Neer Dose Karnataka
Take a fresh look at your lifestyle.

ಮದುವೆಗೂ ಮುನ್ನವೇ ತಾಯಿಯಾಗಿದ್ದ ಅಮಿ ಜಾಕ್ಸನ್ ಬ್ರೇಕ್ ಅಪ್ ಮಾಡಿಕೊಂಡ ಬಳಿಕ ಮಗುವಿನ ಜವಾಬ್ದಾರಿ ಯಾರಿಗೆ ಗೊತ್ತೇ?? ಹೊಸ ನಟನ ಜೊತೆ ಪ್ರೀತಿ ಆರಂಭ…

8

ಸೆಲೆಬ್ರಿಟಿಗಳ ಜೀವನ ಎಂದರೆ ಅವರು ಏನೇ ಮಾಡಿದರೂ ದೊಡ್ಡದಾಗಿ ಸುದ್ದಿಯಾಗುತ್ತದೆ. ಸಿನಿಮಾಗಳ ವಿಚಾರದಲ್ಲಿ ಏನಾದರು ಎಡವಟ್ಟಾದರೆ ಅವುಗಳು ದೊಡ್ಡ ಸುದ್ದಿಯಾಗುತ್ತದೆ. ಇನ್ನು ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ವಿಚಾರಗಳು ದೊಡ್ಡದಾಗಿ ಸುದ್ದಿಯಾಗುತ್ತದೆ. ವೈಯಕ್ತಿಕ ಜೀವನದಲ್ಲಿ ಏನಾದರೂ ವಿಭಿನ್ನವಾಸ ನಿರ್ಧಾರ ತೆಗೆದುಕೊಂಡರೆ, ಅವುಗಳನ್ನು ಚರ್ಚೆ ಮಾಡುವ ಜನರು ಸಹ ಸಾಕಷ್ಟಿದ್ದಾರೆ. ಇಂದು ನಾವು ನಿಮಗೆ ಖ್ಯಾತ ನಟಿ ಆಮಿ ಜಾಕ್ಸನ್ ಅವರ ಜೀವನದ ಬಗ್ಗೆ ತಿಳಿಸಲಿದ್ದೇವೆ.. ನಮಗೆಲ್ಲ ಗೊತ್ತಿರುವ ಹಾಗೆ ಆಮಿ ಜಾಕ್ಸನ್ ಅವರು ಮದುವೆಗಿಂತ ಮೊದಲೇ ತಾಯಿಯಾಗಿದ್ದರು. ಆದರೆ ಈಗ ತಮ್ಮ ಗಂಡನ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಇದೀಗ ಅವರ ಮಗು ಎಲ್ಲಿದೆ? ಯಾರ ಬಳಿ ಇದೆ ಗೊತ್ತಾ?

ನಟಿ ಆಮಿ ಜಾಕ್ಸನ್ ಅವರು ಮೂಲತಃ ಭಾರತೀಯರಲ್ಲ, ಇವರು ಬ್ರಿಟನ್ ಮೂಲದವರು. ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದು ಭಾರತ ಚಿತ್ರರಂಗದಲ್ಲಿ. ಬಾಲಿವುಡ್, ಟಾಲಿವುಡ್, ಕಾಲಿವುಡ್ , ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಪಡೆದಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಟಾಪ್ ನಟರಿಗೆ ನಾಯಕಿಯಾಗಿ ನಟಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ದಳಪತಿ ವಿಜಯ್, ವಿಕ್ರಂ, ಸೇರಿದಂತೆ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸಹ ಜೋಗಿ ಪ್ರೇಮ್ ಅವರು ನಿರ್ದೇಶನ ಮಾಡಿದ, ಶಿವಣ್ಣ ಮತ್ತು ಸುದೀಪ್ ಅವರು ಜೊತೆಯಾಗಿ ನಟಿಸಿದ ದಿ ವಿಲ್ಲನ್ ಸಿನಿಮಾದಲ್ಲಿ ಸಹ ನಟಿಸಿದ್ದಾರೆ..

ಇನ್ನು ಆಮಿ ಜಾಕ್ಸನ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಇವರು ಮದುವೆಗಿಂತ ಮೊದಲೇ ಒಂದು ಮಗುವಿಗೆ ತಾಯಿಯಾದ ಕಾರಣ ಬಹಳ ಸುದ್ದಿಯಾಗಿದ್ದರು. ಮಗು ಹುಟ್ಟಿದ ನಂತರ ಬ್ರಿಟಿಷ್ ಮೂಲದ ಖ್ಯಾತ ಉದ್ಯಮಿ, ಜಾರ್ಜ್ ಪಯನೋಟು ಅವರೊಡನೆ ಮದುವೆಯಾದರು. ಆದರೆ ಈಗ ಆಮಿ ಜಾಕ್ಸನ್ ಮತ್ತು ಜಾರ್ಜ್ ಅವರು ಬೇರೆ ಬೇರೆಯಾಗಿದ್ದಾರೆ. ಆದರೆ ಈಗ ಬ್ರಿಟನ್ ಮೂಲದ ನಟ ಎಡ್ ವೆಸ್ಟ್ ವಿಕ್ ಅವರೊಡನೆ ಡೇಟ್ ಮಾಡುತ್ತಿದ್ದಾರೆ ಆಮಿ ಜಾಕ್ಸನ್. ಪತಿಯಿಂದ ದೂರ ಆಗಿರುವ ಆಮಿ ಜಾಕ್ಸನ್ ಅವರ ಮಗುವಿನ ಸ್ಥಿತಿ ಏನಾಗಲಿದೆ ಎನ್ನುವ ಪ್ರಶ್ನೆ ನೆಟ್ಟಿಗರಲ್ಲಿ ಮೂಡಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಆಮಿ ಜಾಕ್ಸನ್ ಅವರು ಮಗುವನ್ನು ತಮ್ಮ ಜೊತೆಯಲ್ಲೇ ಇರಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬ್ರಿಟನ್ ನಟ ಎಡ್ ವೆಸ್ಟ್ ವಿಕ್ ಅವರ ಜೊತೆಯಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.

Leave A Reply

Your email address will not be published.