ಕೊಹ್ಲಿ, ರೋಹಿತ್ ಧೋನಿ ರವರ ದಾಖಲೆಯನ್ನು ಬ್ರೇಕ್ ಮಾಡಿದ ಯುವ ಆಟಗಾರ ಪಡಿಕ್ಕಲ್. ಯಾವ ದಾಖಲೆ ಗೊತ್ತೇ??
ದೇವದತ್ ಪಡಿಕ್ಕಲ್ ಸಧ್ಯದ ಐಪಿಎಲ್ ಪಂದ್ಯಗಳಲ್ಲಿ ನಕ್ಷತ್ರದಂತೆ ಶೈನ್ ಆಗುತ್ತಿರುವ ಕನ್ನಡ ನಾಡಿನ ಪ್ರತಿಭೆ. ಕಳೆದ ವರ್ಷ ಆರ್.ಸಿ.ಬಿ ತಂಡದ ಪರವಾಗಿ ಉತ್ತಮವಾದ ಪ್ರದರ್ಶನ ನೀಡಿದ್ದ ದೇವದತ್ ಪಡಿಕ್ಕಲ್, ಕರ್ನಾಟಕದ ಎಲ್ಲಾ ಹುಡುಗಿಯರ ಕ್ರಶ್ ಆಗಿದ್ದರು. ಇವರ ಬ್ಯಾಟಿಂಗ್ ಸ್ಟೈಲ್ ನೋಡಿ ಸಾಕಷ್ಟು ಜನರು ಫಿದಾ ಆಗಿದ್ದರು. ಪಡಿಕ್ಕಲ್ ಆದಷ್ಟು ಬೇಗ ಇಂಡಿಯನ್ ಟೀಮ್ ಸೆಲೆಕ್ಟ್ ಆಗಲಿ ಎನ್ನುವುದು ಹಲವರ ಆಸೆ ಆಗಿತ್ತು. ಈ ವರ್ಷದ ಐಪಿಎಲ್ ಆವೃತ್ತಿಯಲ್ಲಿ ದೇವದತ್ ಪಡಿಕ್ಕಲ್ ಅವರು ರಾಜಸ್ತಾನ್ ರಾಯಲ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಕೋಹ್ಲಿ, ಧೋನಿ ಮತ್ತು ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ. ಅದು ಯಾವ ದಾಖಲೆ ಗೊತ್ತಾ?
ಐಪಿಎಲ್ ನ ಶೈನಿಂಗ್ ಸ್ಟಾರ್ ಆಗಿರುವ ದೇವದತ್ ಪಡಿಕ್ಕಲ್ ಕಳೆದ ಪಂದ್ಯದಲ್ಲಿ ಭರ್ಜರಿಯಾದ ರನ್ ಗಳನ್ನು ಗಳಿಸುವ ಮೂಲಕ ಐಪಿಎಲ್ ನಲ್ಲಿ 1000 ರನ್ ಗಳನ್ನು ಕಂಪ್ಲೀಟ್ ಮಾಡಿದ್ದಾರೆ. ಅದುವು ದೇವದತ್ ಪಡಿಕೆಳಲ್ 1000 ರನ್ ಗಳನ್ನು ಕಂಪ್ಲೀಟ್ ಮಾಡಿರುವುದು ಕೇವಲ 35 ಇನ್ನಿಂಗ್ಸ್ ಗಳಲ್ಲಿ. ರಾಜಸ್ತಾನ್ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆದ ಸಮರದಲ್ಲಿ ಅದ್ಭುತವಾದ್ ಪ್ರದರ್ಶನ ನೀಡಿ, ಅಂದು 1000 ರನ್ ಗಳನ್ನು ಕಂಪ್ಲೀಟ್ ಮಾಡಿದರು. ಇಷ್ಟು ಕಡಿಮೆ ಇನ್ನಿಂಗ್ಸ್ ಗಳಲ್ಲಿ 1000 ರನ್ ಗಳನ್ನು ಕಂಪ್ಲೀಟ್ ಮಾಡಿದ ಭಾರತದ ಮೂರನೇ ಆಟಗಾರ ಎನ್ನಿಸಿಕೊಂಡಿದ್ದಾರೆ ದೇವದತ್ ಪಡಿಕ್ಕಲ್. ಹೀಗೆ ಅತಿಕಡಿಮೆ ಇನ್ನಿಂಗ್ಸ್ ನಲ್ಲಿ 1000 ಸಾವಿರ ರನ್ ಕಂಪ್ಲೀಟ್ ಮಾಡಿರುವವರಲ್ಲಿ ಮೊದಲಿಗರು ಗಾಡ್ ಆಫ್ ಕ್ರಿಕೆಟ್ ಸಚಿನ್ ತ
ತೆಂಡೂಲ್ಕರ್ ಅವರು, 31 ಇನ್ನಿಂಗ್ಸ್ ಗಳಲ್ಲಿ 1000 ರನ್ ಕಂಪ್ಲೀಟ್ ಮಾಡಿದ್ದರು, 2010ರಲ್ಲಿ ಈ ಸಾಧನೆ ಮಾಡಿದ್ದರು.
ನಂತರ 2ನೇ ಸ್ಥಾನದಲ್ಲಿರುವವರು, ಸಿ.ಎಸ್.ಕೆ ತಂಡದ ಪ್ರಮುಖ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರು, 34 ಇನ್ನಿಂಗ್ಸ್ ಗಳಲ್ಲಿ 1000 ರನ್ ಗಳಿಸಿದ್ದರು, 3ನೇ ಸ್ಥಾನದಲ್ಲಿದ್ದವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ರಿಷಬ್ ಪಂತ್, ಇವರು ಸಹ 35 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಇದೀಗ ಇವರ ಜೊತೆಯಲ್ಲೇ 3ನೇ ಸ್ಥಾನಕ್ಕೆ ಬಂದಿದ್ದಾರೆ ದೇವದತ್ ಪಡಿಕ್ಕಲ್. ಇನ್ನುಳಿದಂತೆ, ಗೌತಮ್ ಗಂಭೀರ್ ಅವರು 1000 ರನ್ ಕಂಪ್ಲೀಟ್ ಮಾಡಲು 36 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಎಂ.ಎಸ್.ಧೋನಿ ಅವರು 37 ಇನ್ನಿಂಗ್ಸ್, ರೋಹಿತ್ ಶರ್ಮಾ 37, ರಹಾನೆ 37, ಗಂಗೂಲಿ 38, ಕೆ.ಎಲ್.ರಾಹುಲ್ 38, ವಿರಾಟ್ ಕೋಹ್ಲಿ ಅವರು 45 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.
Comments are closed.