ಮಹಾಭಾರತದ ಕುರಿತು ಎಲ್ಲವನ್ನು ತಿಳಿದಿದ್ದ 7 ವ್ಯಕ್ತಿಗಳು ಯಾರು ಗೊತ್ತೇ??
ಹಿಂದೂ ಸಂಪ್ರದಾಯದಲ್ಲಿ ಬಹಳ ಮಹತ್ವವಿರುವ ಗ್ರಂಥ ಮಹಾಭಾರತ. ಧರ್ಮದ ಬಗ್ಗೆ ತಿಳಿಸಿಕೊಟ್ಟ ಗ್ರಂಥವಿದು. ಮಹಾಭಾರತ ನಡೆದದ್ದು 5000 ವರ್ಷಗಳ ಕೆಳಗೆ. ಮಹಾಭಾರತ ಕೊನೆಯಾಗಿದ್ದು, ಪಾಂಡವರು ಮತ್ತು ಕೌರವರ ನಡುವೆ ನಡೆದ 18 ದಿನಗಳ ಕಾಲ ನಡೆದ ಆ ಮಹಾ ಯುದ್ಧದಿಂದ. ಈ ಯುದ್ಧ ನಡೆದದ್ದು ಸುಮಾರು 18 ದಿನಗಳ ಕಾಲ., ಇದರಲ್ಲಿ ಲಕ್ಷಾಂತರ ಜನ ಸೈನಿಕರು ಭಾಗವಹಿಸಿ ಪ್ರಾಣ ತ್ಯಾಗ ಮಾಡಿದರು. ಈ ಮಹಾಯುದ್ಧದಲ್ಲಿ ಬದುಕುಳಿದವರು ಕೇವಲ 18 ಜನ ದಿಗ್ಗಜರು ಮಾತ್ರ..ಇಂದು ನಾವು ನಿಮಗೆ ಈ ಯುದ್ಧದ ಬಗ್ಗೆ ಕೆಲವು ಸಂಗತಿಗಳನ್ನು ತಿಳಿಸುತ್ತೇವೆ.
ಪಾಂಡವರು ಮತ್ತು ಕೌರವರ ನಡುವೆ ಈ ಯುದ್ಧ ನಡೆಯಿತು. ಈ ಯುದ್ಧ ಯಾವಾಗ ನಡೆಯುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಮಹಾಭಾರತದ ಯುದ್ಧದಲ್ಲಿ ಕೌರವರ ಇಡೀ ಕುಟುಂಬ ನಾಶವಾಯಿತು. ಪಾಂಡವರ ಮಕ್ಕಳು ಸಹ ಇನ್ನಿಲ್ಲವಾದರು. ಆದರೆ ಈ ಯುದ್ಧ ನಡೆಯುವ ಮೊದಲೇ ಆ ಏಳು ಜನರಿಗೆ ಯುದ್ಧದ ಬಗ್ಗೆ ತಿಳಿದಿತ್ತು. ಯುದ್ಧ ಯಾವಾಗ ನಡೆಯುತ್ತದೆ. ಯುದ್ಧದಲ್ಲಿ ಗೆಲ್ಲುವವರು ಯಾರು? ಪಾಂಡವರ ವಿಜಯದ ಇದೆಲ್ಲದರ ಬಗ್ಗೆಯೂ ಆ ಏಳು ಜನರಿಗೆ ಗೊತ್ತಿತ್ತು. ಅಷ್ಟಕ್ಕೂ ಆ ಏಳು ಜನರು ಯಾರು ಗೊತ್ತಾ? ಇಂದು ನಿಮಗೆ ತಿಳಿಸುತ್ತೇವೆ ನೋಡಿ…
ಮೊದಲನೆಯದಾಗಿ ಶ್ರೀಕೃಷ್ಣ.. ಭಗವಾನ್ ಶ್ರೀಕೃಷ್ಣನಿಗೆ ಮಹಾಭಾರತ ಯುದ್ಧ ನಡೆಯುವ ಮೊದಲೇ ಅವರಿಗೆ ಗೊತ್ತಿತ್ತು. ಶ್ರೀಕೃಷ್ಣನು ಯುದ್ಧ ಪ್ರಾರಂಭವಾಗುವ ಕೆಲವೇ ದಿನಗಳಿಗಿಂತ ಮೊದಲು, ದ್ರೌಪದಿಯ್ ಜೊತೆ ಯುದ್ಧದ ಬಗ್ಗೆ ಮತ್ತು ಯುದ್ಧದ ಫಲಿತಾಂಶ ಹಾಗೂ ಆಕೆಯ ಮಕ್ಕಳಿಗೆ ಏನಾಗಬಹುದು ಎನ್ನುವ ಬಗ್ಗೆ ತಿಳಿಸಿದ್ದರು. ಇದರಿಂದ ದ್ರೌಪದಿಗೆ ಆತಂಕವಾಗಿತ್ತು..
