ಬಿಳಿ ಬಣ್ಣದ ಕಾರು ಖರೀದಿ ಮಾಡಿದ ಯಶಸ್ವಿನಿ ಆನಂದ್, ಕಾರಿನ ವಿಶೇಷತೆ ಹಾಗೂ ಬೆಲೆ ಎಷ್ಟು ಗೊತ್ತೇ??
ಮಾಸ್ಟರ್ ಆನಂದ್, ಚಂದನವನದ ಖ್ಯಾತ ಬಾಲನಟ, ಇಂದಿಗೂ ಸಹ ಆನಂದ್ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾರೆ. ಪ್ರಸ್ತುತ ಆನಂದ್ ಅವರು ಡ್ರಾಮಾ ಜ್ಯೂನಿಯರ್ಸ್ ಶೋ ನಿರೂಪಣೆ ಮಾಡುತ್ತಿದ್ದಾರೆ. ಇನ್ನು ಆನಂದ್ ಅವರ ಪತ್ನಿ ಮತ್ತು ಮಕ್ಕಳ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ, ಇವರಿಬ್ಬರು ಈಗ ಬಹಳ ಫೇಮಸ್ ಆಗಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಶೋ ಮೂಲಕ, ವಂಶಿಕಾ ಈಗ ಕರ್ನಾಟಕದ ಫೇವರೆಟ್ ಕ್ಯೂಟ್ ಬೇಬಿ ಆಗಿದ್ದಾಳೆ ಅಂದರೆ ತಪ್ಪಾಗುವುದಿಲ್ಲ. ವಂಶಿಯ ಮುದ್ದು ಮಾತುಗಳನ್ನು ಎಲ್ಲರೂ ಎಂಜಾಯ್ ಮಾಡುತ್ತಿದ್ದಾರೆ..
ವಂಶಿಕಾ ಅಂಜನಿ ಕಶ್ಯಪ ಎಂದು ನನ್ನಮ್ಮ ಸೂಪರ್ ಸ್ಟಾರ್ ಮೊದಲ ