ಸಂಖ್ಯಾಶಾಸ್ತ್ರದ ಪ್ರಕಾರ ಈ ಬಣ್ಣದ ಬಟ್ಟೆಗಳನ್ನು ಧರಿಸಿದರೆ ನಿಮ್ಮ ಅದೃಷ್ಟ ಬದಲಾಗುವುದು ಗ್ಯಾರಂಟಿ..
ಸಂಖ್ಯಾಶಾಸ್ತ್ರದ ಪ್ರಕಾರ ನಿಮಗೆ ಹಣಕಾಸಿನ ಲಾಭವಾಗಲು ಯಾವ ಬಣ್ಣದ ಬಟ್ಟೆ ಧರಿಸಬೇಕು ಎಂದು ಇಂದು ನಾವು ನಿಮಗೆ ತಿಳಿಸುತ್ತೇವೆ. ಇಂದು ಸಂಖ್ಯೆಗಳ ಅನುಸಾರ, 1 ರಿಂದ 9 ಅಂಕೆಗಳವರೆಗೂ, ಅಂದರೆ ನಿಮ್ಮ ಹುಟ್ಟಿದ ದಿನಾಂಕದ ನಂಬರ್ ಅನ್ನು ಕೂಡಿಸಿದಾಗ ಬರುವ ನಂಬರ್ ನ ಅನುಸಾರ, ಸಿಗುವ ಸಂಖ್ಯೆ ನಿಮ್ಮನ್ನು ಪ್ರತಿನಿಧಿಸುತ್ತದೆ. ಆ ಸಂಖ್ಯೆಯ ಮೂಲಕ ನೀವು ಯಾವ ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು ಎಂದು ಇಂದು ನಿಮಗೆ ತಿಳಿಸುತ್ತೇವೆ..
ಸಂಖ್ಯೆ 1 :-ನಿಮ್ಮ ವಿರುದ್ಧವಾಗಿ ಕೆಲವು ಘಟನೆಗಳು ನಡೆದರು ಸಹ ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ಅದು ಪರಿಣಾಮ ಬೀರುವುದಿಲ್ಲ, ನಿಮ್ಮಲ್ಲಿರುವ ಬುದ್ಧಿವಂತಿಕೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ನಟರು ಹೊಸ ಆಫರ್ ಗಳನ್ನು ಒಪ್ಪಿಕೊಳ್ಳದೆ ಇರುವುದು ಒಳ್ಳೆಯದು, ಅದರಿಂದ ನೀವು ಮೋಸ ಹೋಗಬಹುದು. ಆಕರ್ಷಣೆಗಾಗಿ ಚರ್ಮದ ಉತ್ಪನ್ನ ಬಳಸುವುದನ್ನು ಕಡಿಮೆ ಮಾಡಿ. ನಿಮ್ಮ ಅದೃಷ್ಟದ ಬಣ್ಣ ಹಸಿರು..
ಸಂಖ್ಯೆ2 :- ಜೀವನದಲ್ಲಿ ಒಳ್ಳೆಯದಾಗಬೇಕಾದರೆ, ಮನೆಯ ಮತ್ತು ಕುಟುಂಬದ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಬೇಕು. ಕಾನೂನು ಕೇಸ್ ಗಳಲ್ಲಿ ಗೆಲುವು ನಿಮ್ಮದಾಗುತ್ತದೆ. ನಿಮ್ಮ ಭಾವನೆಯನ್ನು ಬಲವಾಗಿಸಲು ನಿಮಗೆ ಈ ದಿನ ಸಹಾಯ ಮಾಡುತ್ತದೆ. ರಾಜಕಾರಣಿಗಳು, ವೈದ್ಯರು, ಶಿಕ್ಷಕರು ಸಹಿ ಮಾಡುವಾಗ ಹುಷಾರಾಗಿ ಇರಬೇಕು. ವ್ಯಾಪಾರ ವಹಿವಾಟುಗಳು ಉತ್ತಮವಾಗಿ ನೆರವೇರುತ್ತದೆ. ನಿಮ್ಮ ಅದೃಷ್ಟದ ಬಣ್ಣ ಆಕಾಶ ನೀಲಿ.
