ಗಟ್ಟಿಮೇಳ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್.. ಲಾಯರ್ ಆದ ವೇದಾಂತ್.. ಮುಂದಿನ ಕಥೆಯೇನು?
ಜೀಕನ್ನಡ ವಾಹಿನಿಯ ಬಹಳ ಮುಖ್ಯವಾದ ಧಾರಾವಾಹಿಗಳಲ್ಲಿ ಒಂದು ಗಟ್ಟಿಮೇಳ ಧಾರಾವಾಹಿ. ಇಷ್ಟು ದಿನಗಳ ಕಾಲ ಫ್ಯಾಮಿಲಿ ಡ್ರಾಮಾ ಮತ್ತು ವೇದಾಂತ್ ಅಮೂಲ್ಯ ಪ್ರೀತಿಯ ಕಥೆಯಾಗಿದ್ದ ಸ್ಟೋರಿ ಇಂದು ಕೋರ್ಟ್ ರೂಮ್ ಡ್ರಾಮಾ ಆಗಿ ಬದಲಾಗಿದೆ. ಇಲ್ಲಿ ಬಿಗ್ ಟ್ವಿಸ್ಟ್ ಏನೆಂದರೆ, ನಾಯಕ ವೇದಾಂತ್ ವಸಿಷ್ಠ ಲಾಯರ್ ಆಗಿ ಬಂದಿರುವುದು ವೀಕ್ಷಕರಿಗೆ ಶಾಕ್ ನೀಡಿದೆ. ಲಾಯರ್ ಗಿರಿಯ ಗಂಧ ಗಾಳಿ ಗೊತ್ತಿಲ್ಲ ವೇದಾಂತ್ ಲಾಯರ್ ಆಗಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ..
ಇಲ್ಲಿ ವೇದಾಂತ್ ಲಾಯರ್ ಆಗಲು ಒಂದು ಕಾರಣ ಇದೆ. ವೇದಾಂತ್ ಮೊದಲ ತಮ್ಮ ಧ್ರುವನ ಕೊಲೆ ನಡೆದು ಹೋಗಿದೆ, ಈ ಕೊಲೆಯ ಅಪವಾದ ಈಗ ವಿಕ್ಕಿ ಮೇಲೆ ಬಂದು, ವಿಕ್ಕಿಯನ್ನು ಅರೆಸ್ಟ್ ಮಾಡಲಾಗಿದೆ. ವಿಕ್ರಾಂತ್ ವಸಿಷ್ಠ ಈ ಕೊಲೆ ಮಾಡಿಲ್ಲ ಎಂದು ಸಾಬೀತು ಪಡಿಸಲು ಯಾವುದೇ ಸಾಕ್ಷಿ ಇರಲಿಲ್ಲ. ವಿಕ್ಕಿ ಪರವಾಗಿ ವಾದ ಮಾಡಲು ದೊಡ್ಡ ವಕೀಲರನ್ನು ವೇದಾಂತ್ ಸಂಪರ್ಕ ಮಾಡಿದರೂ ಸಹ, ಯಾರು ವಿಕ್ಕಿ ಕೇಸ್ ತೆಗೆದುಕೊಳ್ಳಲು ಒಪ್ಪಿಗೆ ನೀಡಲಿಲ್ಲ. ಜೊತೆಗೆ, ಇದಕ್ಕೂ ಮುಂಚೆ ನಡೆದ,
ವಾದದಲ್ಲಿ, ಅಮೂಲ್ಯಳನ್ನು ತನಿಖೆ ಮಾಡಿ, ವಿಕ್ಕಿ ವಿರುದ್ಧ ತೀರ್ಪು ಬರುವ ಹಾಗೆ ಮಾಡಲಾಯಿತು. ಸಮಯದಲ್ಲಿ ಆದಿತ್ಯ, ಅಂಗೈಲಿ ಬೆಣ್ಣೆ ಇಟ್ಕೊಂಡು ತುಪ್ಪ ಹುಡುಕೋದು ಯಾಕೆ, ನೀನೇ ವಿಕ್ಕಿ ಪರವಾಗಿ ವಾದ ಮಾಡು ಎಂದು ವೇದಾಂತ್ ಗೆ ಹೇಳುತ್ತಾನೆ. ಮೊದಲಿಗೆ ವೇದಾಂತ್ ಒಪ್ಪಿಗೆ ಕೊಡದೆ ಇದ್ದರೂ ಸಹ, ನಂತರ ಒಪ್ಪಿ ತಾನೇ ತಮ್ಮನ ಪರವಾಗಿ ವಾದ ಮಾಡಲು ಬರುತ್ತಾನೆ. ಕೆಜಿಎಫ್2 ಸಿನಿಮಾದ ತೂಫಾನ್ ಹಾಡನ್ನು ಬ್ಯಾಗ್ರೌಂಡ್ ನಲ್ಲಿ ಹಾಕಿ, ಲಾಯರ್ ಆಗಿ ವೇದಾಂತ್ ಎಂಟ್ರಿ ನೀಡಲಾಗಿದೆ.
