ಹೊಸ ವಿಭಿನ್ನ ಕಥೆಯ ಮೂಲಕ ಮತ್ತೆ ರೀ ಎಂಟ್ರಿ ಗೆ ಸಿದ್ದವಾದ ನಟ ಸಿದ್ದಾರ್ಥ
ಕನ್ನಡ ಕಿರುತೆರೆಯ ಫೇವರೆಟ್ ನಟ ವಿಜಯ್ ಸೂರ್ಯ. ಅಗ್ನಿಸಾಕ್ಷಿ ಧಾರಾವಾಹಿ ಮುಗಿದಿದ್ದರು ಸಹ ಜನರು ಈಗಲೂ ಇವರ ಪಾತ್ರವನ್ನು ಮರೆತಿಲ್ಲ. ವಿಜಯ್ ಸೂರ್ಯ ಅವರು ಹೊರಗಡೆ ಹೋದರೆ ಈಗಲೂ ಸಿದ್ಧಾರ್ಥ್ ಎಂದು ಗುರುತಿಸುವವರೆ ಹೆಚ್ಚು. ಅಗ್ನಿಸಾಕ್ಷಿ ಧಾರಾವಾಹಿ ಸತತ 7 ವರ್ಷಗಳ ಕಾಲ ಪ್ರಸಾರವಾಗಿತ್ತು. ಈ ಧಾರಾವಾಹಿ ನಂತರ ವಿಜಯ್ ಸೂರ್ಯ ಅವರು ಪ್ರೇಮಲೋಕ ಧಾರಾವಾಹಿ ಯಲ್ಲಿ ನಾಯಕನಾಗಿ ನಟಿಸಿದ್ದರು ಸಹ ಆ ಧಾರಾವಾಹಿ ಅಂದುಕೊಂಡಷ್ಟರ ಮಟ್ಟಿಗೆ ಯಶಸ್ಸು ಪಡೆಯಲಿಲ್ಲ. ಅರ್ಧಕ್ಕೆ ಈ ಧಾರಾವಾಹಿ ನಿಂತುಹೋಯಿತು. ಆದರೆ ಈಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ನಟ ವಿಜಯ್ ಸೂರ್ಯ..
ಅಗ್ನಿಸಾಕ್ಷಿ ಗಿಂತ ಮೊದಲು ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಗೆಸ್ಟ್ ರೋಲ್ ನಲ್ಲಿ ನಟಿಸಿದ್ದರು ವಿಜಯ್ ಸೂರ್ಯ, ಅದಾದ ಬಳಿಕ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸಹ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ವಿಜಯ್ ಸೂರ್ಯ ಒಂದೊಳ್ಳೆಯ ರೋಲ್ ನಲ್ಲಿ ಯಾವಾಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಡಾಕ್ಟರ್ ಕರ್ಣ ಧಾರಾವಾಹಿಯ ಮೂಲಕ ವಿಜಯ್ ಸೂರ್ಯ ಅವರು ಕಿರುತೆರೆಗೆ ವಾಪಸ್ ಬರುತ್ತಿದ್ದಾರೆ. ಈ ಧಾರಾವಾಹಿಯ ಕೆಲಸ ಸೈಲೆಂಟ್ ಆಗಿ ನಡೆಯುತ್ತಿದ್ದು, ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ. ವಿಜಯ್ ಸೂರ್ಯ ಅವರು ನಾಯಕನಾಗಿದ್ದು, ಉಳಿದ ಪಾತ್ರಗಳ ಕಾಸ್ಟಿಂಗ್ ನಡೆಯುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಡಾಕ್ಟರ್ ಕರ್ಣ ಧಾರವಾಹಿಯ ಮೊದಲ ಪ್ರೋಮೋ ಸಹ ರೆಡಿಯಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ, ಕೆಲವೆ ದಿನಗಳಲ್ಲಿ ಡಾಕ್ಟರ್ ಕರ್ಣ ಪ್ರೋಮೋ ಬಿಡುಗಡೆ ಆಗಲಿದೆ.
ಇನ್ನು ಕ್ ಧಾರವಾಹಿಯ ಬಗ್ಗೆ ಹೇಳುವುದಾದರೆ, ಇದು ಮರಾಠಿಯ ದೇವ್ ಮನುಸ್ ಧಾರಾವಾಹಿಯ ರಿಮೇಕ್ ಆಗಿದೆ, ಇದೊಂದು ನೈಕ ಘಟನೆ ಆಧಾರಿತ ಕಥೆಯಾಗಿದೆ. ಇದು ಸಂತೋಷ್ ಪೋಲ್ ಹೆಸರಿನ ಒಬ್ಬ ಕ್ರಿಮಿನಲ್ ನ ಕಥೆಯಾಗಿದೆ. ಈತ ಸತಾರಾ ಎನ್ನುವ ಊರಿನಲ್ಲಿ ನಕಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ, 13 ವರ್ಷಗಳಲ್ಲಿ 6 ಜನರನ್ನು ಕೊಲೆ ಮಾಡಿದ್ದನು, ಈತ ಕೊಲೆ ಮಾಡಿದ 6 ಜನರು ಸಹ ಹೆಣ್ಣುಮಕ್ಕಳೇ ಆಗಿದ್ದರು. ಮರಾಠಿಯಲ್ಲಿ ಈ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲಿ ಈ ಧಾರಾವಾಹಿ ಹೇಗಿರಲಿದೆ ಎಂದು ಕಾದು ನೋಡಬೇಕಿದೆ. ಈ ಧಾರಾವಾಹಿಯನ್ನು ಕೆ.ಎಸ್.ರಾಮ್ ಜಿ ಅವರು ನಿರ್ಮಾಣ ಮಾಡುತ್ತಿದ್ದು, ಜೀಕನ್ನಡ ವಾಹಿನಿಯಲ್ಲಿ ಧಾರಾವಾಹಿಯಲ್ಲಿ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ. ಧಾರಾವಾಹಿ ತಂಡದಿಂದ ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದಾರೆ ಅಭಿಮಾನಿಗಳು.
Comments are closed.