Neer Dose Karnataka
Take a fresh look at your lifestyle.

ಕನ್ನಡದಲ್ಲಿ ಪಾದಾರ್ಪಣೆ ಮಾಡಿ ಇದೀಗ ತೆಲುಗಿನಲ್ಲಿ ಬಾರಿ ಡಿಮ್ಯಾಂಡ್ ಹೊಂದಿರುವ ನಟಿ ಶ್ರೀ ಲೀಲಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಎಷ್ಟು ಚಿಕ್ಕವರು ಗೊತ್ತೇ??

ಕನ್ನಡ. ಚಿತ್ರರಂಗದ ಮುದ್ದು ಹುಡುಗಿ ಕ್ಯೂಟ್ ಬೆಡಗಿ ಶ್ರೀಲೀಲಾ ಅವರು, ಇಂದು ಬಹುಭಾಷೆಯಲ್ಲಿ ಬಹಳ ಬೇಡಿಕೆ ಹೊಂದಿರುವ ನಟಿಯಾಗಿದ್ದಾರೆ. ಕನ್ನಡದ ಕಿಸ್ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಶ್ರೀಲೀಲಾ ಅವರು ಮೊದಲ ಸಿನಿಮಾದಲ್ಲೇ ಯಶಸ್ಸು ಕಂಡರು. ಬಳಿಕ ಕಿಸ್ ಸಿನಿಮಾದ ಯಶಸ್ಸಿನಿಂದ ಶ್ರೀಲೀಲಾ ಅವರು ಕರ್ನಾಟಕದ ಕ್ರಶ್ ಎನ್ನಿಸಿಕೊಂಡರು. ಪ್ರಸ್ತುತ ಅವರಿಗೆ ಅವಕಾಶಗಳ ಸುರಿಮಳೆಯೇ ಬರುತ್ತಿದೆ ಎಂದರೆ ತಪ್ಪಾಗುವುದಿಲ್ಲ.

ಕನ್ನಡ ಚಿತ್ರರಂಗದಲ್ಲಿ ಸಕ್ಸಸ್ ನೋಡಿದ ಶ್ರೀಲೀಲಾ ಅವರು ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. ಮೂಲತಃ ಕನ್ನಡದವರಾದ ತೆಲುಗಿನ ಖ್ಯಾತ ನಟ ಶ್ರೀಕಾಂತ್ ಅವರ ಮಗನ ಮೊದಲ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾದ ಶ್ರೀಲೀಲಾ ಅವರು ಮೊದಲ ಸಿನಿಮಾದಲ್ಲೇ ಸಕ್ಸಸ್ ಕಂಡರು. ಟಾಲಿವುಡ್ ನ ಸ್ಟಾರ್ ನಟ ಚಿರಂಜೀವಿ ಅವರು ಸಹ ಶ್ರೀಲೀಲಾ ಅವರನ್ನು ವೇದಿಕೆ ಮೇಲೆ ಹಾಡಿ ಹೊಗಳಿದ್ದರು. ಪೆಲ್ಲಿ ಸಂದಡಿ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಜೊತೆಗೆ ಮೊದಲ ಸಿನಿಮಾ ಸಕ್ಸಸ್ ಇಂದ ಶ್ರೀಲೀಲಾ ಅವರಿಗೆ ತೆಲುಗು ಚಿತ್ರರಂಗದಲ್ಲೂ ಬೇಡಿಕೆ ಶುರುವಾಯಿತು.

ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಶ್ರೀ ಶ್ರೀಲೀಲಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಯಿತು. ತೆಲುಗಿನಲ್ಲಿ ಫೇಮಸ್ ಆದ ಬಳಿಕ ಕನ್ನಡದಲ್ಲಿ ನಟನೆ ಮಾಡುವುದನ್ನು ನಿಲ್ಲಿಸಿಲ್ಲ ನಟಿ ಶ್ರೀಲೀಲಾ. ಶ್ರೀಲೀಲಾ ಮತ್ತು ಧನವೀರ್ ಅಭಿನಯದ ಬೈ ಟು ಲವ್ ತೆರೆಕಂಡು ಜನರಿಂದ ಮೆಚ್ಚುಗೆ ಪಡೆದುಕೊಂಡಿತು. ಶ್ರೀಲೀಲಾ ಅವರು ಚಿಕ್ಕ ವಯಸ್ಸಿಗೆ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಕನ್ನಡ ಮತ್ತು ತೆಲುಗಿನ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಇವರಿಗೆ ಸಿಗುತ್ತಿದೆ. ಶ್ರೀಲೀಲಾ ಅವರ ವಯಸ್ಸು ಈಗ 20 ವರ್ಷ. ಚಿಕ್ಕ ವಯಸ್ಸಿನಲ್ಲೇ ಇಷ್ಟು ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

Comments are closed.