Neer Dose Karnataka
Take a fresh look at your lifestyle.

ಕೆಜಿಎಫ್2 ಸಿನಿಮಾ ನೋಡಿ ಟಾಲಿವುಡ್ ನಟ ರಾಮ್ ಚರಣ್ ರಾಕಿ ಭಾಯ್ ಬಗ್ಗೆ ಹೇಳಿದ್ದೇನು ಗೊತ್ತೇ?

ಕೆಜಿಎಫ್2 ಸಿನಿಮಾ ಬಿಡುಗಡೆಯಾಗಿ ಒಂದು 12 ದಿನ ಕಳೆದಿದೆ, ಆದರೆ ಈಗಲೂ ಸಿನಿಮಾ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ. ರಾಕಿ ಭಾಯ್ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗಲೂ ಸಹ ಕೆಜಿಎಫ್2 ಸಿನಿಮಾ ಬಹುತೇಕ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಯಾದ 7 ದಿನಕ್ಕೆ 546 ಕೋಟ್ ಕಲೆಕ್ಷನ್ ಮಾಡಿ, ಈಗಾಗಲೇ 700 ಕೋಟಿ ಕಲೆಕ್ಷನ್ ದಾಟಿದ್ದು, ಕೆಜಿಎಫ್2 ಸಿನಿಮಾ 2000 ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಸಂಶಯವಿಲ್ಲ ಎನ್ನುತ್ತಿವೆ ಮೂಲಗಳು. ಕನ್ನಡದ ಅತಿ ದೊಡ್ಡ ಸಿನಿಮಾ ಆಗಿ ನಿಂತಿದೆ ಕೆಜಿಎಫ್2 .

ಇನ್ನು ಕೆಜಿಎಫ್2 ಸಿನಿಮಾ ನೋಡಿ ಭಾರತದ ಅನೇಕ ಸೆಲೆಬ್ರಿಟಿಗಳು ಟ್ವೀಟ್ ಮಾಡಿ, ಮೆಚ್ಚಿ ಕೊಂಡಾಡಿದ್ದಾರೆ. ಮೊನ್ನೆಯಷ್ಟೇ ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಅವರು ಟ್ವೀಟ್ ಮಾಡಿ ಕೆಜಿಎಫ್2 ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೀಗ ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ಅವರು ಸಹ ಟ್ವೀಟ್ ಮಾಡಿ, ಚಿತ್ರತಂಡದ ಬಗ್ಗೆ  ಮತ್ತು ಯಶ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಡೀ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. “ಕೆಜಿಎಫ್2 ಸಿನಿಮಾ ಬಿಡುಗಡೆ ಆಗಿ ಸೂಪರ್ ಸಕ್ಸಸ್ ಆಗಿರುವುದಕ್ಕೆ, ನನ್ನ ಸಹೋದರ ಪ್ರಶಾಂತ್ ನೀಲ್, ಹೊಂಬಾಳೆ ಸಂಸ್ಥೆ ಮತ್ತು ಇಡೀ ಚಿತ್ರತಂಡಕ್ಕೆ ಶುಭಾಶಯಗಳು..

ರಾಕಿ.. ಡಿಯರ್ ಬ್ರದರ್, ನಿಮ್ಮ ಪರ್ಫಾರ್ಮೆನ್ಸ್ ಅದ್ಭುತವಾಗಿತ್ತು, ಮತ್ತು ನಿಮ್ಮ ಸ್ಕ್ರೀನ್ ಪ್ರೆಸೆನ್ಸ್ ಕಮೆಂಡಬಲ್ ಆಗಿತ್ತು..” ಎಂದು ಟ್ವೀಟ್ ಮಾಡಿದ್ದಾರೆ ನಟ ರಾಮ್ ಚರಣ್. ಭಾರತ ಚಿತ್ರರಂಗದ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಸಹ ಇದುವರೆಗೂ ಯಾವ ಸಿನಿಮಾ ಸಹ ಕೆಜಿಎಫ್2 ಸಿನಿಮಾ ಅಷ್ಟು ವೇಗವಾಗಿ 250 ಕೋಟಿ ಕಲೆಕ್ಷನ್ ಮಾಡಿರಲಿಲ್ಲ. ಹಾಗಾಗಿ ಬಾಲಿವುಡ್ ಸಹ ಈಗ ರಾಕಿ ಭಾಯ್ ಹಿಂದೆ ಬಿದ್ದಿದೆ.

Comments are closed.