ಒಂದು ಕಾಲದಲ್ಲಿ ಕನ್ನಡಿಗರ ಮನಗೆದ್ದಿದ್ದ ಟಾಪ್ ನಟಿ ವಿದ್ಯಾಶ್ರೀ ಈಗ ಹೇಗಿದ್ದಾರೆ ಗೊತ್ತೇ?? ಇದೀಗ ಏನು ಮಾಡುತ್ತಿದ್ದಾರೆ ಗೊತ್ತೇ??
ನಮ್ಮ ದಕ್ಷಿಣ ಭಾರತ ಚಿತ್ರರಂಗವು 80 ಮತ್ತು 90ರ ದಶಕದಲ್ಲಿ ಸಾಕಷ್ಟು ಅದ್ಭುತವಾದ ನಟಿಯರನ್ನು ಕಂಡಿದೆ. ಆಗಿನ ಕಾಲದ ನಟಿಯರು ಪ್ರತಿಭಾನ್ವಿತರಾಗಿದ್ದರು, ಹಾಗೆಯೇ ಪರ್ಫಾರ್ಮೆನ್ಸ್ ಗೆ ಒತ್ತು ಕೊಡುತ್ತಿದ್ದರು. ಹೆಚ್ಚಾಗಿ ಮಹಿಳಾ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹಾಗೆಯೇ ಸ್ಟಾರ್ ನಟ ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದರು. ಆ ರೀತಿಯ ನಟಿಯರು ಈಗ ಬರುವುದು ತುಂಬಾ ಕಡಿಮೆ. ಇಂದು ನಾವು ನಿಮಗೆ ಅಂತಹ ನಟಿಯೊಬ್ಬರ ಬಗ್ಗೆ ತಿಳಿಸಲಿದ್ದೇವೆ. ಇಂದು ನಾವು ಹೇಳಲು ಹೊರಟಿರುವದು ನಟಿ ವಿದ್ಯಾಶ್ರೀ ಅವರ ಬಗ್ಗೆ. ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಇವರು ಈಗ ಹೇಗಿದ್ದಾರೆ? ಏನ್ ಮಾಡ್ತಿದ್ದಾರೆ ಗೊತ್ತಾ?
ನಟಿ ವಿದ್ಯಾಶ್ರೀ ಮೂಲತಃ ಚೆನ್ನೈನವರು, ಇವರು ಹುಟ್ಟಿ ಬೆಳೆದದ್ದು ಎಲ್ಲವೂ ಸಹ ಅಲ್ಲಿಯೇ. ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 1986 ರಲ್ಲಿ, ತಮಿಳಿನ ಕೊಡೈ ಮಸಾಯ್ ಎನ್ನುವ ಸಿನಿಮಾ ಇಂದ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇವರೊಬ್ಬ ನಟಿಯಷ್ಟೆ ಅಲ್ಲ, ಅದ್ಭುತವಾದ ನೃತ್ಯಗಾರ್ತಿ ಸಹ ಆಗಿದ್ದರು ವಿದ್ಯಾಶ್ರೀ. ಭಾರತನಾಟ್ಯಮ್ ನಲ್ಲಿ ಪ್ರವೀಣತೆ ಹೊಂದಿದ್ದರು. ಸಿನಿಮಾ ನಟನೆಯ ಜೊತೆಗೆ 200ಕ್ಕಿಂತ ಹೆಚ್ಚು ಕ್ಲಾಸಿಕಲ್ ಡ್ಯಾನ್ಸ್ ಶೋ ಗಳನ್ನು ಸಹ ನೀಡಿದ್ದಾರೆ ಈ ನಟಿ. ವಿದ್ಯಾಶ್ರೀ ಅವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಾದ ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ಇವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ರಾಘವೇಂದ್ರ ರಾಜ್ ಕುಮಾರ್ ಅವರ ಅನುಕೂಲಕ್ಕೊಬ್ಬ ಗಂಡ ಸಿನಿಮಾ ಮೂಲಕ.
ಅದಾದ ಬಳಿಕ, ಕೊಲ್ಲೂರು ಕಾಳ, ರೋಲ್ಕಾಲ್ ರಾಮಾಕೃಷ್ಣ, ಪುಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ, ಚಿರಂಜೀವಿ ರಾಜಾಗೌಡ, ಹೀಗೆ 6 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಟ್ಟಾರೆಯಾಗಿ 45ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದು, ಅವುಗಳಲ್ಲಿ ಹೆಚ್ಚಿನವು ಮಲಯಾಳಂ ಸಿನಿಮಾ ಆಗಿದೆ. ಇದ್ದಕ್ಕಿದ್ದ ಹಾಗೆ ಚಿತ್ರರಂಗ ತೊರೆದ ಈ ನಟಿ ಈಗ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಎಲ್ಲಾ ಅಭಿಮಾಣಿಗಳಲ್ಲೂ ಇದೆ. 1996ರಲ್ಲಿ ರಾಜ್ ಎನ್ನುವವರೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು ವಿದ್ಯಾಶ್ರೀ. ಈ ದಂಪತಿಗೆ ಶಶಾಂಕ್ ಹೆಸರಿನ ಮಗನಿದ್ದಾನೆ. ಮದುವೆಯಾದ ಬಳಿಕ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿಬಿಟ್ಟರು ವಿದ್ಯಾಶ್ರೀ. ಪ್ರಸ್ತುತ ಇವರು ಯು.ಎಸ್ ನ ಸೌತ್ ಕೆರೋಲಿನನಲ್ಲಿ ನೆಲೆಸಿದ್ದು, ನೃತ್ಯಾಂಜಲಿ ಹೆಸರಿನ ಒಂದು ಡ್ಯಾನ್ಸ್ ಸ್ಕೂಲ್ ನಡೆಸುತ್ತಿದ್ದಾರೆ.
Comments are closed.