Neer Dose Karnataka
Take a fresh look at your lifestyle.

ಕಳಪೆ ಫಾರ್ಮ್ ಇಂದ ಇಂಡಿಯನ್ ಕ್ರಿಕೆಟ್ ಟೀಮ್ ಇಂದ ಹೊರಬಿದ್ದ ಈ ಆಟಗಾರರು, ಐಪಿಎಲ್ ಇಂದ ಮತ್ತೊಮ್ಮೆ ಇಂಡಿಯನ್ ಟೀಮ್ ಗೆ ಎಂಟ್ರಿ ಕೊಡ್ತಾರಾ?

ಕ್ರಿಕೆಟ್ ನಲ್ಲಿ ಒಳ್ಳೆಯ ಫಾರ್ಮ್ ನಲ್ಲಿರುವ ಬ್ಯಾಟ್ಸ್ಮನ್ ಮತ್ತು ಬೌಲರ್ ಗಳಿಗೆ ಹೆಚ್ಚಿನ ಬೆಲೆ. ಈ ಬಾರಿಯ ಐಪಿಎಲ್ 15ನೇ ಆವೃತ್ತಿಯಲ್ಲಿ ಹಲವು ಆಟಗಾರರು ತಮ್ಮ ಫಾರ್ಮ್ ಕಳೆದುಕೊಂಡಿದ್ದಾರೆ. ಫಾರ್ಮ್ ಕಳೆದುಕೊಂಡು ಮುಂದಿನ ಆವೃತ್ತಿಯಲ್ಲಿ ಇವರು ಇರುತ್ತಾರೋ ಇಲ್ಲವೋ ಎನ್ನುವ ಹಾಗೆ ಆಗಿದೆ. ಆದರೆ ಇನ್ನೂ ಕೆಲವು ಆಟಗಾರರು, ಈ ಹಿಂದೆ ಕಳಪೆ ಎನ್ನಿಸಿಕೊಂಡಿರುವವರು, ಈಗ ಒಳ್ಳೆಯ ಫಾರ್ಮ್ ಗೆ ಬಂದಿದ್ದು, ಇಂಡಿಯನ್ ಕ್ರಿಕೆಟ್ ಟೀಮ್ ಗೆ ಇವರು ಸೆಲೆಕ್ಟ್ ಆಗುವುದು ಪಕ್ಕಾ ಎನ್ನುತ್ತಿದೆ ಮೂಲಗಳು. ಹಾಗಿದ್ದರೆ ಕಳಪೆ ಎನ್ನಿಸಿಕೊಂಡು ಈಗ ಫಾರ್ಮ್ ಗೆ ಬಂದಿರುವ ಆ 5 ಜನ ಬ್ಯಾಟ್ಸ್ಮನ್ ಗಳು ಯಾರು ಗೊತ್ತಾ?

ಟಾಪ್ 5 ಸ್ಥಾನದಲ್ಲಿ ಇರುವವರು ಶಿವಂ ದುಬೆ. ಮೂಲತಃ ಮುಂಬೈ ಮೂಲದವರಾದ ಇವರು, ಒಂದೆರಡು ವರ್ಷಗಳ ಕಾಲ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡದ ಪರವಾಗಿ ಆಡಿದ್ದರು, ಪ್ರಸ್ತುತ ಇವರು ಸಿ.ಎಸ್.ಕೆ ತಂಡದ ಆಡುತ್ತಿದ್ದಾರೆ. ಶಿವಂ ದುಬೆ ಆಲ್ ರೌಂಡರ್, ಈ ಹಿಂದೆ ಇಂಡಿಯನ್ ಕ್ರಿಕೆಟ್ ಟೀಮ್ ಗೆ ಸೆಲೆಕ್ಟ್ ಆಗಿದ್ದರು. ಈಗ ಸಿ.ಎಸ್.ಕೆ ತಂಡದ ಪರವಾಗಿ ಇವರು ಆಡುತ್ತಿರುವ ಪರಿ ನೋಡಿ ಮತ್ತೊಮ್ಮೆ ಇಂಡಿಯನ್ ಕ್ರಿಕೆಟ್ ಟೀಮ್ ಗೆ ಸೆಲೆಕ್ಟ್ ಆಗಲಿದ್ದಾರೆ ಎನ್ನಲಾಗುತ್ತಿದೆ.

