Neer Dose Karnataka
Take a fresh look at your lifestyle.

ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಆಗಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ??

ಈ ಪ್ರಪಂಚದಲ್ಲಿ ಹಲವು ಜಾತಿ ಮತಗಳಿಗೆ, ಹಲವು ಧರ್ಮಗಳಿವೆ. ಎಣಿಸಲು ಸಾಧ್ಯವಾದಷ್ಟು ಮತ, ಧರ್ಮಗಳು, ಆಚರಣೆಗಳು ಈ ಪ್ರಪಂಚದಲ್ಲಿವೆ. ಇವುಗಳಲ್ಲಿ ನಮ್ಮ ಭಾರತ ದೇಶದಲ್ಲಿ ಸಹ ಸಾಕಷ್ಟು ಬೇರೆ ಬೇರೆ ಜಾತಿ, ಮತಗಳು, ಧರ್ಮಗಳು ಇವೆ. ಆದರೆ ಈ ದೇಶದಲ್ಲಿ ಎಲ್ಲಾ ಜಾತಿ ಧರ್ಮದವರು ಸಹ ಅಣ್ಣ ತಮ್ಮಂದಿರ ಹಾಗೆ ಅನ್ಯೋನ್ಯತೆಯಿಂದ ಬಾಳಲುತ್ತಿದ್ದಾರೆ. ನಮ್ಮ ಭಾರತ ದೇಶವನ್ನು ವಿವಿಧತೆಯಲ್ಲಿ ಏಕತೆ ಇರುವ ದೇಶ ಎಂದು ಕರೆಯಲಾಗುತ್ತದೆ. ಇಂದು ನಾವು ನಿಮಗೆ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಗೊಂಡಿರುವ ಸಿನಿಮಾ ನಾಯಕಿಯರ ಬಗ್ಗೆ ತಿಳಿಸುತ್ತೇವೆ..

ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದು ಖ್ಯಾತಿ ಪಡೆದಿರುವವರು ನಟಿ ನಯನತಾರ. ಇವರು ಮೂಲತಃ ಕ್ರೈಸ್ತ ಮತದವರು, ಇವರ ಹೆಸರು ಡಯಾನ ಕುರಿಯನ್, ಆದರೆ ಚಿತ್ರರಂಗಕ್ಕೆ ಬಂದ ನಂತರ ನಯನತಾರ ಎಂದು ಹಿಂದೂ ಹೆಸರಿಗೆ ಬದಲಾಯಿಸಿಕೊಂಡರು. ಈಗ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಎಲ್ಲಾ ಭಾಷೆಗಳಲ್ಲೂ ನಟಿಸಿ, ಫೇಮಸ್ ಆಗಿದ್ದ ನಟಿ ಖುಷ್ಬೂ ಅವರು ಹುಟ್ಟಿದ್ದು ಮುಸ್ಲಿಂ ಕುಟುಂಬದಲ್ಲಿ. ಇವರ ಮೂಲ ಹೆಸರು ನಖತ್ ಖಾನ್. ಚಿತ್ರರಂಗಕ್ಕೆ ಬಂದ ನಂತರ್ಸ್ ಖುಷ್ಬೂ ಎಂದು ಹೆಸರು ಬದಲಾಯಿಸಿಕೊಂಡರು. ಜೊತೆಗೆ ಮದುವೆಯಾದ ಮೇಲೆ ಹಿಂದೂ ಧರ್ಮಕ್ಕೆ ಮತಾಂತರವಾದರು. ಇನ್ನು ಕನ್ನಡದ ಮತ್ತೊಬ್ಬ ನಟಿ ಮೋನಿಕಾ ಹುಟ್ಟಿದ್ದು ಹಿಂದೂ ಕುಟುಂಬದಲ್ಲಿ. ಆದರೆ ಮುಸ್ಲಿಂ ಧರ್ಮದ ಮೇಲೆ ಇವರಿಗೆ ಆಕರ್ಷಣೆ ಶುರುವಾಗಿ, ರಹಿಮಾ ಎಂದು ಹೆಸರು ಬದಲಾಯಿಸಿಕೊಂಡು, ಮುಸ್ಲಿಂ ಧರ್ಮಕ್ಕೆ ಮತಾಂತರವಾದರು.

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಬಾಲಿವುಡ್ ನಲ್ಲಿ ಮೋಡಿ ಮಾಡಿದವರು ನಟಿ ನಗ್ಮಾ. ಆಗಿನ ಕಾಲದ ಸ್ಟಾರ್ ನಟಿಯಾಗಿ, ಬಹುಬೇಡಿಕೆ ಇವರಿಗಿತ್ತು. ಇವರ ತಂದೆ ಹಿಂದೂ ಮತ್ತು ತಾಯಿ ಮುಸ್ಲಿಂ. ಆದರೆ ನಗ್ಮಾ ಅವರು ಈಗ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಿದ್ದಾರೆ. ಬಾಲಿವುಡ್ ಖ್ಯಾತ ಜೋಡಿ ಹೇಮಮಾಲಿನಿ ಮತ್ತು ಧರ್ಮೇಂದ್ರ ಅವರು. ಇವರಿಬ್ಬರು ಹುಟ್ಟಿ ಬೆಳೆದದ್ದು ಹಿಂದೂ ಧರ್ಮದಲ್ಲಿ, ಆದರೆ ಮುಸ್ಲಿಂ ಧರ್ಮದ ಮೇಲೆ ಆಕರ್ಷಿತರಾಗಿ ಇಬ್ಬರು ಮುಸ್ಲಿಂ ಧರ್ಮಕ್ಕೆ ಮತಾಂತವಾಗಿದ್ದಾರೆ.

ಖ್ಯಾತ ನಟಿ ಆಯೇಷಾ ಹಿಂದೂ ಧರ್ಮದಲ್ಲಿ ಹುಟ್ಟಿ ಬೆಳೆದವರು. ಆದರೆ ನಟ ಫರ್ಹಾನ್ ಅವರೊಡನೆ ಮದುವೆಯಾದ ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಕನ್ನಡದ ಖ್ಯಾತ ಹಿರಿಯನಟಿ ಮಹಾಲಕ್ಷ್ಮಿ ಅವರು ಹುಟ್ಟಿ ಬೆಳೆದದ್ದು ಹಿಂದೂ ಧರ್ಮದಲ್ಲಿ, ಇವರು ಎರಡು ಬಾರಿ ಮದುವೆಯಾಗಿ ವಿಚ್ಛೇದನವಾಯಿತು, ಅದಾದ ಬಳಿಕ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾರೆ.

Comments are closed.