ಗರುಡ ಪುರಾಣದ ಪ್ರಕಾರ ನೀವು ಈ ಯಾರನ್ನು ಪೂಜಿಸಿದರೆ ಸಾಕು, ನಿಮ್ಮ ಎಲ್ಲಾ ಕಷ್ಟ ದೂರವಾಗುತ್ತವೆ, ಯಾವ್ಯಾವು ಗೊತ್ತೇ?
ಹಿಂದೂ ಧರ್ಮದಲ್ಲಿ ಪ್ರಾಚೀನ ಗ್ರಂಥಗಳಿಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. 18 ಪುರಾಣಗಳಲ್ಲಿ ಗರುಡ ಪುರಾಣ ಸಹ ಒಂದು, ಇದು ಒಬ್ಬ ವ್ಯಕ್ತಿ ಮಾಡುವ ಕ್ರಿಯೆಗಳಿಗೆ ಬರುವ ಪರಿಣಾಮದ ಬಗ್ಗೆ ತಿಳಿಸಿಕೊಡುತ್ತದೆ. ಜೀವನದಲ್ಲಿ ಯಶಸ್ಸು ನೋಡಲು, ಪ್ರಗತಿ ಹೊಂದಲು ಗರುಡ ಪುರಾಣದಲ್ಲಿ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಅದರ ಅರ್ಥವನ್ನು ತಿಳಿದುಕೊಂಡರೆ, ಜೀವನ ಸುಖಾಂಯವಾಗುತ್ತದೆ.ಗರುಡ ಪುರಾಣದಲ್ಲಿ ಅಂತಹ ಆರು ವಿಷಯಗಳಿವೆ., ಅವುಗಳ ಬಗ್ಗೆ ಇಂದು ತಿಳಿದುಕೊಳ್ಳೋಣ..
1.ವಿಷ್ಣು :- ಧಾರ್ಮಿಕ ಗ್ರಂಥಗಳ ಪ್ರಕಾರ ವಿಷ್ಣು ಎಲ್ಲಾ ಭಕ್ತರ ಕಷ್ಟಗಳನ್ನು ದೂರ ಮಾಡುತ್ತಾನೆ. ಯಾವ ವ್ಯಕ್ತಿ ಪ್ರತಿದಿನ ದೇವರ ಮೇಲೆ ಭಕ್ತಿಯಿಂದ ದಿನವನ್ನು ಆರಂಭಮಿಸುತ್ತಾನೋ, ಆ ವ್ಯಕ್ತಿ ಮಾಡುವ ಕೆಲಸಗಳಲ್ಲಿ ಯಶಸ್ಸು ಸಾಧಿಸುತ್ತಾನೆ. ಈ ಪರಿಸ್ಥಿತಿಯಲ್ಲಿ ಶ್ರೀಮಹಾವಿಷ್ಣುವಿನ ಆರಾಧನೆಯನ್ನು ತಪ್ಪದೇ ಮಾಡಿ..
2.ಏಕಾದಶಿ ಉಪವಾಸ :- ಏಕಾದಶಿ ದಿನದ ಬಗ್ಗೆ ಗರುಡ ಪುರಾಣದಲ್ಲಿ ತಿಳಿಸಿದ್ದಾರೆ..ಬೇರೆ ದಿವಸಗಳ ಉಪವಾಸಕ್ಕಿಂತ ಏಕಾದಶಿ ದಿನ ಮಾಡುವ ಉಪವಾಸ ಶ್ರೇಷ್ಠವಾದದ್ದು. ಏಕಾದಶಿ ವ್ರತವನ್ನು ಭಕ್ತಿಯಿಂದ ಆಚರಿಸುವ ವ್ಯಕ್ತಿಯ ಜೀವನದಲ್ಲಿ ಶುಭಫಲ ದೊರಕುತ್ತದೆ. ನಿಮ್ಮ ಜೀವನದಲ್ಲಿ ಸಂತೋಷವಾಗಿರಲು ಏಕಾದಶಿ ವ್ರತವನ್ನು ಕಟ್ಟುನಿಟ್ಟಾಗಿ ತಪ್ಪದೇ ಪಾಲಿಸಬೇಕು.