ಎರಡನೆಯದಾಗಿ ಭೀಷ್ಮ ಪಿತಾಮಹರು.. ಭೀಷ್ಮ ಪಿತಾಮಹರು, ದೇವರ ಅನುಗ್ರಹಕ್ಕೆ ಪಾತ್ರರಾಗಿದ್ದರು. ಯುದ್ಧ ನಡೆಯುವ ಸಮಯ, ಯುದ್ಧದ ಫಲಿತಾಂಶ, ಎಲ್ಲವನ್ನು ಸಹ ತಿಳಿದವರಾಗಿದ್ದರು. ಆದರೆ ಇವರು ಕೌರವರ ಪರವಾಗಿ ಯುದ್ಧದಲ್ಲಿ ಪಾಲ್ಗೊಳ್ಳಬೇಕಾಗಿದೆ ಎನ್ನುವುದೇ ಭೀಷ್ಮರಿಗೆ ದುಃಖ ತರುವಂತಹ ವಿಚಾರ ಆಗಿತ್ತು. ಇದಕ್ಕೆ ಕಾರಣ, ಆ ಸಮಯದಲ್ಲಿ ಭೀಷ್ಮರು ಮತ್ತು ಅವರ ಸಭೇ ಕೌರವರಿಂದ ಬಂಧಿವಾಗಿತ್ತು. ಜೊತೆಗೆ, ಕೌರವರು ಆ ಸಮಯದಲ್ಲಿ ಹಸ್ತಿನಾಪುರವನ್ನು ಆಳುತ್ತಿದ್ದರು ಅದರಿಂದ ಭೀಷ್ಮರು ಕೌರವರ ಪರವಾಗಿ ಮತ್ತು ಪಾಂಡವರ ವಿರುದ್ಧವಾಗಿ ಯುದ್ಧ ಮಾಡಲು ಅವರಿಗೆ ಇಷ್ಟವಿರಲಿಲ್ಲ.
ಮೂರನೆಯದಾಗಿ ವೇದ ವ್ಯಾಸರು. ವೇದ ವ್ಯಾಸರು, ದಿವ್ಯದರ್ಶನ ಪಡೆದುಕೊಂಡವರಲ್ಲಿ ಒಬ್ಬರು. ಇವರಿಗೆ ಯುದ್ಧ ನಿಶ್ಚಿತವಾದದ್ದು ಎಂದು ಗೊತ್ತಿತ್ತು, ಹಾಗೂ ಯುದ್ಧ ಯಾವಾಗ ನಡೆಯುತ್ತದೆ, ಯುದ್ಧದಲ್ಲಿ ಗೆಲ್ಲುವವರು ಯಾರು ಎನ್ನುವುದು ಸಹ ತಿಳಿದಿತ್ತು. ಧೃತರಾಷ್ಟ್ರನಿಗೆ ವೇದವ್ಯಾಸರು, ಯುದ್ಧ ನಡೆಯುವ ಬಗ್ಗೆ ಸನ್ನೆಯ ಮೂಲಕ ಸೂಚನೆ ನೀಡಿದ್ದರು. ಹಾಗೆಯೇ ಇನ್ನು ತುಂಬಾ ಸಮಯ ಇದೆ, ನೀವು ಯುದ್ಧವನ್ನು ನಿಲ್ಲಿಸಬೇಕು ಎಂದು ಸಹ ಹೇಳಿದ್ದರು. ಆದರೆ ಧೃತರಾಷ್ಟ್ರರು ವೇದವ್ಯಾಸರ ಮಾತನ್ನು ನಂಬಿರಲಿಲ್ಲ. ಇದು ಅವರ ವಂಶದ ನಿರ್ನಾಮಕ್ಕೆ ಕಾರಣವಾಯಿತು.
