ಐಪಿಎಲ್ ತಂಡದ ಯುವ ನಾಯಕ ಮುಂದೆ ದೊಡ್ಡ ಹೆಸರು ಮಾಡುತ್ತಾನೆ ಎಂದ ರವಿಶಾಸ್ತ್ರಿ, ಹೇಳಿದ್ದು ಯಾರ ಬಗ್ಗೆ ಗೊತ್ತೇ??
ಭಾರತದಲ್ಲಿ ಐಪಿಎಲ್ ಪಂದ್ಯಗಳು ನೀಡುವ ಮನರಂಜನೆ ಪ್ರಮುಖವಾದದ್ದು, ಐಪಿಎಲ್ ಪಂದ್ಯಗಳನ್ನು ಜನರು, ತಪ್ಪದೇ ವೀಕ್ಷಿಸುತ್ತಾರೆ. ತಮ್ಮಿಷ್ಟದ ಸಪೋರ್ಟ್ ಮಾಡುತ್ತಾ, ಪಂದ್ಯಗಳನ್ನು ನೋಡುವುದನ್ನು ಜನರು ಇಷ್ಟಪಡುತ್ತಾರೆ. ಕಳೆದ ವರ್ಷ ಕರೊನಾ ಕಾರಣದಿಂದ ಐಪಿಎಲ್ ಪಂದ್ಯಗಳು ದೂರದ ದುಬೈನಲ್ಲಿ ನಡೆದಿತ್ತು. ಪಂದ್ಯ ನೋಡಲು ಜನರಿಗೆ ಅವಕಾಶ ಇರಲಿಲ್ಲ. ಆದರೆ ಈಗ ಐಪಿಎಲ್ 15ರಲ್ಲಿ ಐಪಿಎಲ್ ಟೂರ್ನಿ ಭಾರತದಲ್ಲೇ ನಡೆಯುತ್ತಿದ್ದು, ಪಂದ್ಯ ನೋಡಲು ಜನರು ಮೈದಾನಕ್ಕೆ ಬರುವ ಅವಕಾಶ ಇದೆ. ಐಪಿಎಲ್ ವೀಕ್ಷಸಲು ಸಾಕಷ್ಟು ಜನರು ಮೈದಾನಕ್ಕೆ ಬರುತ್ತಿದ್ದಾರೆ.
ಈ ಬಾರಿ ಐಪಿಎಲ್ ನಲ್ಲಿರುವ ತಂಡಗಳು ಸಖತ್ ಸ್ಟ್ರಾಂಗ್ ಆಗಿವೆ. ಹಾಗು ಎಲ್ಲಾ ತಂಡಗಳಲ್ಲು ಭಾರಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಕೆಕೆಆರ್ ತಂಡದ ನೇತೃತ್ವ ವಹಿಸಿಕೊಂಡಿರುವುದು ಪ್ರಬಲ ಆಟಗಾರ ಶ್ರೇಯಸ್ ಅಯ್ಯರ್. ಇವರ ಕ್ಯಾಪ್ಟನ್ಸಿಯಲ್ಲಿ ಕೆಕೆಆರ್ ತಂಡ ಉತ್ತಮವಾಗಿ ಪ್ರದರ್ಶನ ನೀಡುತ್ತಿದೆ. ಮೂರು ಪಂದ್ಯಗಳನ್ನು ಗೆದ್ದು, 6 ಅಂಕಗಳನ್ನು ಪಡೆದು, ಪಾಯಿಂಟ್ಸ್ ಟೇಬಲ್ ನಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ ಕೆಕೆಆರ್ ತಂಡ. ಇದೀಗ ತಂಡದ ಕ್ಯಾಪ್ಟನ್ ಆಗಿರುವ ಶ್ರೇಯಸ್ ಅಯ್ಯರ್ ಅವರ ಬಗ್ಗೆ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಮೆಚ್ಚುಗೆ ಸೂಚಿಸಿದ್ದಾರೆ..
“ಶ್ರೇಯಸ್ ಅಯ್ಯರ್ ಅವರಿಗೆ ಕ್ಯಾಪ್ಟನ್ಸಿಯ ಗುಣ ನ್ಯಾಚುರಲ್ ಆಗಿ ಬಂದಿದೆ. ಅವರು ತಂಡವನ್ನು ಮುನ್ನಡೆಸುತ್ತಿರುವ ರೀತಿ ನೋಡಿದರೆ, ಮೊದಲ ಬಾರಿಗೆ ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂದು ಅನ್ನಿಸುತ್ತಿಲ್ಲ. ಮೂರ್ನಾಲ್ಕು ವರ್ಷದಿಂದ ತಂಡವನ್ನು ಮುನ್ನಡೆಸುತ್ತಿರುವ ಹಾಗೆ ಅನ್ನಿಸುತ್ತದೆ, ಅವರ ಬ್ಯಾಟಿಂಗ್ ವೈಖರಿಯನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಪಂದ್ಯದ ಸಮಯದಲ್ಲಿ ಅವರ ಆಲೋಚನೆಗಳು ಒಳ್ಳೆಯ ರಿಸಲ್ಟ್ ನೀಡುತ್ತಿದೆ. ಒಬ್ಬ ಬಲಿಷ್ಟ ಬ್ಯಾಟ್ಸ್ಮನ್ ಆಗಿ ತಂಡವನ್ನು ಹೇಗೆ ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಮತ್ತು ಕೆಕೆಆರ್ ತಂಡವನ್ನು ಪ್ಲೇ ಆಫ್ಸ್ ಹಂತಕ್ಕೆ ತಲುಪಿಸುವುದು ಹೇಗೆ ಎಂದು ಅವರಿಗೆ ಗೊತ್ತಿದೆ. ಪಂದ್ಯ ಶುರುವಾಗುವ ಮೊದಲು ಹಾಗೂ ಪಂದ್ಯ ಮುಗಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಶೈಲಿ ನನಗೆ ತುಂಬಾ ಇಷ್ಟವಾಗುತ್ತದೆ. ಅವರು ತೆಗೆದುಕೊಳ್ಳುವ ನಿರ್ಧಾರಗಳು ಚೆನ್ನಾಗಿದೆ, ನಾಯಕನಾಗಿ ಮುಂದೆ ಬರುತ್ತಾರೆ..” ಎಂದಿದ್ದಾರೆ ರವಿಶಾಸ್ತ್ರಿ ಅವರು.
Comments are closed.