ರಾಜ್ ರವರಿಗೆ ಹುಟ್ಟೂರಿನಲ್ಲಿ ತನ್ನ ಕನಸಿನ ಮನೆಯನ್ನು ಬಹಳ ಇಷ್ಟ ಪಟ್ಟು ಕಟ್ಟಿಸಿದರು ಕೂಡ ವಾಸ ಮಾಡುವ ಅದೃಷ್ಟ ಇರಲಿಲ್ಲ, ಯಾಕೆ ಗೊತ್ತೇ??
ಕನ್ನಡ ಚಿತ್ರರಂಗದ ಮೇರುನಟ, ವರನಟ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರ 93ನೇ ವರ್ಷದ ಹುಟ್ಟುಹಬ್ಬ ನಿನ್ನೆ ಇತ್ತು. ಅಣ್ಣಾವ್ರ ಹುಟ್ಟುಹಬ್ಬದ ವಿಶೇಷವಾಗಿ ಅನೇಕ ಒಳ್ಳೆಯ ಕಾರ್ಯಗಳು ನಿನ್ನೆ ನಡೆದಿದೆ. ಕನ್ನಡ ಚಿತ್ರರಂಗದ ಎಲ್ಲಾ ಸೆಲೆಬ್ರಿಟಿಗಳು ಅಣ್ಣಾವ್ರ ನೆನಪು ಮಾಡಿಕೊಂಡಿದ್ದಾರೆ. ಇಂದು ನಾವು ನಿಮಗೆ ಅಣ್ಣಾವ್ರ ಒಂದು ಕನಸಿನ ಬಗ್ಗೆ ತಿಳಿಸಿಕೊಡಲಿದ್ದೇವೆ. ಅಣ್ಣಾವ್ರ ಕೊನೆಯ ಆಸೆಯೊಂದು, ನೆರವೇರಲೇ ಇಲ್ಲ.. ಆ ಆಸೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..
ನಮಗೆಲ್ಲ ಗೊತ್ತಿರುವ ಹಾಗೆ ಅಣ್ಣಾವ್ರು ಹುಟ್ಟಿ ಬೆಳೆದದ್ದು, ಚಾಮರಾಜನಗರ ಜಿಲ್ಲೆಯ ಗಡಿ ತಾಲೂಕಿನ, ತಾಳವಾಡಿಯ ಗಾಜನೂರಿನ ಪುಟ್ಟ ಮನೆಯಲ್ಲಿ ಅಣ್ಣಾವ್ರು ಹುಟ್ಟಿ ಬೆಳೆದರು. ಆ ಮನೆಯಲ್ಲಿ ಅಣ್ಣಾವ್ರ ಬಾಲ್ಯದ ನೆನಪುಗಳಿವೆ. ಅಣ್ಣಾವ್ರು ತಮ್ಮ ಬಾಲ್ಯ ಕಳೆದು, ನಾಟಕಗಳಲ್ಲಿ ನಟಿಸಿ, ಚಿತ್ರರಂಗಕ್ಕೆ ಕಾಲಿಟ್ಟ ನಂತರ ಹೆಚ್ಚಿನ ಸಮಯ ಅಣ್ಣಾವ್ರು ಗಾಜನೂರಿನ ಮನೆಯಲ್ಲಿ ಇರಲು ಸಾಧ್ಯವಾಗಲಿಲ್ಲ. ತಮ್ಮ ಕಡೆಯ ಸಮಯವನ್ನು ಗಾಜನೂರಿನಲ್ಲೇ ಕಳೆಯಬೇಕು ಎನ್ನುವುದು ಅಣ್ಣಾವ್ರ ಆಸೆಯಾಗಿತ್ತು. ಆದರೆ ಆ ಆಸೆ ನೆರವೇರಲೇ ಇಲ್ಲ..
ಅಣ್ಣಾವ್ರು ಗಾಜನೂರಿಗೆ ಹೋದಾಗ ಉಳಿದುಕೊಳ್ಳಲೆಂದು ಗಾಜನೂರಿನಲ್ಲಿ ಒಂದು ಮನೆ ಕಟ್ಟಿಸಿದರು. ಸುಂದರವಾದ, ಭವ್ಯವಾದ ಬಂಗಲೆಯೊಂದನ್ನು ಕಟ್ಟಿಸಿದರು, ಆದರೆ ಆ ಮನೆಯಲ್ಲಿ ವಾಸ ಮಾಡುವ ಅವರ ಆಸೆ ಈಡೇರಲೇ ಇಲ್ಲ. ಯಾಕೆಂದರೆ, ಮನೆ ಕಟ್ಟಿಸಿ, ಇನ್ನೇನು ವಾಸ ಮಾಡಲು ಶುರು ಮಾಡಬೇಕು ಎಂದುಕೊಳ್ಳುವಷ್ಟರಲ್ಲಿ ಅಣ್ಣಾವ್ರ ಅಪಹರಣ ನಡೆಯಿತು. ಗಾಜನೂರಿನಿಂದ ವೀರಪನ್ ಅಣ್ಣಾವ್ರನ್ನ ಅಪಹರಿಸಿಕೊಂಡು ಹೋಗಿದ್ದನು. ಸುಮಾರು 3 ತಿಂಗಳಿಗಿಂತ ಹೆಚ್ಚಿನ ಸಮಯ ಅಣ್ಣಾವ್ರನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದನು ವೀರಪ್ಪನ್.
