ಮತ್ತೆ ಬಾರಿ ಬದಲಾವಣೆ ಕಂಡ ಕಿರುತೆರೆಯ ಟಿಆರ್ಪಿ ಲಿಸ್ಟ್, ಹೊಸ ಶೋ ಗಿಚ್ಚಿ ಗಿಲಿಗಿಲಿಗೆ ಪ್ರೇಕ್ಷಕರು ಕೊಟ್ಟ ಮಾರ್ಕ್ಸ್ ಎಷ್ಟು ಗೊತ್ತೇ??
ಪ್ರತಿ ಧಾರಾವಾಹಿಯ ಜನಪ್ರಿಯತೆ ನಿಂತಿರುವುದು ಟಿ.ಆರ್.ಪಿ ರೇಟಿಂಗ್ ಮೇಲೆ. ಪ್ರತಿ ವಾರ ಬದಲಾಗುವ ಟಿ.ಆರ್.ಪಿ ರೇಟಿಂಗ್ ಎಲ್ಲಾ ಟಿವಿ ಚಾನೆಲ್ ಗಳಿಗೂ ಹಾಗೂ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಿಗೂ ಮುಖ್ಯವಾದ ಅಂಶ. ಈ ವಾರದ ಟಿ.ಆರ್.ಪಿ ರೇಟಿಂಗ್ ನಲ್ಲಿ ಬಹಳಷ್ಟು ಬದಲಾವಣೆ ಕಂಡುಬಂದಿದ್ದು, ಯಾವ ಧಾರಾವಾಹಿ ಎಷ್ಟು ಟಿ.ಆರ್.ಪಿ ರೇಟಿಂಗ್ ಇದೆ, ಹಾಗೆ ಹೊಸ ಶೋ ಗಿಚ್ಚಿ ಗಿಲಿ ಗಿಲಿಗೆ ಸಿಕ್ಕಿರುವ ಟಿ.ಆರ್.ಪಿ ರೇಟಿಂಗ್ ಎಷ್ಟು ಗೊತ್ತಾ?
ಈ ವಾರವು ಸಹ ಪುಟ್ಟಕ್ಕನ ಮಕ್ಕಳು ಧಾರಾವಾಹಿ 9.4 ಟಿ.ಆರ್.ಪಿ ರೇಟಿಂಗ್ ಪಡೆದು, ಮೊದಲ ಸ್ಥಾನದಲ್ಲಿದೆ. ಪುಟ್ಟಕ್ಕನ ಕುಟುಂಬ ನೋಡಲು ಅಭಿಮಾನಿಗಳು ಪ್ರತಿದಿನ ಕಾತುರರಾಗಿರುತ್ತಾರೆ. ಟಿ.ಆರ್.ಪಿ ಚೆನ್ನಾಗಿ ಬಂದಿರುವುದರ ಜೊತೆಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈಗ 100 ಸಂಚಿಕೆ ಪೂರೈಸಿದ ಸಂಭ್ರಮದಲ್ಲಿದೆ. ಇನ್ನು ಎರಡನೇ ಸ್ಥಾನ ಪಡೆದುಕೊಂಡಿರುವುದು ಸತ್ಯ ಧಾರಾವಾಹಿ, ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗುವ ಸತ್ಯ ಧಾರಾವಾಹಿ 5.4 ರೇಟಿಂಗ್ ಪಡೆದು ಜನಪ್ರಿಯತೆ ಉಳಿಸಿಕೊಂಡಿದ್ದಾಳೆ ಸತ್ಯ. ಕುತೂಹಲಕಾರಿ ಘಟ್ಟದಲ್ಲಿ ಸಾಗುತ್ತಿದೆ. ಹಾಗೆಯೇ ಅದೇ ಪ್ರೈಮ್ ಟೈಮ್ ನಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಾಚಾರಿ ಧಾರಾವಾಹಿ 4.8 ಟಿ.ವಿ.ಆರ್ ಪಡೆದು 6ನೇ ಸ್ಥಾನಕ್ಕೆ ಇಳಿದಿದೆ.
ಇನ್ನು ಕಲರ್ಸ್ ಕನ್ನಡ ವಾಹಿನಿಯ ಸೆನ್ಸೇಷನ್ ಆಗಿದ್ದ ಕನ್ನಡತಿ ಧಾರಾವಾಹಿ 3.6 ಟಿ.ವಿ.ಆರ್ ಪಡೆದುಕೊಂಡಿದೆ, ಹಾಗೂ ಎಂಗೇಜ್ಮೆಂಟ್ ಎಪಿಸೋಡ್ ಗಳ ನಂತರ ಕನ್ನಡತಿ ಜನಪ್ರಿಯತೆಯಲ್ಲಿ ಇಳಿಮುಖ ಕಂಡಿದ್ದು, 12ನೇ ಸ್ಥಾನಕ್ಕೆ ಇಳಿದಿದೆ. ಜೀಕನ್ನಡದ ಗಟ್ಟಿಮೇಳ ಧಾರಾವಾಹಿ 8.2 ಟಿ.ವಿ.ಆರ್ ಪಡೆದು, ಎರಡನೇ ಸ್ಥಾನದಲ್ಲಿದೆ. 7.8 ಟಿವಿಆರ್ ರೇಟಿಂಗ್ ಪಡೆದಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. 5.3 ರೇಟಿಂಗ್ ಪಡೆದಿರುವ ಜೊತೆ ಜೊತೆಯಲಿ 5ನೇ ಸ್ಥಾನದಲ್ಲಿದೆ. ರಿಯಾಲಿಟಿ ಶೋಗಳ ವಿಚಾರಕ್ಕೆ ಬಂದರೆ, ಕಳೆದ ವಕ್ರ ಶುರುವಾರ ಗಿಚ್ಚಿ ಗಿಲಿ ಗಿಲಿ ಶೋ, 3.4 ರೇಟಿಂಗ್ ಪಡೆದು ಎರಡನೇ ಸ್ಥಾನದಲ್ಲಿದೆ. 7.3 ರೇಟಿಂಗ್ ಪಡೆದ ಡ್ರಾಮಾ ಜ್ಯೂನಿಯರ್ಸ್ ಮೊದಲನೇ ಸ್ಥಾನದಲ್ಲಿದೆ. 2.0 ರೇಟಿಂಗ್ ಪಡೆದ ಡ್ಯಾನ್ಸಿಂಗ್ ಚಾಂಪಿಯನ್ಸ್ ಮೂರನೇ ಸ್ಥಾನದಲ್ಲಿದೆ. ಈ ವಾರ ಟಿ.ಆರ್.ಪಿ ರೇಟಿಂಗ್ ನಲ್ಲಿ ಭಾರಿ ಬದಲಾವಣೆ ಆಗಿದ್ದು, ಜೀಕನ್ನಡ ವಾಹಿನಿಯ ಜನಪ್ರಿಯತೆ ಹೆಚ್ಚಾಗಿದೆ.
Comments are closed.