ಸಂಖ್ಯೆ 3 :- ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ. ರಂಗಭೂಮಿಯಲ್ಲಿರುವವರಿಗೆ ಇದು ಒಳ್ಳೆಯ ಸಮಯ, ಹೊಸ ಕೆಲಸ ಶುರು ಮಾಡುತ್ತೀರಿ. ನಿಮ್ಮ ವೃತ್ತಿ ಜೀವನ ಒಳ್ಳೆಯ ಕಡೆಗೆ ಸಾಗುವುದರಿಂದ, ನಿಮ್ಮಲ್ಲಿ ಆತ್ಮವಿಶ್ವಾಸ ಸಹ ಹೆಚ್ಚಾಗಬೇಕು. ಈ ಸಮಯದಲ್ಲಿ ನೀವು ತಾಳ್ಮೆಯಿಂದ ಇರುವುದು ಒಳ್ಳೆಯದು. ಕಲಾವಿದರು, ವಿದ್ಯಾರ್ಥಿಗಳು, ಗೃಹಿಣಿಯರು, ಹೋಟೆಲ್ ಬ್ಯುಸಿನೆಸ್ ನಲ್ಲಿ ಇರುವವರು, ರಾಜಕಾರಣಿಗಳು, ನಟರು ಶುಭ ಸುದ್ದಿ ಕೇಳಬಹುದು. ನಿಮ್ಮ ಅದೃಷ್ಟದ ಬಣ್ಣ ಕೆಂಪು.
ಸಂಖ್ಯೆ 4 :- ಈಗಿನ ಸಮಯದಲ್ಲಿ ನೀವು ಮಾಡುತ್ತಿರುವ ಕೆಲಸಗಳು ವಿಳಂಬವಾಗುತ್ತಿದೆ. ನಿಮ್ಮ ಮುಂದೆ ಒಂದು ಹೊಸ ಪ್ರಸ್ತಾಪ ಬಂದಿದ್ದು, ಅದನ್ನು ನೀವು ನಿರ್ಲಕ್ಷ್ಯ ಮಾಡದೆ ಇದ್ದಿದ್ದರೆ. ಹಾಸಿಗೆಯ ಹೊದಿಕೆ ದಾನ ಮಾಡುವುದರಿಂದ ಆದಾಯ ಹೆಚ್ಚಾಗುತ್ತಿದೆ. ಲೋಹಗಳು ಮತ್ತು ಸಾಫ್ಟ್ವೇರ್ ಬ್ರೋಕರ್ ಕೆಲಸ ಮಾಡುವವರು ಯಾವುದೇ ಪೇಪರ್ ಗಳಿಗೆ ಸಹಿ ಹಾಕುವುದನ್ನು ತಪ್ಪಿಸಿದರೆ ಒಳ್ಳೆಯದು. ನಿಮ್ಮ ಅದೃಷ್ಟದ ಬಣ್ಣ ನೀಲಿ.
ಸಂಖ್ಯೆ 5 :- ದಿನಗಳು ಕಳೆಯುತ್ತಾ, ನಿಮಗೆ ಒತ್ತಡ ಹೆಚ್ಚಾಗಿದೆ ಅನ್ನಿಸಬಹುದು. ಆಸ್ತಿ ಹೂಡಿಕೆ ಮಾಡುವ ವಿಚಾರದಲ್ಲಿ ನೀವು ತೆಗೆದುಕೊಂಡಿರುವ ನಿರ್ಧಾರವನ್ನು ಒಮ್ಮೆ ಪರಿಶೀಲಿಸಿ. ಕ್ರೀಡಾಪಟುಗಳು ಮತ್ತು ಪ್ರಯಾಣ ಮಾಡುವವರು ಒಳ್ಳೆಯ ದಿನಗಳು ಬರುವವರೆಗೂ ಕಾಯಬೇಕು. ನಿಮ್ಮ ಸಂಗಾತಿಯೊಡನೆ ಪ್ರೀತಿಯನ್ನು ಪಾರದರ್ಶಕವಾಗಿ ಇಟ್ಟುಕೊಳ್ಳಿ. ನಿಮ್ಮ ಅದೃಷ್ಟದ ಬಣ್ಣ ಸಮುದ್ರ ಹಸಿರು.