ಟಾಪ್ 4 ಸ್ಥಾನದಲ್ಲಿರುವವರು ಉಮೇಶ್ ಯಾದವ್..ಇವರು ಮೊದಲೆಲ್ಲಾ ರೆಡ್ ಬಾಲ್ ಕ್ರಿಕೆಟ್ ಮಾತ್ರ ಆಡುತ್ತಿದ್ದರು, ಆದರೆ ಈಗ ವೈಟ್ ಬಾಲ್ ಕ್ರಿಕೆಟ್ ಸಹ ಆಡಲು ಶುರು ಮಾಡಿದ್ದು, ಐಪಿಎಲ್ ನಲ್ಲಿ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದಾರೆ..ಹಾಗಾಗಿ ಉಮೇಶ್ ಯಾದವ್ ಅವರು ಈ ಬಾರಿ ಇಂಡಿಯನ್ ಕ್ರಿಕೆಟ್ ಟೀಮ್ ಗೆ ಸೆಲೆಕ್ಟ್ ಆಗಬಹುದು ಎನ್ನಲಾಗುತ್ತಿದೆ.

ಟಾಪ್ 3ನೇ ಸ್ಥಾನದಲ್ಲಿ ಇರುವವರು ಕೃನಾಲ್ ಪಾಂಡ್ಯ .. ಇವರು ಕಳೆದ ಬಾರಿ ಇಂಡಿಯನ್ ಕ್ರಿಕೆಟ್ ಟೀಮ್ ನಲ್ಲಿದ್ದರು, ಆದರೆ ಕಳಪೆ ಪ್ರದರ್ಶನ ನೀಡಿದ ಕಾರಣ ಟೀಮ್ ಇಂದ ಹೊರಬಂದಿದ್ದರು. ಆದರೆ ಈ ವರ್ಷದ ಐಪಿಎಲ್ ನಲ್ಲಿ, ಎಡಗೈ ಸ್ಪಿನ್ನರ್ ಮತ್ತು ಆಲ್ ರೌಂಡರ್ ಆಗಿರುವ ಇವರು ಲಕ್ನೌ ಸೂಪರ್ ಜೈಯಂಟ್ಸ್ ಟೀಮ್ ನಲ್ಲಿ ನೀಡುತ್ತಿರುವ ಪ್ರದರ್ಶನ ನೋಡಿ, ಇವರು ಮತ್ತೆ ಇಂಡಿಯನ್ ಕ್ರಿಕೆಟ್ ಟೀಮ್ ಗೆ ಬರಬಹುದು ಎನ್ನಲಾಗುತ್ತಿದೆ.

ಟಾಪ್ 2ನೇ ಸ್ಥಾನದಲ್ಲಿ ಇರುವವರು ರಾಹುಲ್ ಚಾಹರ್..ಇವರು ಲೆಗ್ ಸ್ಪಿನ್ನರ್, ಟಿ20 ವಿಶ್ವಕಪ್ ನಲ್ಲಿ ಭಾಗವಹಿಸಿದ್ದರು. ಇಂಡಿಯನ್ ಕ್ರಿಕೆಟ್ ಟೀಮ್ ನಲ್ಲಿದ್ದ ಇವರು, ಕಳಪೆ ಫಾರ್ಮ್ ಇಂದ ಹೊರಗೆ ಬಂದಿದ್ದರು. ಆದರೆ ಪ್ರಸ್ತುತ ಪಂಜಾಬ್ ಕಿಂಗ್ಸ್ ಟೀಮ್ ನಲ್ಲಿ, ಇವರು ನೀಡುತ್ತಿರುವ ಉತ್ತಮವಾದ ಬೌಲಿಂಗ್ ಪ್ರದರ್ಶನ ನೋಡಿ, ಮತ್ತೊಮ್ಮೆ ಇವರು ಇಂಡಿಯನ್ ಕ್ರಿಕೆಟ್ ಟೀಮ್ ಗೆ ಬರಬಹುದು ಎನ್ನಲಾಗುತ್ತಿದೆ.

ಟಾಪ್ 1ನೇ ಸ್ಥಾನದಲ್ಲಿ ಇರುವವರು ದಿನೇಶ್ ಕಾರ್ತಿಕ್..ಇವರು ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಆಗಿದ್ದರು. 2019ರ ನಂತರ ಇವರು ಇಂಡಿಯನ್ ಕ್ರಿಕೆಟ್ ಟೀಮ್ ನಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಡಿಕೆ ಅವರು ಅತ್ಯುತ್ತಮವಾದ ಫಿನಿಷರ್ ಎಂದು ಹೆಸರು ಪಡೆದಿದ್ದಾರೆ. ಈ ಬಾರಿ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡದ ಪರವಾಗಿ ಅತ್ಯುತ್ತಮವಾದ ಪ್ರದರ್ಶನ ನೀಡುತ್ತಿರುವುದನ್ನು ನೋಡಿ, ಮತ್ತೊಮ್ಮೆ ಇವರು ಇಂಡಿಯನ್ ಕ್ರಿಕೆಟ್ ಟೀಮ್ ಗೆ ಮರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Comments are closed.