ತಾನು ದೊಡ್ಮನೆ ಮಗನಾಗಿದ್ದರೂ ಕೂಡ ವಿಷ್ಣುವರ್ಧನ್ ರವರ ಕುರಿತು ಅಂದು ಅಪ್ಪು ರವರು ಅದೆಂತ ಮಾತು ಹೇಳಿದ್ದರು ಗೊತ್ತೇ??
ದಿ ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ ಎಂದು ಹೆಸರು ಪಡೆದ ಏಕೈಕ ಕನ್ನಡದ ಕಲಾವಿದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರು. ಕನ್ನಡದ ಮೇರು ನಟನಾಗಿದ್ದ ವಿಷ್ಣುದಾದ ಅವರು ಇಡೀ ಭಾರತ ಚಿತ್ರರಂಗ ಗೌರವಿಸುತ್ತಿತ್ತು. ಇವರ ಸರಳತೆ ಬಗ್ಗೆ ಮರುಮಾತನಾಡಲು ಸಾಧ್ಯವಿಲ್ಲ, ದೊಡ್ಡ ನಟನಾಗಿದ್ದರು, ಇವರು ಎಲ್ಲರ ನಡೆದುಕೊಳ್ಳುತ್ತಿದ್ದ ರೀತಿ, ತಿಳಿಸಿಕೊಡುತ್ತಿದ್ದ ವಿಷಯಗಳು ಎಲ್ಲವೂ ಸಹ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂಥದ್ದಾಗಿತ್ತು. ವಿಷ್ಣು ಸರ್ ಅವರು ಒಬ್ಬ ವ್ಯಕ್ತಿಗೆ ಎಷ್ಟು ಗೌರವ ಕೊಡುತ್ತಿದ್ದರು ಎನ್ನುವುದನ್ನು ಸಹ ನಾವು ನೆನೆಪಿಸಿಕೊಳ್ಳಬೇಕು.
ಈ ರೀತಿ ಒಳ್ಳೆಯ ತನದಿಂದಲೇ ಹೆಸರುವಾಸಿಯಾಗಿದ್ದ ವಿಷ್ಣುವರ್ಧನ್ ಅವರ ಬಗ್ಗೆ ಕಳೆದ ಕೆಲವು ದಿನಗಳ ಹಿಂದೆ ತೆಲುಗು ಚಿತ್ರರಂಗದ ವಿಜಯ್ ರಂಗರಾಜು ಅವರು ಕೆಟ್ಟದಾಗಿ ಮಾತನಾಡಿದ್ದನು. ವಿಷ್ಣು ಸರ್ ಅವರ ಗುಣ ವ್ಯಕ್ತಿತ್ವದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನು. ವಿಷ್ಣು ಸರ್ ಅವರು ಒಂದು ಹೆಣ್ಣಿಗೆ ಕೊಡುತ್ತಿದ್ದ ಗೌರವ ಹೇಗಿರುತ್ತಿತ್ತು ಎನ್ನುವುದನ್ನು ಅವರ ಜೊತೆ ನಟಿಸಿದ್ದ ಕಲಾವಿದೆಯರು ಹೇಳಿದ್ದಾರೆ. ಆದರೆ ಆ ಗುಣದ ಬಗ್ಗೆ ಕೂಡ ಈ ವ್ಯಕ್ತಿ ತಪ್ಪಾಗಿ ಮಾತನಾಡಿದ್ದನು.
ಗೌರವ, ಸರಳತೆಗೆ ಇನ್ನೊಂದು ಹೆಸರಾಗಿದ್ದ ವಿಷ್ಣು ಸರ್ ಬಗ್ಗೆ ಇಂತಹ ಮಾತುಗಳನ್ನು ಕೇಳಿ, ಅಭಿಮಾನಿಗಳು ಸುಮ್ಮನಾಗಲಿಲ್ಲ. ವಿಜಯ್ ರಂಗರಾಜು ಎನ್ನುವ ಆ ವ್ಯಕ್ತಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ತೀರ್ಮಾನ ಮಾಡಿ, ಸೋಷಿಯಲ್ ಮೀಡಿಯಾ ಮೂಲಕ ಆತನನ್ನು ತರಾಟೆಗೆ ತೆಗೆದುಕೊಳ್ಳಲು ತೀರ್ಮಾನ ಮಾಡಿದರು. ಆ ವ್ಯಕ್ತಿ ಕ್ಷಮೆ ಕೇಳುವವರೆಗೂ ವಿಷ್ಣುದಾದ ಅಭಿಮಾನಿಗಳು ಬಿಡಲಿಲ್ಲ. ಆ ಸಮಯದಲ್ಲಿ ವಿಷ್ಣು ದಾದ ಅವರ ಪರವಾಗಿ ನಿಂತಿದ್ದು, ಅವರ ಅಭಿಮಾನಿಗಳು ಮತ್ತು ಚಂದನವನದ ಕಲಾವಿದರು.
