ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ ಬೀಟ್ ಮಾಡಿದ ಕೆಜಿಎಫ್2.. ನಮ್ಮ ಕನ್ನಡ ಸಿನಿಮಾ ಎಷ್ಟು ಕೋಟಿ ಬಾಚಿದೆ ಗೊತ್ತೇ??
ಕೆಜಿಎಫ್ ಚಾಪ್ಟರ್2 ಸಿನಿಮಾ ಇಂದಿಗೂ ತನ್ನ ಅಬ್ಬರವನ್ನು ನಿಲ್ಲಿಸಿಲ್ಲ. ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ ಕೆಜಿಎಫ್ ಚಾಪ್ಟರ್2. ರಾಕಿ ಭಾಯ್ ನೋಡಲು ವೀಕ್ಷಕರು ಥ್ರಿಲ್ ಆಗಿ, ಪದೇ ಪದೇ ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ಕಲೆಕ್ಷನ್ ಬಗ್ಗೆ ಎರಡನೇ ಮಾತೆ ಇಲ್ಲ. ಬಿಡುಗಡೆಯಾಗಿ ಕೇವಲ 7 ದಿನಕ್ಕೆ ಕೆಜಿಎಫ್2 ಸಿನಿಮಾ ಬರೋಬ್ಬರಿ 719 ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ ಸಿನಿಮಾದ ಕಲೆಕ್ಷನ್ ಇನ್ನು ಹೆಚ್ಚಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ ಅನ್ನೇ ಬೀಟ್ ಮಾಡಿದೆ ಕೆಜಿಎಫ್2.
ಸೂಪರ್ ಸ್ಟಾರ್ ರಜನಿಕಾಂತ್ ಅವರು, ಆಮಿ ಜಾಕ್ಷನ್ ಮುಖ್ಯ ಭೂಮಿಕೆಯಲ್ಲಿ ನಿರ್ದೇಶಕ ಶಂಕರ್ ಅವರು ತಯಾರಿಸಿದ ಬಹಳ ಖ್ಯಾತಿ ಪಡೆದ 2.0 ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ 800 ಕೋಟಿ. ಇದೀಗ ಕೆಜಿಎಫ್2 ಸಿನಿಮಾ 818 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ರಜನಿಕಾಂತ್ ಅವರ ಸಿನಿಮಾವನ್ನು ಹಿಂದಿಕ್ಕಿದೆ ಕೆಜಿಎಫ್2. ಈ ಬಗ್ಗೆ ಖ್ಯಾತ ಅನಾಲಿಸ್ಟ್ ಮನೋಬಾಲ ವಿಜಯಬಾಲನ್ ಅವರು ಟ್ವೀಟ್ ಮಾಡುವ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. ಕೆಜಿಎಫ್2 ಸಿನಿಮಾ ಮಾಡುತ್ತಿರುವ ಈ ದಾಖಲೆಗಳು ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಹೆಸರನ್ನು ತಂದುಕೊಡುತ್ತಿರುವುದಂತೂ ಸತ್ಯ. ವಿಜಯ ಮನೋಬಾಲನ್ ಅವರು ಇನ್ನು ಕೆಲವು ದಿನಗಳಲ್ಲಿ ಆಮೀರ್ ಖಾನ್ ಅವರ ಪಿಕೆ ಸಿನಿಮಾವನ್ನು ಕೆಜಿಎಫ್2 ಬೀಟ್ ಮಾಡುತ್ತದೆ ಎಂದು ಹೇಳಿದ್ದಾರೆ.
ಇದುವರೆಗೂ ಅತಿಹೆಚ್ಚು ಗಳಿಕೆ ಕಂಡ ಟಾಪ್ 10, ಭಾರತೀಯ ಸಿನಿಮಾಗಳು ಇವು.. 1.ದಂಗಲ್ – ₹2024 ಕೋಟಿ, 2.ಬಾಹುಬಲಿ2-₹1810 ಕೋಟಿ, 3.ಆರ್.ಆರ್.ಆರ್-₹1100+ಕೋಟಿ, 4.ಭಜರಂಗಿ ಭಾಯ್ ಜಾನ್-₹969 ಕೋಟಿ, 5.ಸೀಕ್ರೆಟ್ ಸೂಪರ್ ಸ್ಟಾರ್-₹966 ಕೋಟಿ, 6.ಪಿಕೆ-₹854ಕೋಟಿ, 7.ಕೆಜಿಎಫ್2-₹818+ ಕೋಟಿ,
8.2.0-₹800 ಕೋಟಿ, 9.ಬಾಹುಬಲಿ-₹650ಕೋಟಿ, 10.ಸುಲ್ತಾನ್-₹623ಕೋಟಿ.. ನಮ್ಮ ಕನ್ನಡ ಸಿನಿಮಾ ಈ ಲಿಸ್ಟ್ ನಲ್ಲಿ ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಏಪ್ರಿಲ್ 14ರಂದು ಬಿಡುಗಡೆಯಾದ ಸಿನಿಮಾ 818 ಕೋಟಿ ಗಳಿಸಿದೆ, ಆದರೆ ಮುಂದಿನ ದಿನಗಳಲ್ಲಿ ಇನ್ನು ಕೆಲವು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಆಗಲಿರುವುದರಿಂದ, ಕೆಜಿಎಫ್2 ಕಲೆಕ್ಷನ್ ಕಡಿಮೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೆಜಿಎಫ್2 ಎಷ್ಟು ಹಣ ಕಲೆಕ್ಷನ್ ಮಾಡಲಿದೆ ಎಂದು ಕಾದು ನೋಡಬೇಕಿದೆ.
Comments are closed.