ಕನ್ನಡ ಚಿತ್ರರಂಗದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡು ನಟರಾಗಿರುವ ನಟರು ಯಾರ್ಯಾರು ಗೊತ್ತೇ??
ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಾಯಕನಟರು ಇದ್ದಾರೆ. ಕೆಲವರು ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಬರಬೇಕು ಎಂದು ಆಸೆ ಇಟ್ಟುಕೊಂಡು ಬಂದವರು. ಇನ್ನು ಕೆಲವರು ತಾವು ನಿಜ ಜೀವನದಲ್ಲಿ ಓದಿದ್ದೆ ಬೇರೆಯಾದರು ನಟನೆಯ ಲೋಕಕ್ಕೆ ಬಂದವರು. ಇಂದು ನಾವು ನಿಮಗೆ ವಿದ್ಯಾಭ್ಯಾಸದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ನಂತರ ಕನ್ನಡ ಚಿತ್ರರಂಗದಲ್ಲಿ ನಾಯಕರಾಗಿ ಬಂದ ಕಲಾವಿದರು ಯಾರು ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ..
ಹ್ಯಾಟ್ರಿಕ್ ಹೀರೋ ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ ಅವರು ಓದುವ ಸಮಯದಲ್ಲಿ, ಮದ್ರಾಸ್ ನಲ್ಲಿ ಓದುತ್ತಿದ್ದ ಶಿವಣ್ಣ ಅವರು, ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಮದ್ರಾಸ್ ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕನ್ನಡದ ಎವರ್ ಚಾರ್ಮಿಂಗ್ ನಟ ರಮೇಶ್ ಅರವಿಂದ್ ಅವರು, ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಚಾರದಲ್ಲಿ ಪದವಿ ಪಡೆದಿದ್ದಾರೆ. ಬಹುಭಾಷಾ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು, ಬೆಂಗಳೂರಿನ ದಯಾನಂದ ಸಾಗರ್ ವಿಶ್ವವಿದ್ಯಾಲಯದಲ್ಲಿ ಇಂಡಸ್ಟ್ರಿಯಲ್ ಅಂಡ್ ಪ್ರೊಡಕ್ಷನ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಚಂದನವನದ ಸಿಂಪಲ್ ಸ್ಟಾರ್ ಎಂದು ಖ್ಯಾತಿಯಾಗಿರುವ ನಟ ರಕ್ಷಿತ್ ಶೆಟ್ಟಿ ಅವರು, ಇಂದು ಚಿತ್ರರಂಗದ ಬ್ರಿಲಿಯಂಟ್ ನಟ, ನಿರ್ದೇಶಕ ಎಂದು ಖ್ಯಾತಿಯಾಗಿರುವ ಮಂಗಳೂರಿನ ವಿಶ್ವವಿದ್ಯಾಲಯದಿಂದ, ಎಲೆಕ್ಟ್ರಿಕಲ್ ಮತ್ತು ಕಮ್ಯುನಿಕೇಶನ್ ವಿಷಯದಲ್ಲಿ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಡಾಲಿ ಧನಂಜಯ್ ಎಂದೇ ಖ್ಯಾತಿಯಾಗಿರುವ ನಟ ಧನಂಜಯ್ ಅವರು ಸಹ, ಮೈಸೂರಿನ ಜೆಸಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿರುವ ನಟ ಚಂದನ್ ಕುಮಾರ್ ಅವರು ಸಹ ಮಂಡ್ಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕನ್ನಡದ ಯುವ ಪ್ರತಿಭೆ ನಟ ಸಿದ್ಧಾರ್ಥ್ ಮಹೇಶ್ ಅವರು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಟನಾಗಿ ಮಿಂಚುತ್ತಿರುವ ನಟ ರಿಷಿ ಅವರು ಸಹ ಮೈಸೂರಿನ ಜೆಸಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕನ್ನಡದ ಯುವನಟ ಮತ್ತು ನಿರ್ದೇಶಕ ಸೂರಜ್ ಗೌಡ ಅವರು ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ.
ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜೆಕೆ ಎಂದೇ ಖ್ಯಾತಿಯಾಗಿದ್ದ ನಟ ಜಯರಾಮ್ ಕಾರ್ತಿಕ್ ಅವರು ಸಹ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕನ್ನಡದ ಮತ್ತೊಬ್ಬ ಖ್ಯಾತ ನಟ ನಿರೂಪ್ ಭಂಡಾರಿ ಅವರು ಸಹ ಮೈಸೂರಿನ ವಿದ್ಯಾ ವಿಕಾಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಲೂಸಿಯಾ ಸಿನಿಮಾ ನಿರ್ದೇಶಕ ಪವನ್ ಕುಮಾರ್ ಅವರು ಸಹ ಪಿ.ಇ.ಎಸ್ ವಿಶ್ವ ವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇವರೆಲ್ಲರೂ ಇಂಜಿನಿಯರಿಂಗ್ ಪದವಿ ಪಡೆದ ನಮ್ಮ ಕನ್ನಡ ನಟರಾಗಿದ್ದಾರೆ.
Comments are closed.