Neer Dose Karnataka
Take a fresh look at your lifestyle.

ನಿರುದ್ಯೋಗ ನಿವಾರಣೆ ಮಾಡಿ, ಸ್ವಂತ ಉದ್ಯೋಗ ಸ್ಥಾಪಿಸಲು ನೀಡುತ್ತಿಲ್ಲ 10 ಲಕ್ಷ ಸಾಲದ ಯೋಜನೆ ಬಂದ್ ಮಾಡಿ, ಬದಲಿ ಯೋಜನೆ ತಿಳಿಸಿದ ರಾಜ್ಯ ಸರ್ಕಾರ. ಹೇಗಿದೆ ಗೊತ್ತೇ ಬದಲಿ ಯೋಜನೆ?

ಕರ್ನಾಟಕ ರಾಜ್ಯ ಸರ್ಕಾರವು ನಿರುದ್ಯೋಗ ಸಮಸ್ಯೆಯನ್ನು ನಿರ್ಮೂಲನೆ ಮಾಡುವ ಸಲುವಾಗಿ, ಸ್ವಯಂ ಉದ್ಯೋಗ ಸೃಷ್ಟಿ ಯೋಜನೆಯನ್ನು ಮುಖ್ಯಮಂತ್ರಿಗಳು ಶುರು ಮಾಡಿದ್ದರು. ಇದರ ಪ್ರಕಾರ, ಸರ್ಕಾರವು ಉದ್ಯೋಗ ಮಾಡಲು ಬಯಸುವವರಿಗೆ ಗರಿಷ್ಠ ಮೊತ್ತ 10 ಲಕ್ಷ ರೂಪಾಯಿಯನ್ನು ಸಾಲವಾಗಿ ನೀಡಿ, ಅದರ ಮೇಲೆ ಬಡ್ಡಿಗೆ ಸಬ್ಸಿಡಿ ಸಹ ನೀಡುತ್ತಿತ್ತು. ಗ್ರಾಮೀಣ ವಿಭಾಗದ ಯುವಕರಿಗೆ ಉಪಯೋಗ ಆಗುವಂತೆ ಈ ಯೋಜನೆ ಶುರು ಮಾಡಲಾಗಿತ್ತು, ಉತ್ಪಾದನೆಯ ಕೆಲಸ ಮತ್ತು ಸೇವೆಯ ಕೆಲಸಗಳಿಗೆ ಈ ಯೋಜನೆಯ ಮೂಲಕ ಸಾಲದ ಉಪಯೋಗ ಪಡೆದುಕೊಳ್ಳಬಹುದಿತ್ತು.

ಈ ಯೋಜನೆಯಿಂದ ಹಲವರು ಉದ್ಯೋಗ ಪಡೆದು, ಜೀವನವನ್ನು ಸುಗಮವಾಗಿ ಮಾಡಿಕೊಂಡಿದ್ದರು. ಸಾಕಷ್ಟು ಗ್ರಾಮೀಣ ಭಾಗದ ಜನರು, ಹಾಗೂ ನಗರದ ಜನರು ಸಹ, ಸ್ವಯಂ ಉದ್ಯೋಗ ಸೃಷ್ಟಿ ಯೋಜನೆಯ ಉಪಯೋಗ ಪಡೆದುಕೊಂಡಿದ್ದರು. ಆದರೆ 2020-21 ರಿಂದ ಈ ಯೋಜನೆಯನ್ನು ನಿಲ್ಲಿಸಲಾಗಿದೆ. ಈ ಯೋಜನೆಯ ಪ್ರಯೋಜನ ಪಡೆಯಲು, ಯಾವುದೇ ಅರ್ಜಿಗಳನ್ನು ಸರ್ಕಾರ ಸ್ವೀಕರಿಸುತ್ತಿಲ್ಲ. ಈ ರೀತಿ ಆಗಿರುವಾಗ, ಸ್ವಂತ ಉದ್ಯೋಗ ಮಾಡಲು ಬಯಸುವವರು ಏನು ಮಾಡಬೇಕು ಎನ್ನುವ ಪ್ರಶ್ನೆ ಜನರಲ್ಲಿ ಮೂಡಿದ್ದು, ಈ ಪ್ರಶ್ನೆಗೆ ಇಂದು ನಾವು ನಿಮಗೆ ಉತ್ತರ ಕೊಡಲಿದ್ದೇವೆ.

ಮುಖ್ಯಮಂತ್ರಿಗಳು ಶುರುಮಾಡಿರುವ, ಸ್ವಯಂ ಉದ್ಯೋಗ ಯೋಜನೆಯಲ್ಲಿ, ಈಗಾಗಲೇ ಅರ್ಜಿ ಸಲ್ಲಿಸಿ, ಸಾಲ ಸಿಕ್ಕಿರುವವರು, PMGEP ಯೋಜನೆಯ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ. www.kvic.org.in ಈ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಬಗ್ಗೆ ಅಥವಾ ಈ ಯೋಜನೆಯ ಬಗ್ಗೆ ಯಾವುದೇ ಅನುಮಾನ, ಅಥವಾ ಸಮಸ್ಯೆ ಇದ್ದರೆ, ಜಂಟಿ ನಿರ್ದೇಶಕರ ಮೇಲ್ ಐಡಿ , [email protected] ಇಮೇಲ್ ಮಾಡಬಹುದು ಎಂದು ಅಧಿಕೃತ ವೆಬ್ಸೈಟ್ ನಲ್ಲಿ ತಿಳಿಸಲಾಗಿದೆ. ಅಥವಾ ಇದರ ಸಂಪರ್ಕ ಮಾಡಲು 080-22386794 ಸಂಖ್ಯೆಗೆ ಕರೆಮಾಡಬಹುದು.

Comments are closed.