ಅಂದು ಬಿಗ್ ಬಾಸ್ ಗೆ ಹೋಗಿದಿದ್ರೆ ಸಂಚಾರಿ ವಿಜಯ್ ರವರು ಬದುಕಿರುತ್ತಿದ್ದರು ಎಂದ ಚಕ್ರವರ್ತಿ ಚಂದ್ರಚೂಡ, ಯಾಕೆ ಅಂತೇ ಗೊತ್ತೇ??
ಸಂಚಾರಿ ವಿಜಯ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ.. ನಾನು ಅವನಲ್ಲ ಅವಳು ಎನ್ನುವ ಸಿನಿಮಾದ ಅದ್ಭುತ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದುಕೊಂಡವರು ಸಂಚಾರಿ ವಿಜಯ್. ವಿಜಯ್ ಅವರು ಈಗ ನಮ್ಮ ಜೊತೆ ಇಲ್ಲ.. ಬಹಳ ಚಿಕ್ಕ ವಯಸ್ಸಿಗೆ ರಸ್ತೆ ಅಪಘಾತದಲ್ಲಿ ಈ ಪ್ರಪಂಚ ಬಿಟ್ಟು ಹೋದರು ವಿಜಯ್. ವಿಜಯ್ ಅವರು ತುಂಬಾ ಸರಳ ಸ್ವಭಾವದವರು, ಕಷ್ಟದಲ್ಲಿ ಹುಟ್ಟಿ ಬೆಳೆದವರು. ವಿಜಯ್ ಅವರು ಬಿಬಿಕೆ8 ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಅವರೊಡನೆ ಬಹಳ ಆತ್ಮೀಯವಾಗಿದ್ದರು. ಚಂದ್ರಚೂಡ್ ಅವರು ವಿಜಯ್ ಅವರ ಬಗ್ಗೆ ಕೆಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ..
ಚಕ್ರವರ್ತಿ ಚಂದ್ರಚೂಡ್ ಮತ್ತು ಸಂಚಾರಿ ವಿಜಯ್ ಇಬ್ಬರು ಸಹ ಉತ್ತಮವಾದ ಸ್ನೇಹಿತರಾಗಿದ್ದರು. ಬಹಳ ವರ್ಷಗಳಿಂದ ಇಬ್ಬರಿಗೂ ಪರಿಚಯವಿತ್ತು. ವಿಜಯ್ ಎಲ್ಲೇ ಹೋದರು ಏನೇ ಕೆಲಸ ಮಾಡಿದರು ಸಹ ಚಂದ್ರಚೂಡ್ ಅವರು ಸಹ ಜೊತೆಯಲ್ಲಿರುತ್ತಿದ್ದರು. ವಿಜಯ್ ಅವರಿಗೆ ರಸ್ತೆ ಅಪಘಾತ ಆಗುವ ಕೆಲವು ದಿನಗಳ ಹಿಂದೆ ವಿಜಯ್ ಅವರಿಗೆ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಬಂದಿತ್ತಂತೆ, ಅದನ್ನು ಒಪ್ಪಿಕೊಂಡು ವಿಜಯ್ ಅವರು ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಹೋಗಿದ್ದರೆ ಇಂದು ವಿಜಯ್ ನಮ್ಮೊಡನೆ ಇರುತ್ತಿದ್ದರು ಎನ್ನುತ್ತಾರೆ ಚಂದ್ರಚೂಡ್. ವಿಜಯ್ ಅವರು ನಟಿಸಿರುವ ಮೇಲೊಬ್ಬ ಮಾಯಾವಿ ಸಿನಿಮಾ ಏಪ್ರಿಲ್ 29ರಂದ್ ಬಿಡುಗಡೆ ಆಗುತ್ತಿದೆ. ಆ ಸಿನಿಮಾ ಬಗೆಗಿನ ಸಂದರ್ಶನದಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ಸಂಚಾರಿ ವಿಜಯ್ ಅವರ ಬಗ್ಗೆ ಮಾತನಾಡಿದ್ದಾರೆ.
“ಆ ರೀತಿ ಆಗುವ ಕೆಲವು ದಿನಗಳ ಹಿಂದೆ ಬಿಗ್ ಬಾಸ್ ಆಫರ್ ಬಂದಿದೆ ನನ್ನ ಹತ್ರ ಕೇಳಿದ್ರು. ‘ಹೋಗಿಬನ್ನಿ ಚೆನ್ನಾಗಿರುತ್ತೆ’ ಅಂತ ನಾನು ಹೇಳಿದ್ದೆ. ಆದರೆ ವಿಜಯ್ ತುಂಬಾ ಹೆದರಿಕೆ ಸ್ವಭಾವದ ವ್ಯಕ್ತಿ. ಏನಾಗುತ್ತೋ ಏನೋ ಎನ್ನುವ ಭಯದಲ್ಲೇ ಬಿಗ್ ಬಾಸ್ ಗೆ ಹೋಗಲಿಲ್ಲ, ನೀವು ಮೊದಲು ಹೋಗಿಬನ್ನಿ, ಬಂದು ಹೇಳಿ ಆಮೇಲೆ ನಾನು ಹೋಗ್ತೀನಿ’ ಎಂದು ಹೇಳಿದ್ದರಂತೆ ವಿಜಯ್. ಆ ಘಟನೆ ನಡೆದ ದಿನ ಸಹ, ಆ ಸಮಯದಲ್ಲಿ ತಮ್ಮ ಕಾರ್ ಮಾರಿ ಜನರಿಗೆ ಸಹಾಯ ಮಾಡಿದ್ದರಂತೆ ವಿಜಯ್. ಅಂದು ಅಭಿಮಾನಿಯೊಬ್ಬ ಖರೀದಿಸಿದ್ದ ಬೈಕ್ ನೋಡಿದ್ದು, ಅಂದು ಆ ಅಭಿಮಾನಿ ಬೈಕ್ ಓಡಿಸಿ ನೋಡಿ ಎಂದು ಹೇಳಿದ್ದು, ಬೈಕ ರೈಡ್ ಮಾಡುವಾಗ ಸ್ಪೀಡ್ ನಲ್ಲಿ ವ್ಯತ್ಯಾಸವಾಗಿ ಆ ದುರ್ಘಟನೆ ನಡೆದು ಹೋಯಿತು ಎಂದು ಬೇಸರದಿಂದ ಹೇಳಿದ್ದಾರೆ ಚಕ್ರವರ್ತಿ ಚಂದ್ರಚೂಡ್..
Comments are closed.