ನಾಲ್ಕನೇಯದಾಗಿ ಸಹದೇವ..ಪಾಂಡವರಲ್ಲಿ ಸಹದೇವ, ತ್ರಿಕಾಲದರ್ಶಿ. ತಂದೆ ಪಾಂಡುರಾಯನ ತಲೆಯ ಮೂರು ಭಾಗವನ್ನು ಸಹದೇವ ತಿಂದಿದ್ದನು, ಹಾಗಾಗಿ ಸಹದೇವ ತ್ರಿಕಲದರ್ಶಿ ಎನ್ನಿಸಿಕೊಂಡಿದ್ದನು. ಸಹದೇವನಿಗೆ ಮುಂದೆ ಆಗುವುದೆಲ್ಲವು ಗೊತ್ತಾಗುತ್ತಿತ್ತು, ಮಹಾಭಾರತ ಯುದ್ಧ ಯಾವಾಗ ನಡೆಯುತ್ತದೆ, ಯಾರ ಅಂತ್ಯಕ್ಕೆ ಯಾರು ಕಾರಣರಾಗುತ್ತಾರೆ ಎಂದು ಸಹದೇವನಿಗೆ ಮೊದಲೇ ಗೊತ್ತಾಗಿತ್ತು, ಹಾಗೂ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಸಹ ಸಹದೇವನಿಗೆ ಗೊತ್ತಿತ್ತು, ಆದರೆ ಶ್ರೀಕೃಷ್ಣನು, ಯುದ್ಧದ ಬಗ್ಗೆ ಯಾರಿಗಾದರೂ ಹೇಳಿದರೆ, ನೀನು ಸಾಯುವ ಹಾಗೆ ಆಗಲಿ ಎಂದು ಶಾಪ ನೀಡಿರುತ್ತಾನೆ.
ಐದನೆಯದಾಗಿ ಸಂಜಯ.. ಸಂಜಯನಿಗೆ ಯುದ್ಧದಲ್ಲಿ ಏನಾಗುತ್ತದೆ ಎನ್ನುವ ವಿಚಾರ ಗೊತ್ತಿತ್ತು ಎನ್ನಲಾಗಿದೆ. ವೇದ ವ್ಯಾಸ ಮಹರ್ಷಿಗಳು, ಸಂಜಯನಿಗೆ ದಿವ್ಯ ದರ್ಶನ ನೀಡಿದ್ದರು, ಹಾಗಾಗಿ ಸಂಜಯ ಅರಮನೆಯಲ್ಲೇ ಕುಳಿತು ಯುದ್ಧವನ್ನು ವೀಕ್ಷಿಸಬಹುದಿತ್ತು, ಸಂಜಯನು, ಶ್ರೀಕೃಷ್ಣನ ಭಕ್ತನಾಗಿದ್ದನು ಹಾಗೂ ಧೃತರಾಷ್ಟ್ರನ ಸಾರಥಿ ಸಹ ಆಗಿದ್ದನು ಎನ್ನಲಾಗಿದೆ. ಹಾಗಾಗಿ ಭಕ್ತಿಯಿದ್ದರು ಸಹ, ಕೆಲಸದಲ್ಲಿ ಹಸ್ತಕ್ಷೇಪ ಮಾಡಲಿಲ್ಲ.
ಆರನೇಯದಾಗಿ ದ್ರೋಣಾಚಾರ್ಯರು.. ಶ್ರೀಕೃಷ್ಣನು ಎಲ್ಲೆಲ್ಲಿ ಇರುತ್ತಾನೋ ಅಲ್ಲೆಲ್ಲಾ ವಿಜಯ ಇರುತ್ತದೆ ಎನ್ನುವುದು, ಕೌರವರು ಮತ್ತು ಪಾಂಡವರು ಇಬ್ಬರ ಗುರುಗಳು ಆಗಿದ್ದ ದ್ರೋಣಾಚಾರ್ಯರಿಗೆ ಗೊತ್ತಿತ್ತು. ದ್ರೋಣಾಚಾರ್ಯರಿಗೆ ದಿವ್ಯದೃಷ್ಟಿ ಇತ್ತು, ಬೃಹಸ್ಪತಿಯೇ ದ್ರೋಣಾಚಾರ್ಯರಾಗಿ ಜನ್ಮ ಪಡೆದರು ಎನ್ನುವ ನಂಬಿಕೆ ಸಹ ಇದೆ.
ಏಳನೆಯದಾಗಿ ಕೃಪಾಚಾರ್ಯರು, ಇವರು ಯುದ್ಧದ ಫಲಿತಾಂಶವನ್ನು ನಿರೀಕ್ಷೇ ಮಾಡಿದ್ದರು ಎನ್ನಲಾಗಿದೆ. ಇವರಿಗು ದಿವ್ಯದೃಷ್ಟಿ ಇತ್ತು ಎಂದು ಹೇಳಲಾಗುತ್ತದೆ..ಏಕೆಂದರೆ ದಿವ್ಯ ದೃಷ್ಟಿ ಇರುವವರು ಮಾತ್ರ ಕೃಷ್ಣನ ದಿವ್ಯದರ್ಶನ ನೋಡಲು ಸಾಧ್ಯ. ಕೃಪಾಚಾರ್ಯರು ಅದನ್ನು ನೋಡಿದ್ದರು ಎಂದು ಹೇಳಲಾಗಿದೆ.
Comments are closed.