ಕೇವಲ ಏಳು ದಿನಗಳಲ್ಲಿ ಕೆಜಿಎಫ್ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ?? ಆಂಧ್ರದಲ್ಲಿ 100 ಕೋಟಿ, ಕರ್ನಾಟಕದಲ್ಲಿ ಎಷ್ಟು ಗೊತ್ತೇ??
ಕೆಜಿಎಫ್2 ಸಿನಿಮಾ ಬಿಡುಗಡೆ ಆಗುವ ಸಮಯದಿಂದಲು ದಾಖಲೆಗಳನ್ನು ಬರೆಯುತ್ತಲೇ ಬಂದಿದೆ. ಸಿನಿಮಾ ಬಿಡುಗಡೆಯಾಗಿ ಒಂದು ವಾರ ಅಂದರೆ 7ದಿನ ಕಳೆದಿದ್ದು, ಈಗಲೂ ಸಹ ಸಿನಿಮಾ ಮೇಲೆ ಜನರಿಗೆ ಇರುವ ಕ್ರೇಜ್ ಕಡಿಮೆಯಾಗಿಲ್ಲ. ವೀಕೆಂಡ್ಸ್ ಮಾತ್ರವಲ್ಲದೆ, ವಾರದ ದಿಮಗಳಲ್ಲಿ ಸಹ ಕೆಜಿಎಫ್2 ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುತ್ತಾ ಬರುತ್ತಿದೆ. ಸಿನಿಮಾ ಬಿಡುಗಡೆಯಾಗಿ ಕೇವಲ ಏಳು ದಿನಕ್ಕೆ 700 ಕೋಟಿ ಕಲೆಕ್ಷನ್ ದಾಟಿದೆ ಕೆಜಿಎಫ್2. ಇಷ್ಟು ಕಡಿಮೆ ಸಮಯದಲ್ಲಿ 700 ಕೋಟಿ ಗಡಿ ದಾಟಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕರ್ನಾಟಕದಲ್ಲಿ ಮಾತ್ರವಲ್ಲದೆ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕ್ರೇಜ್ ಜಾಸ್ತಿಯಿದ್ದು, ಆ ರಾಜ್ಯದಲ್ಲಿಯೇ 100 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ ಕೆಜಿಎಫ್, ತೆಲುಗು ರಾಜ್ಯದಲ್ಲಿ, 100 ಕೋಟಿ ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಆಗಿದೆ ಕೆಜಿಎಫ್2. ಇನ್ನು ತಮಿಳುನಾಡಿನಲ್ಲಿ ಸಹ, ವಿಜಯ್ ಅವರ ಬೀಸ್ಟ್ ಸಿನಿಮಾ ಬಿಡುಗಡೆ ಆಗಿದ್ದರೂ ಸಹ ಕೆಜಿಎಫ್2 ಸಿನಿಮಾ ಹೆಚ್ಚಿನ ಕಲೆಕ್ಷನ್ ಮಾಡಿದೆ. ಹಿಂದಿ ಪ್ರದೇಶಗಳಲ್ಲಿ ಸಹ ಕೆಜಿಎಫ್2 ಹವಾ ಕಡಿಮೆ ಆಗಿಲ್ಲ, ಈಗಾಗಲೇ ಹಿಂದಿಯಲ್ಲಿ 250 ಕೋಟಿ ಕಲೆಕ್ಷನ್ ಮಾಡಿದೆ. ಅತಿ ಕಡಿಮೆ ಸಮಯದಲ್ಲಿ 250 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಕೆಜಿಎಫ್2. ಕರ್ನಾಟಕದಲ್ಲಿ 7 ದಿನಗಳಲ್ಲಿ, 115 ಕೋಟಿಗಿಂತ ಹೆಚ್ಚು ಹಣ ಕಲೆಕ್ಷನ್ ಮಾಡಿದೆ.
ನಮ್ಮ ಕನ್ನಡ ಸಿನಿಮಾ ಇಷ್ಟರ ಮಟ್ಟಿಗೆ ರೀಚ್ ಆಗಿದೆ ಎನ್ನುವುದನ್ನು ತಿಳಿಯಲು ತುಂಬಾ ಹೆಮ್ಮೆ ಅನ್ನಿಸುತ್ತದೆ. ಕೆಜಿಎಫ್2 ಸಿನಿಮಾ ವಿಶ್ವಾದ್ಯಂತ ಯಾವ ಯಾವ ದಿನ ಎಷ್ಟೆಷ್ಟು ಕೋಟಿ ಕಲೆಕ್ಷನ್ ಮಾಡಿದೆ ಎಂದು ನೋಡುವುದಾರೆ, ಮೊದಲ ದಿನ 165.37ಕೋಟಿ, ಎರಡನೆಯ ದಿನ 139.25 ಕೋಟಿ, ಮೂರನೆಯ ದಿನ 115.08 ಕೋಟಿ, ನಾಲ್ಕನೆಯ ದಿನ 132.13 ಕೋಟಿ, ಐದನೆಯ ದಿನ 73.29 ಕೋಟಿ, ಆರನೆಯ ದಿನ 51.68 ಕೋಟಿ, ಏಳನೆಯ ದಿನ 42.50 ಕೋಟಿ ಗಳಿಕೆ ಮಾಡಿದ್ದು, ಒಟ್ಟಾರೆಯಾಗಿ 719.30 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ ಕೆಜಿಎಫ್2 ಸಿನಿಮಾ. ಇನ್ನು ಮುಂದಿನ ದಿನಗಳಲ್ಲಿ ಇನ್ನುಳಿದ ಎಲ್ಲಾ ದಾಖಲೆಗಳನ್ನು ಪುಡಿ ಪುಡಿ ಮಾಡುವುದು ಕಷ್ಟ ಎನ್ನಲಾಗುತ್ತಿದೆ.
Comments are closed.