ಲಾರಿ ಡ್ರೈವರ್ ವಿಕ್ಕಿ ನಂಬರ್ ಗೆ ಕಳಿಸಿರುವ ವಾಯ್ಸ್ ನೋಟ್ ಇಲ್ಲಿ, ಸಮಸ್ಯೆ ತಂದಿದೆ. ಮೊದಲಿಗೆ ವೇದಾಂತ್, ಮೊಬೈಲ್ ನೆಟ್ವರ್ಕ್ ಪಾಯಿಂಟ್ ಹಾಕಿದ್ದಾನೆ, ಕೊಲೆ ನಡೆದ ಸಮಯದಲ್ಲಿ ವಿಕ್ಕಿ ಮೊಬೈಲ್ ಲೊಕೇಶನ್ ಬೇರೆ ಕಡೆ ಇತ್ತು ಎನ್ನುವುದನ್ನು ವೇದಂತ್ ಸಾಬೀತು ಮಾಡಿದ್ದಾನೆ. ಇನ್ನು ಲಾರಿ ಡ್ರೈವರ್ ವಾಯ್ಸ್ ನೋಟ್ ವಿಚಾರಕ್ಕೆ, ಅದು ಬೇಕೆಂದೇ ವಿಕ್ಕಿ ಮೇಲೆ ಅಪವಾದ ಬರಲಿ ಎಂದೇ ಆ ರೀತಿ ಮಾಡಲಾಗಿದೆ, ಕುಟುಂಬದವರು ಬಿಟ್ಟು ಇನ್ಯಾರು ಸಹ ವಿಕ್ಕಿಯನ್ನು ಆ ರೀತಿ ವಿಕ್ಕಿ ಎಂದು ಕರೆಯುವುದಿಲ್ಲ, ವಿಕ್ರಾಂತ್ ವಸಿಷ್ಠ ಎಂದು ಕರೆಯುತ್ತಾರೆ ಎಂದು ಅದೊಂದು ಪಾಯಿಂಟ್ ಹಾಕಿದ್ದಾನೆ ವೇದಾಂತ್. ಇನ್ನು ಎದುರಾಳಿ ಲಾಯರ್ ಸಹ ಕಡಿಮೆ ಇಲ್ಲ, ವಿಕ್ಕಿ ವಿರುದ್ಧವಾಗಿ ಪಾಯಿಂಟ್ಸ್ ಹಾಕಿ, ವೇದಾಂತ್ ತನ್ನ ವಾದವನ್ನು ಮರೆಯುವ ಹಾಗೆ ಮಾಡಿದರು. ಇನ್ನುಮುಂದಿನ್ ಎಪಿಸೋಡ್ ಗಳಲ್ಲಿ ವೇದಾಂತ್ ಈ ಚಕ್ರವ್ಯೂಹವನ್ನು ಯಾವ ರೀತಿ ಬೇಧಿಸುತ್ತಾನೆ ಎಂದು ಕಾದು ನೋಡಬೇಕಿದೆ.
Comments are closed.