ಅಮಿರ್ ಖಾನ್ ರವರ ಬಹುನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಸಿನೆಮಾಗೆ ಕರೀನಾ, ಅಮಿರ್ ಖಾನ್ ಹಾಗೂ ನಾಗ ಚೈತನ್ಯ ಪಡೆದ ಸಂಭಾವನೆ ಎಷ್ಟು ಗೊತ್ತೇ??
ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಲಾಲ್ ಸಿಂಗ್ ಚಡ್ಡಾ. ಈ ಸಿನಿಮಾದ ನಾಯಕ ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತಿಯಾಗಿರುವ ನಟ ಆಮೀರ್ ಖಾನ್, ಇವರಿಗೆ ನಾಯಕಿಯಾಗಿ ನಟಿ ಕರೀನಾ ಕಪೂರ್ ಖಾನ್ ಅವರು ನಟಿಸಿದ್ದಾರೆ. ಇನ್ನು ತೆಲುಗು ಚಿತ್ರರಂಗದ ಖ್ಯಾತ ನಟ ನಾಗಚೈತನ್ಯ ಹಾಗೂ ಇನ್ನಿತರ ಕಲಾವಿದರು ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ತಯಾರಾಗಿರುವ ಸಿನಿಮಾ, ಈ ಸಿನಿಮಾಗೆ ಕಲಾವಿದರು ಪಡೆದಿರುವ ಸಂಭಾವನೆ ಎಷ್ಟು ಕೋಟಿ ಗೊತ್ತಾ?
ನಟ ಆಮೀರ್ ಖಾನ್ ಅವರು ತಾವು ಅಭಿನಯ ಮಾಡುವ ಪ್ರತಿಯೊಂದು ಪಾತ್ರವನ್ನು ಬಹಳ ವಿಭಿನ್ನವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಸಹ ವಿಭಿನ್ನವಾದ ಪಾತ್ರ ಒಪ್ಪಿಕೊಂಡಿರುವ ಆಮೀರ್ ಖಾನ್ ಅವರು, ಮೊದಲ ಬಾರಿಗೆ ಸಿಖ್ ಧರ್ಮದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾದ ಹಿಂದಿ ರಿಮೇಕ್. ಇಂಗ್ಲಿಷ್ ನಲ್ಲಿ, ಟಾಮ್ ಹ್ಯಾಂಕ್ಸ್ ಅವರು ಅಭಿನಯಿಸಿದ್ದ ಪಾತ್ರದಲ್ಲಿ ಆಮೀರ್ ಖಾನ್ ಅವರು ನಟಿಸಿದ್ದಾರೆ. ಈ ಮೊದಲು ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆ ಆಗುವ ದಿನಾಂಕ ಎರಡು ಸಾರಿ ಮುಂದಕ್ಕೆ ಹೋಗಿತ್ತು, ಆದರೆ ಈಗ ಆಗಸ್ಟ್ 11ರಂದು ತೆರೆಕಾಣಲು ಸಜ್ಜಾಗಿದೆ.
ಏಪ್ರಿಲ್ 28ರಂದು ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಇದೀಗ ಈ ಸಿನಿಮಾಗೆ ಕಲಾವಿದರು ಪಡೆದುಕೊಂಡಿರುವ ಸಂಭಾವನೆಯ ವಿಚಾರ ಭಾರಿ ಸದ್ದು ಮಾಡುತ್ತಿದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ನಟ ಆಮೀರ್ ಖಾನ್ ಅವರು ಬರೋಬ್ಬರಿ 50 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಾಯಕಿಯಾಗಿ ನಟಿಸಿರುವ ನಟಿ ಕರೀನಾ ಕಪೂರ್ ಅವರಿಗೆ 8 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ಕರೀನಾ ಕಪೂರ್ ಅವರು ಗರ್ಭಿಣಿ ಆಗಿದ್ದರೂ ಸಹ, ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ದಕ್ಷಿಣ ಭಾರತದ ಖ್ಯಾತ ನಟ ನಾಗಚೈತನ್ಯ ಅವರಿಗೆ 6 ಕೋಟಿ ಸಂಭಾವನೆ ನೀಡಲಾಗಿದೆ ಎನ್ನಲಾಗುತ್ತಿದೆ. ಹಾಗೂ ಮೊನಾ ಸಿಂಗ್ ಅವರಿಗೆ 2 ಕೋಟಿ, ಮನವ್ ವಿಜ್ ಅವರಿಗೆ 1 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾದ ಮಾಹಿತಿ ನೀಡಿಲ್ಲ, ಆದರೆ ಇದು ಸತ್ಯ ಎನ್ನಲಾಗುತ್ತಿದೆ.
Comments are closed.