ವಿಷ್ಣು ದಾದ ಅವರ ಪರವಾಗಿ ದೊಡ್ಮನೆಯ ಮಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮಾತನಾಡಿದ್ದರು. ದೊಡ್ಮನೆ ಕುಟುಂಬ ಮತ್ತು ವಿಷ್ಣು ಸರ್ ಅವರ ಬಗ್ಗೆ ಹೊರಗಡೆ ಏನೇ ಮಾತುಗಳಿದ್ದರು ಕೂಡ, ಈ ಎರಡು ಕುಟುಂಬಗಳ ನಡುವೆ ಆತ್ಮೀಯತೆ ಇತ್ತು. ವಿಷ್ಣು ಸರ್ ಅಂದ್ರೆ ದೊಡ್ಮನೆಯ ಮಕ್ಕಳಿಗೆ ಗೌರವ, ವಿಷ್ಣು ಸರ್ ಅವರಿಗೆ ಅಣ್ಣಾವ್ರು ಹಾಗೂ ಅವರ ಮಕ್ಕಳ ಮೇಲೆ ಅಷ್ಟೇ ಪ್ರೀತಿ ಇತ್ತು. ಈ ಎರಡು ಕುಟುಂಬ ಬೇರೆಯವರು ಅಂದುಕೊಂಡ ಹಾಗೆ ಇರಲಿಲ್ಲ.
ವಿಷ್ಣು ಸರ್ ಬಗ್ಗೆ ಆ ರೀತಿಯ ಮಾತುಗಳು ಕೇಳಿಬಂದಾಗ ಸೋಷಿಯಲ್ ಮೀಡಿಯಾ ಮೂಲಕ ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದರು ಅಪ್ಪು. “ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನ ವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು ಭಾರತೀಯ ಚಿತ್ರರಂಗ ನಮ್ಮ ಮನೆ ಎಲ್ಲ ಕಲಾವಿದರು ಒಂದು ಕುಟುಂಬ ಕಲೆಗೆ ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ “ಮೊದಲು ಮಾನವನಾಗು”.. #RespectArtAndArtist..” ಎಂದು ಟ್ವೀಟ್ ಮಾಡಿದ್ದರು ಅಪ್ಪು.
ಅಪ್ಪು ಅವರು ಅಂದು ಆ ಸಂದರ್ಭಕ್ಕೆ ಮಾತ್ರ ವಿಷ್ಣು ಸರ್ ಬಗ್ಗೆ ಈ ರೀತಿ ಮಾತುಗಳನ್ನು ಆಡಿರಲಿಲ್ಲ, ನಿಜವಾಗಿಯೂ ವಿಷ್ಣು ಸರ್ ಅವರ ಮೇಲೆ ಅಪ್ಪು ಅವರಿಗೆ ಗೌರವ ಇತ್ತು. ವಿಷ್ಣು ಸರ್ ಹುಟ್ಟಿದ ದಿನ ವಿಷ್ಣು ಸರ್ ಜೊತೆಗೆ ತಾವಿರುವ ಹಳೆಯ ಫೋಟೋ ಒಂದನ್ನು ಶೇರ್ ಮಾಡಿ, ವಿಷ್ಣು ಸರ್ ಅವರ ನೆನೆಪು ಮಾಡಿಕೊಂಡಿದ್ದರು. ವಿಷ್ಣು ಸರ್ ಯಾವಾಗಲೂ ನಮ್ಮ ಹೃದಯದಲ್ಲಿರುತ್ತಾರೆ ಎನ್ನುವುದನ್ನು ತಿಳಿಸಿದ್ದರು ಅಪ್ಪು. ದೊಡ್ಮನೆ ಮಗನ ದೊಡ್ಡ ಗುಣ ಇದಾಗಿತ್ತು. ಇನ್ನು ಅಪ್ಪು ಅವರ ಮದುವೆಗೆ ವಿಷ್ಣು ಸರ್ ಅವರು ಭಾರತಿ ಅಮ್ಮನ ಜೊತೆ ಆಗಮಿಸಿ, ಹೊಸ ದಂಪತಿಗಳಿಗೆ ಆಶೀರ್ವಾದ ಮಾಡಿದ್ದರು. ದೊಡ್ಮನೆಗೂ ವಿಷ್ಣುದಾದ ಅವರಿಗೂ ಇದ್ದಂತಹ ಸುಂದರವಾದ ಸ್ನೇಹವಿದು.
Comments are closed.