ಆರ್ಸಿಬಿ ಪರ ಹೊಸ ದಾಖಲೆ ಬರೆದ ಹರ್ಷಲ್ ಪಟೇಲ್. ಕನ್ನಡಿಗ ವಿನಯ್ ರವರ ದಾಖಲೆ ಬ್ರೇಕ್. ಏನು ಗೊತ್ತೇ??
ಆರ್.ಸಿ.ಬಿ ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್.
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ, ಬೌಲಿಂಗ್ ನಲ್ಲಿ ಅತ್ಯುತ್ತಮವಾದ ಪ್ರದರ್ಶನ ಕೊಡುತ್ತಿದ್ದಾರೆ ಹರ್ಷಲ್ ಪಟೇಲ್. ಆರ್.ಸಿ.ಬಿ ಪಂದ್ಯಗಳಲ್ಲಿ ಎದುರಾಳಿ ತಂಡದ ವಿಕೆಟ್ ಪಡೆದು ಆರ್.ಸಿ.ಬಿ ಗೆಲುವಿನ ಮುಖ್ಯ ಕಾರಣಗಳಲ್ಲಿ ಒಂದಾಗುತ್ತಿದ್ದರೆ ಹರ್ಷಲ್ ಪಟೇಲ್. ಆರ್.ಸಿ.ಬಿ ತಂಡದ ಕಳೆದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಅವರು ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ. ಅದೇನು ಗೊತ್ತಾ?
ಐಪಿಎಲ್ 15ನೇ ಆವೃತ್ತಿಜ್ ಆರ್.ಸಿ.ಬಿ ತಂಡ ಅದ್ಭುತವಾದ ಪ್ರದರ್ಶನವನ್ನು ನೀಡುತ್ತಿದೆ, ಈ ಬಾರಿಯ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಲೈನಪ್ ಎರಡು ಸಹ ಅಚ್ಚುಕಟ್ಟಾಗಿದೆ. ವಿರಾಟ್ ಕೋಹ್ಲಿ, ತಂಡದ ಕ್ಯಾಪ್ಟನ್ ಫಾಫ್ ಅವರು, ಗ್ಲೆನ್ ಮ್ಯಾಕ್ಸ್ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್ ಇವರೆಲ್ಲರೂ ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೆ, ಬೌಲಿಂಗ್ ನಲ್ಲಿ ಹರ್ಷಲ್ ಪಟೇಲ್, ಹರಸಂಗ, ಸಿರಾಜ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿಕೆಟ್ ತೆಗೆಯುವುದರಲ್ಲಿ ಹರ್ಷಲ್ ಪಟೇಲ್ ಅವರು ನಿಸ್ಸಿಮರು ಎಂದೇ ಹೇಳಬಹುದು. ಲಕ್ನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ, ಮುಖ್ಯವಾದ ವಿಕೆಟ್ ಆಗಿದ್ದ, ಕೆ.ಎಲ್.ರಾಹುಲ್ ಅವರ ವಿಕೆಟ್ ತೆಗೆದಿದ್ದು ಹರ್ಷಲ್ ಪಟೇಲ್.
ಕೆ.ಎಲ್.ರಾಹುಲ್ ಅವರ ವಿಕೆಟ್ ಬೀಳಿಸದೆ ಇದ್ದಿದ್ದರೆ, ಆರ್.ಸಿ.ಬಿ ತಂಡ ಗೆಲ್ಲುವುದು ಕಷ್ಟವಾಗುತ್ತಿತ್ತು. ಕೆ.ಎಲ್.ರಾಹುಲ್ ಅವರ ವಿಕೆಟ್ ತೆಗೆಯುವ ಮೂಲಕ ಹರ್ಷಲ್ ಪಟೇಲ್ ಅವರು ಆರ್.ಸಿ.ಬಿ ತಂಡದಲ್ಲಿ ಅತಿಹೆಚ್ಚು ವಿಕೆಟ್ ಗಳನ್ನು ತೆಗೆದ ಬೌಲರ್ ಆಗಿದ್ದಾರೆ. ಈ ಹಿಂದೆ ವಿನಯ್ ಕುಮಾರ್ ಅವರು ಆರ್.ಸಿ.ಬಿ ತಂಡದ ಬೌಲರ್ ಆಗಿ 72 ವಿಕೆಟ್ ಗಳನ್ನು ತೆಗೆದಿದ್ದರು, ಈಗ ಹರ್ಷಲ್ ಪಟೇಲ್ ಅವರು 73 ವಿಕೆಟ್ ಬೀಳಿಸಿ ಹೊಸ ದಾಖಲೆ ಬರೆದಿದ್ದಾರೆ. ಇತ್ತೀಚೆಗೆ ಸಹೋದರಿಯನ್ನು ಕಳೆದುಕೊಂಡ ಹರ್ಷಲ್ ಪಟೇಲ್, ಈ ಸಾಧನೆ ಮಾಡಿದ್ದು, ನಿಜಕ್ಕೂ ಮನಮುಟ್ಟುವಂಥದ್ದು. ಕ್ರಿಕೆಟ್ ನಲ್ಲಿ ಇವರು ಇನ್ನು ಹೆಚ್ಚು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸೋಣ.
Comments are closed.