ಬಾಲಿವುಡ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್, ನಮ್ಮ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಎಂದದ್ದು ಯಾಕೆ ಗೊತ್ತೇ??
ಈಗೆಲ್ಲಾ ಬಿಡುಗದೆ ಆಗುವ ಸಾಕಷ್ಟು ದಕ್ಷಿಣ ಭಾರತದ ಸಿನಿಮಗಳನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದು ಕರೆಯಲಾಗುತ್ತಿದೆ. ಕನ್ನಡ ಅಥವಾ ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಭಾಷೆ ಡಬ್ ಆಗಿ ಬಿಡುಗಡೆಯಾಗಿ ಸಕ್ಸಸ್ ಕಾಣುತ್ತಿವೆ. ದಕ್ಷಿಣ ಭಾರತದ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದು ಕರೆಯಲಾಗುತ್ತಿದೆ, ಆದರೆ ಬಾಲಿವುಡ್ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದಿಲ್ಲ. ಇದರ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ.
“ಬಾಲಿವುಡ್ ಸಿನಿಮಾಗಳನ್ನು ಹಿಂದಿ ಸಿನಿಮಾ, ಭಾರತದ ಸಿನಿಮಾ ಎಂದು ಬಿಂಬಿಸುತ್ತಾರೆ. ಆದರೆ ದಕ್ಷಿಣ ಭಾರತದ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಸಿನಿಮಾ ಎನ್ನುತ್ತಾರೆ. ಆ ರೀತಿ ಕನ್ನಡ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದು ಯಾಕೆ ಕರೆಯಬೇಕು? ಹೆಮ್ಮೆಯಿಂದ ಕನ್ನಡ ಸಿನಿಮಾ ಎಂದೇ ಕರೆಯೋಣ..” ಎಂದು ಹೇಳಿದ್ದಾರೆ ನಟ ಕಿಚ್ಚ ಸುದೀಪ್ ಅವರು. “ಹಿಂದಿ ಭಾಷೆಯ ಸಿನಿಮಾಗಳ ಹಾಗೆ ಕನ್ನಡ ಭಾಷೆ ಸಹ ಒಂದು ಭಾಷೆ. ಕನ್ನಡ ಸಿನಿಮಾವನ್ನು ಕನ್ನಡ ಸಿನಿಮಾ ಎಂದೇ ಹೆಮ್ಮೆಯಿಂದ ಕರೆಯೋಣ..” ಎಂದು ಕಿಚ್ಚ ಸುದೀಪ್ ಅವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಎಲ್ಲಾ ಭಾಷೆಗೆ ಡಬ್ ಆಗುವ ದಕ್ಷಿಣ ಭಾರತದ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದು ಕರೆಯಲಾಗುತ್ತಿದೆ. ಆದರೆ ಹಿಂದಿ ಸಿನಿಮಾಗಳಿಗೆ ಪ್ಯಾನ್ ಇಂಡಿಯಾ ಎನ್ನುವ ಶಬ್ಧವನ್ನೇ ಬಳಸುವುದಿಲ್ಲ. ಹಾಗಾಗಿ ಈ ಪ್ಯಾನ್ ಇಂಡಿಯಾ ಎನ್ನುವ ಪದವನ್ನೇ ತೆಗೆದುಹಾಕಬೇಕು ಎಂದು ಹೇಳಿದ್ದಾರೆ ಕಿಚ್ಚ ಸುದೀಪ್. ಹಿಂದಿ ಸಿನಿಮಾಗಳು ದಕ್ಷಿಣ ಭಾರತದ ಭಾಷೆಗಳಿಗೆ ಡಬ್ ಮಾಡಲು ಕಷ್ಟಪಡಲಾಗುತ್ತಿದೆ, ಆದರೆ ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಭಾಷೆಗೆ ಬಿಡುಗಡೆಯಾಗಿ ಯಶಸ್ಸು ಕಾಣುತ್ತಿವೆ. ಹಾಗಾಗಿ ಭಾರತದ ಸಿನಿಮಾ ಯಾವುದು ಎಂದು ಯೋಚನೆ ಮಾಡಬೇಕಾಗಿದೆ ಎಂದು ಮಹತ್ವದ ಮಾತುಗಳನ್ನಾಡಿದ್ದಾರೆ ಕಿಚ್ಚ ಸುದೀಪ್ ಅವರು. ಇನ್ನು ಸುದೀಪ್ ಅವರು ಅಭಿನಯಿಸಿರುವ ವಿಕ್ರಾಂತ್ ರೋಣ ಸಿನಿಮಾ ಸಹ 10ಕ್ಕಿಂತ ಹೆಚ್ಚು ಭಾಷೆಗೆ ಡಬ್ ಆಗಿ, ಬಿಡುಗಡೆ ಆಗಲಿದೆ.
Comments are closed.