ನಿಧಾನವಾಗಿ ಚಲಿಸುವ ಕೇತು ಗ್ರಹದ ಸ್ಥಾನಪಲ್ಲಟ, ಇದರಿಂದ 18 ತಿಂಗಳು ಮೂರು ರಾಶಿಯ ಜನರಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ??
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೇತು ಗ್ರಹವು ಏಪ್ರಿಲ್ 12, 2022ರಂದು ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಕೇತು ಹೆಚ್ಚಾಗಿ ಹಿಂದೆಯೇ ಇರುತ್ತಾನೆ. ಹಾಗಾಗಿ ಕೇತು ಹಿಮ್ಮೆಟ್ಟುವ ಗ್ರಹ, ಕೇತುವಿನಿಂದ ಕೆಡುಕು ಹೆಚ್ಚಾಗುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ ಅದು ಪೂರ್ತಿಯಾಗಿ ಸತ್ಯವಲ್ಲ. ರಾಹು ಕೇತು ಎರಡು ಕೂಡ ನಿಧಾನವಾಗಿ ಚಲನೆ ಮಾಡುವ ಗ್ರಹಗಳು, ಈ ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಲು, 18 ತಿಂಗಳುಗಳು ಬೇಕಾಗುತ್ತದೆ. ಈಗ ಕೇತು ತುಲಾ ರಾಶಿಯ ಪ್ರವೇಶ ಮಾಡಿದರೆ, ಮತ್ತೆ ಸ್ಥಾನ ಬದಲಾವಣೆ ಮಾಡುವುದು 2023 ರ ಅಕ್ಟೋಬರ್ ತಿಂಗಳಿನಲ್ಲಿ. ಅಲ್ಲಿಯವರೆಗೂ ಕೇತು ತುಲಾ ರಾಶಿಯಲ್ಲೇ ಇರುತ್ತಾನೆ. ಇದರಿಂದಾಗಿ 3 ರಾಶಿಯವರಿಗೆ ಶುಭ ಫಲ ಸಿಗಲಿದ್ದು ಕೆಲವು ರಾಶಿಗಳಿಗೆ ಅಶುಭ ಫಲವನ್ನು ಸಹ ನೀಡುತ್ತದೆ. ಮೊದಲಿಗೆ ಶುಭ ಫಲ ಸಿಗುವ ರಾಶಿಗಳು ಯಾವುದು ಎಂದು ತಿಳಿಸುತ್ತೇವೆ ..
ಕಟಕ ರಾಶಿ :- ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳ್ಳೆಯದಾಗುತ್ತದೆ, ಹೊಸ ಕೆಲಸಕ್ಕಾಗಿ ಟ್ರೈ ಮಾಡುತ್ತಿರುವವರಿಗೆ ಕೆಲಸ ಸಿಗುತ್ತದೆ, ಈಗಾಗಲೇ ಉದ್ಯೋಗದಲ್ಲಿ ಇರುವವರಿಗೆ ಪ್ರೊಮೋಷನ್ ಸಿಗುತ್ತದೆ. ಒಂಟಿಯಾಗಿರುವವರ ಜೀವನದಲ್ಲಿ ಹೊಸ ಸಂಗಾತಿಯ ಪ್ರವೇಶವಾಗುತ್ತದೆ. ಆಸ್ತಿ ಮತ್ತು ವಾಹನ ಖರೀದಿ ಮಾಡುವ ಯೋಗವಿದೆ.
ಮಕರ ರಾಶಿ :- ಈ ರಾಶಿಯವರಿಗೆ ಕೇತುವಿನಿಂದ ಶುಭಫಲ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಆದಾಯ ಹೆಚ್ಚಾಗುತ್ತದೆ. ನೀವು ಮಾಡುತ್ತಿರುವ ವ್ಯವಹಾರಗಳಿಂದ ಲಾಭ ಜಾಸ್ತಿಯಾಗುತ್ತದೆ. ಧನಲಾಭ ಬರುವ ಸೂಚನೆ ಇದೆ. ಈ ದಿನಗಳು ನಿಮಗೆ ಅದ್ಭುತವಾಗಿರಲಿದೆ.
ಕುಂಭ ರಾಶಿ :- ಇದರಿಂದ ಕುಂಭ ರಾಶಿಯವರಿಗೆ ಅದೃಷ್ಟ ಹೆಚ್ಚಾಗುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿ ನಡೆಯುತ್ತದೆ. ಹಾಗೂ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಕಾಣುತ್ತೀರಿ. ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಹಾಗೂ ಇಂಟರ್ವ್ಯೂ ಗಳಿಗೆ ತಯಾರಿ ನಡೆಸುತ್ತಿರುವವರಿಗೆ ಇದು ಉತ್ತಮವಾದ ಸಮಯ ಆಗಿದೆ. ವಿದೇಶ ಪ್ರವಾಸಕ್ಕೆ ಹೋಗುವ ಸಂಭವ ಸಹ ಇದೆ.
ಇದು ಶುಭಫಲ ಸಿಗುವ ರಾಶಿಗಳಾದರೆ, ಕೇತು ಸಂಚಾರದಿಂದ ಕೆಲವು ರಾಶಿಗಳಿಗೆ ಕೆಟ್ಟಫಲ ಸಹ ಸಿಗಲಿದೆ. ಆ ರಾಶಿಯವರು ಹುಷಾರಾಗಿ ಇರಬೇಕು. ಮೇಷ, ತುಲಾ, ಧನು ಮತ್ತು ಮೀನಾ ರಾಶಿಯವರಿಗೆ ಈ ರೀತಿಯ ಫಲವಿದೆ.
Comments are closed.