ಆ ಘಟನೆಯಿಂದ ಹೊರಬಂದ ನಂತರ ಅಣ್ಣಾವ್ರು ಹೆಚ್ಚಾಗಿ ಗಾಜನೂರಿಗೆ ಬಂದು ಉಳಿದುಕೊಳ್ಳಲಿಲ್ಲ. ಹೀಗಾಗಿ ಆ ಮನೆಯಲ್ಲಿ ಅಣ್ಣಾವ್ರು ಕೊನೆಗಾಲ ಕಳೆಯಬೇಕು ಎಂದುಕೊಂಡಿದ್ದ ಕನಸು ಕನಸಾಗಿಯೇ ಉಳಿದುಹೋಯಿತು. ಆ ಭವ್ಯವಾದ ಮನೆಯಲ್ಲಿ ಇಂದು ಅಣ್ಣಾವ್ರ ತಂಗಿ ನಾಗಮ್ಮ ಮತ್ತು ಅವರ ಕುಟುಂಬದವರು ವಾಸವಾಗಿದ್ದಾರೆ. ಆಗಿನ ಕಾಲದಲ್ಲಿ ಅಣ್ಣಾವ್ರು ಮತ್ತು ಪಾರ್ವತಮ್ಮನವರು ಸಿನಿಮಾ ಚಿತ್ರೀಕರಣ ಮತ್ತು ಕೆಲಸಗಳಲ್ಲಿ ಬ್ಯುಸಿ ಇದ್ದಾಗ, ಅಣ್ಣಾವ್ರ ಮಕ್ಕಳನ್ನು ಮತ್ತು ಮನೆಯನ್ನು ನೋಡಿಕೊಳ್ಳುತ್ತಾ ಇದ್ದದ್ದು ಅಣ್ಣಾವ್ರ ತಂಗಿ ನಾಗಮ್ಮನವರೆ.
ಅಣ್ಣಾವ್ರ ಮಕ್ಕಳಿಗೂ ಸಹ ನಾಗತ್ತೆ ಎಂದರೆ ತುಂಬಾ ಪ್ರೀತಿ. ಹಾಗಾಗಿ ನಾಗಮ್ಮ ಅವರನ್ನೇ ಆ ಮನೆಯಲ್ಲಿ ಇರಿಸಿದ್ದಾರೆ ಅಣ್ಣಾವ್ರ ಮಕ್ಕಳು. ಇನ್ನು ಅಣ್ಣಾವ್ರು ಹುಟ್ಟಿ ಬೆಳೆದ ಆ ಪುಟ್ಟ ಮನೆ ಸಹ ಇನ್ನು ಇದೆ, ಅಣ್ಣಾವ್ರ ನೆನಪಿಗಾಗಿ ಆ ಮನೆಯನ್ನು ಅದೇ ಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ. ಅಣ್ಣಾವ್ರು ತಮ್ಮ ತಂದೆ ತಾಯಿ ಜೊತೆಗೆ ಆಡಿ ಬೆಳೆದ ಆ ಮನೆಯನ್ನು ದೇವಸ್ಥಾನದ ಹಾಗೆ ನೋಡುತ್ತಿದ್ದರು ಅಣ್ಣಾವ್ರು. ಆ ಮನೆಯನ್ನು ಮ್ಯೂಸಿಯಂ ಆಗಿ ಮಾಡಲು ದೊಡ್ಮನೆ ಕುಟುಂಬ ನಿರ್ಧಾರ ಮಾಡಿದೆ.
ಅಣ್ಣಾವ್ರು ಹೋದ ನಂತರ ಅಪ್ಪು ಅವರು ಮತ್ತು ಶಿವಣ್ಣ ಅವರು ಇಬ್ಬರು ಸಹ ಸಮಯ ಸಿಕ್ಕಾಗಲೆಲ್ಲಾ ಗಾಜನೂರಿನ ಮನೆಗೆ ಹೋಗಿ ಸಮಯ ಕಳೆಯುತ್ತಿದ್ದರು. ಅಣ್ಣಾವ್ರ ಮಕ್ಕಳು ಎಲ್ಲರಿಗೂ ಗಾಜನೂರಿನ ಮನೆಯೆಂದರೆ ತುಂಬಾ ಪ್ರೀತಿ ಇತ್ತು. ಇಂದು ಅಣ್ಣಾವ್ರು ಮತ್ತು ಅಪ್ಪು ಅವರು ಇಬ್ಬರು ಸಹ ಇಹಲೋಕ ತ್ಯಜಿಸಿದ್ದಾರೆ. ಗಾಜನೂರಿನ ಮನೆ ಒಂದು ರೀತಿ ಕಳೆಗುಂದಿದೆ ಎಂದರೆ ತಪ್ಪಾಗುವುದಿಲ್ಲ.
Comments are closed.