Neer Dose Karnataka
Take a fresh look at your lifestyle.

ಕೊನೆಗೂ ಸಿಕ್ಕಿತು ಸ್ಪಷ್ಟ ಉತ್ತರ, ಕೀರ್ತಿ ಸುರೇಶ್ ರವರು ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಯಾಕಂತೆ ಗೊತ್ತೇ?? ಅವರು ಹೇಳಿರುವುದು ಏನು ಗೊತ್ತೇ?

ಕೀರ್ತಿ ಸುರೇಶ್, ಇವರು ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ. ಈಕೆಯ ಅಭಿನಯ ಜನರನ್ನು ತಲ್ಲೀನರಾಗುವಂತೆ ಮಾಡುತ್ತದೆ. ಮಹಾನಟಿ ಸಿನಿಮಾದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದುಕೊಂಡರು ಕೀರ್ತಿ ಸುರೇಶ್. ಇವರ ತಂದೆ ತಾಯಿ ಇಬ್ಬರು ಸಹ ಚಿತ್ರರಂಗಕ್ಕೆ ಸೇರಿದವರು. ಕೀರ್ತಿ ಸುರೇಶ್ ಅವರ ತಂದೆ ಸುರೇಶ್ ಅವರು ಸಿನಿಮಾ ನಿರ್ಮಾಪಕ, ತಾಯಿ ಮೇನಕ ಅವರು ಸಹ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯಾಗಿದ್ದವರು. ಕನ್ನಡದಲ್ಲಿ ಅಣ್ಣಾವ್ರ ಜೊತೆ ಅಭಿನಯಿಸಿದ್ದಾರೆ ಕೀರ್ತಿ ಸುರೇಶ್ ಅವರ ತಾಯಿ.

ತಾಯಿಯ ಹಾಗೆ ಕೀರ್ತಿ ಸುರೇಶ್ ಅವರು ಸಹ ಮುದ್ದಾಗಿದ್ದಾರೆ. ತಮಿಳು ಚಿತ್ರರಂಗದ ಮೂಲಕ ನಟನೆ ಶುರುಮಾಡಿದ ಕೀರ್ತಿ ಸುರೇಶ್ ಅವರು, ನಂತರ ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಹ ನಟಿಸಿದರು. ಕೀರ್ತಿ ಅವರ ಬೇಡಿಕೆ ಹೆಚ್ಚಿಸಿದ್ದು ತೆಲುಗಿನ ನೇನು ಶೈಲಜಾ ಸಿನಿಮಾ. ಈ ಸಿನಿಮಾ ಸಕ್ಸಸ್ ನಂತರ ಕೀರ್ತಿ ಸುರೇಶ್ ಸ್ಟಾರ್ ನಟರ ಸಿನಿಮಾಗಳಲ್ಲಿ ಅಭಿನಯಿಸಲು ಶುರು ಮಾಡಿದರು. ಕೀರ್ತಿ ಅವರು ಹೆಚ್ಚಾಗಿ ಆರಿಸಿಕೊಳ್ಳುವುದು ಮಹಿಳಾ ಪ್ರಧಾನ ಪಾತ್ರಗಳನ್ನು ಮತ್ತು ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇರುವಂತಹ ಕಥೆಗಳೇ ಅವರನ್ನು ಹುಡುಕಿಕೊಂಡು ಬರುತ್ತವೆ.

ಮಹಾನಟಿ, ಪೆಂಗ್ವಿನ್, ಮಿಸ್ ಇಂಡಿಯಾ, ಗುಡ್ ಲಕ್ ಸಖಿ ಇದೆಲ್ಲವು ಸಹ ಮಹಿಳಾ ಪ್ರಧಾನ ಸಿನಿಮಾಗಳೇ ಆಗಿವೆ. ಕೀರ್ತಿ ಸುರೇಶ್ ಅವರು ಅಭಿಮಾನಿಗಳಿಗೆ ಹೆಚ್ಚು ಇಷ್ಟ ಆಗಲು ಮತ್ತೊಂದು ಕಾರಣ ಇದೆ, ಅದೇನೆಂದರೆ ಕೀರ್ತಿ ಅವರು ಗ್ಲಾಮರ್ ಪಾತ್ರಗಳಲ್ಲಿ, ತುಂಡು ಬಟ್ಟೆ ಧರಿಸಿ ನಟಿಸುವುದಿಲ್ಲ. ಇವರು ಗ್ಲಾಮರಸ್ ರೋಲ್ ಗಳಲ್ಲಿ ಯಾಕೆ ನಟಿಸುವುದಿಲ್ಲ ಎನ್ನುವುದಕ್ಕೆ ಸಹ ಕೀರ್ತಿ ಸುರೇಶ್ ಅವರು ಕಾರಣವನ್ನು ನೀಡಿದ್ದಾರೆ. “ವೃತ್ತಿ ಜೀವನ ಶುರುವಾದಾಗಿನಿಂದಲೂ ಮಹಿಳಾ ಪ್ರಧಾನ ಪಾತ್ರವಿರುವ ಸಿನಿಮಾಗೆ ಆದ್ಯತೆ ನೀಡುತ್ತಿದ್ದೇನೆ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದರಿಂದ ನನಗೆ ನಾನು ಮಿತಿ ಹಾಕಿಕೊಂಡಿದ್ದೇನೆ. ಗ್ಲಾಮರಸ್ ಪಾತ್ರಗಳಿಂದ ದೂರ ಉಳಿಯುವ ನನ್ನ ನಿರ್ಧಾರವನ್ನು ಅಭಿಮಾನಿಗಳು ಸಹ ಮೆಚ್ಚಿಕೊಂಡು, ಪ್ರೋತ್ಸಾಹ ನೀಡುತ್ತಾರೆ ಎಂದು ನಂಬಿದ್ದೇನೆ..” ಎಂದು ಸಂದರ್ಶನ ಒಂದರಲ್ಲಿ ಉತ್ತರ ನೀಡಿದ್ದಾರೆ ಕೀರ್ತಿ ಸುರೇಶ್.

Comments are closed.