ಸಂಖ್ಯೆ 6 :- ಹಣ ನಿಮ್ಮ ಬಳಿ ಹಿಂದಿರುಗಿ ಬರುತ್ತದೆ. ನಿಮ್ಮನ್ನು ಹೊರತುಪಡಿಸಿ ಮತ್ಯಾರು, ನಿಮ್ಮ ಮನಸ್ಸಿಗೆ ಶಾಂತಿ ತಂದುಕೊಡುವುದಿಲ್ಲ.ನಟರು, ಜಾಕಿಗಳು ಮತ್ತು ವೈದ್ಯರಿಗೆ ಒಳ್ಳೆಯ ದಿನವಾಗಿರುತ್ತದೆ. ಮಕ್ಕಳ ಮುಂದಿನ ಜೀವನಕ್ಕೆ ಮಾರ್ಗದರ್ಶನವನ್ನು ತಂದೆ ಚೆನ್ನಾಗಿ ನೀಡುತ್ತಾರೆ. ನಿಮ್ಮ ಅದೃಷ್ಟದ ಬಣ್ಣ ನೀಲಿ ಮತ್ತು ಸಮುದ್ರ ಹಸಿರು.
ಸಂಖ್ಯೆ 7 :- ನಿಮ್ಮ ಮನಸ್ಸಿಗೆ ನೋವು ನೀಡಿದವರು, ಮತ್ತೆ ಮತ್ತೆ ತೊಂದರೆ ಕೊಡುತ್ತಾರೆ. ಆ ನೋವಿನ ಕಾರಣವನ್ನು ನೀವು ಮರೆಯದೆ ಒಳ್ಳೆಯದು. ನಿಮ್ಮ ಪ್ರಾಮಾಣಿಕತೆಗೆ, ದಾಂಪತ್ಯ ಜೀವನದಲ್ಲಿ ಗೌರವ ಸಿಗುತ್ತದೆ. ನಿಗೂಢ ವಿಜ್ಞಾನ ,ಕೃಷಿ, ಆಧ್ಯಾತ್ಮಿಕ ಶಾಲೆಗಳು, ಚಿಕಿತ್ಸೆ ಪ್ರೇರಣೆ ಕೆಲಸ ಮಾಡುವವರ ಸಮಯ ಚೆನ್ನಾಗಿರುತ್ತದೆ. ನಿಮ್ಮ ಅದೃಷ್ಟದ ಬಣ್ಣ ಕಿತ್ತಳೆ ಮತ್ತು ನೀಲಿ.
ಸಂಖ್ಯೆ 8 :- ನಿಮ್ಮ ಗುರಿ ಮುಟ್ಟಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕು. ನಿಮ್ಮ ಜೊತೆಗೆ ಹಿರಿಯರು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಕುಟುಂಬದ ಜೊತೆ ಸಮಯ ಕಳೆಯುವುದು ಒಳ್ಳೆಯದು, ಪ್ರಯಾಣ ಮಾಡುವುದನ್ನು ತಪ್ಪಿಸಿ. ಆಧ್ಯಾತ್ಮಿಕತೆ ಮತ್ತು ಪ್ರೀತಿಯ ಸಂಬಂಧಗಳಲ್ಲಿ ನಂಬಿಕೆ ಹೆಚ್ಚಿಸಲು ಇದು ಒಳ್ಳೆಯ ಸಮಯ. ನಿಮ್ಮ ಅದೃಷ್ಟದ ಬಣ್ಣ ಸಮುದ್ರ ನೀಲಿ.
ಸಂಖ್ಯೆ 9 :- ಕಾನೂನು, ಹಣಕಾಸು ಯೋಜನೆ, ಬೋಧನೆ, ಇಂಥಹ ಉದ್ಯಮದಲ್ಲಿರುವ ಜನರಿಗೆ ಏಳಿಗೆ ಉಂಟಾಗುತ್ತದೆ. ವ್ಯಾಪಾರದಲ್ಲಿ ಒಳ್ಳೆಯದನ್ನು ಮಾಡಲು, ಸ್ನೇಹಿತರ ಸಂಪರ್ಕ ಮಾಡಬೇಕಿದ್ದಲ್ಲಿ ಇದು ಒಳ್ಳೆಯ ಸಮಯ..ಹಸಿರು ಎಲೆ ಮತ್ತು ಹುಳಿ ಅಂಶ ಇರುವ ತರಕಾರಿಯನ್ನು ಊಟದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ನಿಮ್ಮ ಅದೃಷ್ಟದ ಬಣ್ಣ ಕೆಂಪು.
Comments are closed.