ಕೆಜಿಎಫ್ 2 ಚಿತ್ರವನ್ನು ತೆಲುಗಿನ ಪುಷ್ಪ ಚಿತ್ರಕ್ಕೆ ಹೋಲಿಸುತ್ತಿರುವಾಗ ಈ ಕುರಿತು ಶಿವಣ್ಣ ಹೇಳಿದ್ದೇನು ಗೊತ್ತೇ??
ಕೆಜಿಎಫ್2 ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಮ್ಮ ಕನ್ನಡ ಸಿನಿಮಾ ಒಂದು ಎಲ್ಲಾ ರಾಜ್ಯಗಳು ಮತ್ತು ಹೊರದೇಶದಲ್ಲಿ ಸಹ ಇಷ್ಟರ ಮಟ್ಟಿಗೆ ಸದ್ದು ಮಾಡಿ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ಕೆಜಿಎಫ್2 ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನಕ್ಕೆ ಬರೋಬ್ಬರಿ 546 ಕೋಟಿ ರೂಪಾಯಿ ಹಣ ಗಳಿಸಿದೆ. ಇದುವರೆಗೂ ಯಾವ ಕನ್ನಡ ಸಿನಿಮಾ ಸಹ ಇಷ್ಟು ಹಣ ಗಳಿಕೆ ಮಾಡಿರಲಿಲ್ಲ. ಹಾಗೆಯೇ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಶಂಸೆಯನ್ನು ಸಹ ಪಡೆದುಕೊಂಡಿರಲಿಲ್ಲ. ರಾಕಿ ಭಾಯ್ ಹವಾ ಇಡೀ ಭಾರತ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿದೆ ಕೆಜಿಎಫ್2 ಸಿನಿಮಾ.
ಸಿನಿಮಾ ಬಿಡುಗಡೆ ಆಗುವ ಮೊದಲು ಆರ್.ಆರ್.ಆರ್ ಸಿನಿಮಾದ ಕಲೆಕ್ಶನ್ ಅನ್ನು ಕೆಜಿಎಫ್2 ಸಿನಿಮಾ ಬೀಟ್ ಮಾಡುತ್ತಾ ಎನ್ನುವ ಪ್ರಶ್ನೆಗಳು ಕೇಳಿಬಂದಿದ್ದವು. ಇನ್ನು ಕೆಜಿಎಫ್2 ಗೆ ಟಕ್ಕರ್ ಕೊಡಲು ತಮಿಳಿನ ಬೀಸ್ಟ್ ಸಿನಿಮಾ ಸಹ ಬಿಡುಗಡೆ ಆಗಿತ್ತು. ಆದರೆ ಕನ್ನಡದ ಹೆಮ್ಮೆ ಕೆಜಿಎಫ್2 ಸಿನಿಮಾ ಎದುರು ಬೀಸ್ಟ್ ಸಿನಿಮಾ ಡಲ್ ಆಗಿದೆ. ಈ ನಡುವೆ ಕೆಜಿಎಫ್2 ಸಿನಿಮಾವನ್ನು ಪುಷ್ಪ ಸಿನಿಮಾಗೆ ಹೋಲಿಸಿ ಕೆಲವು ಮಾತುಗಳು ಕೇಳಿಬಂದಿದ್ದವು. ಅದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ಸಹ ವ್ಯಕ್ತವಾಗಿತ್ತು. ಇದೀಗ ಕರುನಾಡ ಚಕ್ರವರ್ತಿ ಶಿವ ರಾಜ್ ಕುಮಾರ್ ಅವರು ಇದರ ಬಗ್ಗೆ ಮಾತನಾಡಿದ್ದಾರೆ.
“ಅದನ್ನ ಜನರಿಗೆ ಬಿಟ್ಟುಬಿಡಬೇಕು. ಈ ವಾದ ವಿವಾದಗಳನ್ನ ಬಿಟ್ಟುಬಿಡಬೇಕು. ಅದು ದೇವರಿಗೆ ಗೊತ್ತು, ಪ್ರೊಡ್ಯೂಸರ್ ಗಳಿಗೆ ಗೊತ್ತು, ಅವರಷ್ಟು ಜನರಿಗೆ ಗೊತ್ತಿದ್ದರೆ ಸಾಕು..ಅದನ್ನ ವಿವಾದ ಮಾಡಿಕೊಂಡು ಕೂತುಕೊಂಡ್ರೆ ಪ್ರಯೋಜನ ಇಲ್ಲ. ಯಾವುದಕ್ಕೂ ವಿವಾದ ಮಾಡಬಾರ್ದು. ಅದೊಂದು ಸಮುದ್ರದ ಹಾಗೆ,ಅಲ್ಲಿ ಯಾರು ಬೇಕಾದರು ಈಜಬಹುದು, ಯಾರು ಬೇಕಾದರೂ ಮುಳುಗಬಹುದು, ಯಾರು ಬೇಕಾದರು ಎದ್ದೇಳಬಹುದು. ಅದಾದ ಬಗ್ಗೆ ಎಲ್ಲಾ ಯೋಚನೆ ಮಾಡಬಾರದು, ಪಿಕ್ಚರ್ ಚೆನ್ನಾಗಿ ಹೋಗ್ತಿದೆಯ ವೆರಿ ಗುಡ್ ಅಂದುಕೊಳ್ಳಬೇಕು. ಇದೆಲ್ಲ ನಮಗೆ ಬೇಕಾಗಿರದ ವಿಷಯ..” ಎಂದು ಹೇಳಿದ್ದಾರೆ ಶಿವಣ್ಣ.
Comments are closed.