ಕನ್ನಡದ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋದ ಮೊದಲ ನಟ ಸುದೀಪ್ ಎಂದ ಜಗೇಶ್
ಕನ್ನಡ ಚಿತ್ರರಂಗದ ಹಿರಿಯನಟ ಜಗ್ಗೇಶ್ ಅವರು ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಗ್ಗೇಶ್ ಅವರು ಇತ್ತೀಚೆಗೆ ತೋತಾಪುರಿ ಎನ್ನುವ ಸಿನಿಮಾದಲ್ಲಿ ನಟಿಸಿದ್ದು, ಅದಿತಿ ಪ್ರಭುದೇವ ಇದರಲ್ಲಿ ಜಗ್ಗೇಶ್ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಹಾಡೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು. ಇಂದು ತೋತಾಪುರಿ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಕಿಚ್ಚ ಸುದೀಪ್ ಅವರು ವಿಶೇಷ ಅತಿಥಿಯಾಗಿ ಬಂದು ಟ್ರೈಲರ್ ಲಾಂಚ್ ಮಾಡಿದ್ದಾರೆ.
ಸುದೀಪ್ ಅವರು ಮತ್ತು ಜಗ್ಗೇಶ್ ಅವರು ಆತ್ಮೀಯರು. ಬಹಳ ವರ್ಷಗಳಿಂದ ಇವರಿಬ್ಬರ ನಡುವೆ ಒಳ್ಳೆಯ ಗೆಳೆತನ ಇದೆ. ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಸುದೀಪ್ ಅವರ ಬಗ್ಗೆ ನಟ ಜಗ್ಗೇಶ್ ಅವರು ಒಳ್ಳೆಯ ಮಾತುಗಳನ್ನಾಡಿದ್ದಾರೆ.. “ನಮ್ಮ ಸುದೀಪ್ ಅವರು ಬಂದು ಟ್ರೈಲರ್ ಲಾಂಚ್ ಮಾಡಿದ್ದು ತುಂಬಾ ಖುಷಿ ಕೊಟ್ಟಂತಹ ವಿಷಯ. ಯಾಕಂದ್ರೆ ಇವರು ತುಂಬಾ ಲಕ್ಕಿ ಫೆಲೋ..ಹಿಂದೆ ನಾನು ಮಾಡಿದ್ದ ಪ್ರೀಮಿಯರ್ ಪದ್ಮಿನಿ ಸಿನಿಮಾ ನೋಡಿ, ತುಂಬಾ ಚೆನ್ನಾಗಿದೆ ಅಂತ ಅವರ ಸ್ಟೈಲ್ ನಲ್ಲಿ ದೊಡ್ಡ ಲೆಟರ್ ಬರೆದು ಕಳ್ಸಿದ್ರು. ನಮ್ಮ ಪ್ರೊಡ್ಯೂಸರ್ ನನಗೆ ಫೋನ್ ಮಾಡಿ, ನಿಮ್ಮ ಕಡೆಯಿಂದ ಯಾರಾದರೂ ರಾಜಕಾರಣಿನ ಕರೆಸೋದಕ್ಕೆ ಆಗುತ್ತ ಸರ್ ಅಂತ ಕೇಳಿದ್ರು, ಕೇಳಿದ ಮೇಲೆ ಇಲ್ಲ ಅನ್ನೋಕಾಗಲ್ಲ ಅಂತ ನಾನು ಕೆಲವರಿಗೆ ಫೋನ್ ಮಾಡಿದೆ ಎಲ್ಲರೂ ಬ್ಯುಸಿ ಇದ್ದಾರೆ, ಬರೋಕಾಗಲ್ಲ ಅಂತ ಹೇಳಿದ್ರು.
ಸರಿ ನೀವು ಯಾರನ್ನ ಕರೆದಿದ್ದೀರಾ ಅಂತ ಕೇಳ್ದೆ, ಸುದೀಪ್ ಅವದು ಬರೋದಕ್ಕೆ ಒಪ್ಕೊಂಡಿದ್ದಾರೆ ಅಂತ ಹೇಳಿದ್ರು. ನನಗೆ ಶಾಕ್ ಆಯಿತು. ಒಪ್ಕೊಂಡಿದ್ದಾರಾ ಅಂತ ಕೇಳ್ದೆ. ಆತ ನಮ್ಮ ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋದ ಮೊದಲ ಕನ್ನಡಿಗೆ ಅಂತ ನಾನು ಬಹಳ ಹೆಮ್ಮೆಯಿಂದ ಹೇಳ್ತೀನಿ. ಯಾವುದೋ ಕಾಲದಲ್ಲಿ, ನಾವು ಅಮಿತಾಭ್ ಬಚ್ಚನ್ ಅವರನ್ನ ನೋಡಬೇಕು ಅಂದುಕೊಳ್ಳೋ ಟೈಮ್ ನಲ್ಲಿ, ಅಮಿತಾಭ್ ಬಚ್ಚನ್ ಅವರ ಜೊತೆಯಲ್ಲೇ ಪಾತ್ರ ಮಾಡಿದ್ದ ಆತ..ಅನೇಕ ಪ್ರಥಮ ಗಳನ್ನ ಮಾಡಿದಂಥವನು..” ಎಂದು ಸುದೀಪ್ ಅವರ ಬಗ್ಗೆ ಹೇಳಿದ್ದಾರೆ ನಟ ಜಗ್ಗೇಶ್.
Comments are closed.