿ ಶುರುವಾಯಿತು. ಅದಲ್ಲದೇ, ಮಧ್ಯದಲ್ಲೇ ಐಪಿಎಲ್ ಪಂದ್ಯಗಳು ನಿಂತು, ಬ್ರೇಕ್ ನ ನಂತರ ಮತ್ತೆ ಶುರುವಾಗಿ ಮುಕ್ತಾಯವಾಗಿತ್ತು. ಐಪಿಎಲ್ ಸೀಸನ್ 14 ಮುಗಿದು 6 ತಿಂಗಳು ಸಹ ಆಗಿಲ್ಲ, ಅದರ ನಡುವೆಯೇ, ಐಪಿಎಲ್ 15 ಶುರು ಆಗಿರುವುದು ವೀಕ್ಷಕರಿಗೆ ಓವರ್ ಡೋಸ್ ಆಗಿರುವ ಹಾಗೆ ಅನ್ನಿಸಿದೆ.

ಪ್ರಸ್ತುತ ಇಂಟರ್ನೆಟ್ ಎನ್ನುವುದು ಕಡಿಮೆ ಬೆಲೆಗೆ ಸಿಗುತ್ತಿದೆ. ಕೇಬಲ್ ಟಿವಿಗಿಂತ ಇಂಟರ್ನೆಟ್ ಕಡಿಮೆ ಬೆಲೆಗೆ ಸಿಗುತ್ತಿದ್ದು, ಇದರಿಂದಾಗಿ ವೀಕ್ಷಕರು ಟಿವಿಗಿಂತ ಹೆಚ್ಚಾಗಿ, ಹಾಟ್ ಸ್ಟಾರ್ ನಲ್ಲೇ ಪಂದ್ಯಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ..ಮೊಬೈಲ್ ಹಾಟ್ ಸ್ಟಾರ್ ಪ್ಯಾಕೇಜ್ ನಲ್ಲಿ ಫ್ರೀಯಾಗಿ ಪಂದ್ಯಗಳನ್ನು ನೋಡಬಹುದಾಗಿದೆ. ಕಳೆದ ಕೆಲವು ಪಂದ್ಯಗಳನ್ನು 50 ಲಕ್ಷಕ್ಕಿಂತ ಹೆಚ್ಚಿನ ಜನರು, ಹಾಟ್ ಸ್ಟಾರ್ ಮೂಲಕವೆ ಪಂದ್ಯಗಳನ್ನು ವೀಕ್ಷಣೆ ಮಾಡಿದ್ದಾರೆ. ಐ.ಪಿ.ಎಲ್ ಟಿ.ಆರ್.ಪಿ ಕುಸಿಯಲು ಕಾರಣಗಳು ಇದಿಷ್ಟು..

Comments are closed.