3.ಗಂಗಾ ನದಿ :- ಗರುಡ ಪುರಾಣದ ಪ್ರಕಾರ, ಗಂಗಾ ನದಿಯ ನೀರು ಮನುಷ್ಯನ ಎಲ್ಲಾ ಪಾಪ ಕರ್ಮಗಳನ್ನು ತೊಳೆದು ಹಾಕುತ್ತದೆ. ಹಾಗಾಗಿ ಎಲ್ಲಾ ಶುಭಕಾರ್ಯಗಳಲ್ಲೂ ಗಂಗಾಜಲವನ್ನು ಉಪಯೋಗಿಸುತ್ತಾರೆ, ಗಂಗಾಜಲದಿಂದ ಶುದ್ಧಿ ಮಾಡುತ್ತಾರೆ. ಹಾಗಾಗಿ ಗಂಗಾಜಲವನ್ನು ಪೂಜಿಸಬೇಕು.
4.ತುಳಸಿ :- ತುಳಸಿ ಗಿಡ ಲಕ್ಷ್ಮಿದೇವಿಗೆ ಸಂಬಂಧಿಸಿದ್ದು. ವಿಷ್ಣುವಿಗೆ ತುಳಸಿ ಗಿಡ ಎಂದರೆ ತುಂಬಾ ಇಷ್ಟ. ಶ್ರೀಹರಿಯ ಅನುಗ್ರಹ ಪಡೆಯಲು, ಹಲವು ಜನರು ತುಳಸಿ ಗಿಡವನ್ನು ಪೂಜಿಸುತ್ತಾರೆ. ತುಳಸಿ ಗಿಡವನ್ನು ಅಚ್ಚುಕಟ್ಟಾಗಿ ಪೂಜೆ ಮಾಡುವುದರಿಂದ, ಜೀವನದ ಎಲ್ಲಾ ಬಾಧೆಗಳು ನಾಶವಾಗುತ್ತದೆ ಎನ್ನುವ ನಂಬಿಕೆ ಇದೆ…
5.ಪಂಡಿತರು :- ಹಿಂದೂ ಪುರಾಣ ಗ್ರಂಥಗಳ ಪ್ರಕಾರ, ಒಬ್ಬ ಜ್ಞಾನವಂತ ವ್ಯಕ್ತಿ ಅಥವಾ ಪಂಡಿತರು, ವಿದ್ವಂಸರನ್ನು ಗೌರವಿಸುವುದರಿಂದ, ಆ ವ್ಯಕ್ತಿ ಯಶಸ್ಸು ಸಾಧಿಸುತ್ತಾನೆ. ಪುರಾಣ ಗ್ರಂಥಗಳಲ್ಲಿ ಜ್ಞಾನಿಗಳಿಗೆ ಅವಮಾನ ಮಾಡುವುದು ಪಾಪದ ಕೆಲಸ ಎಂದು ಹೇಳುತ್ತಾರೆ.
6.ಹಸು :- ಹಿಂದೂ ಧರ್ಮದಲ್ಲಿ ಗೋವುಗಳಿಗೆ ವಿಶೇಷವಾದ ಸ್ಥಾನವಿದೆ. ಗರುಡ ಪುರಾಣದ ಪ್ರಕಾರ, ಎಲ್ಲಾ ದೇವತೆಗಳು ಗೋವಿನಲ್ಲಿ ವಾಸ ಮಾಡುತ್ತಾರೆ. ಗೋವನ್ನು ದೇವರ ಹಾಗೆ ಪೂಜಿಸುವುದರಿಂದ ಜೀವನದ ಎಲ್ಲಾ ಕಷ್ಟ ದೂರವಾಗುತ್ತದೆ.
Comments are closed.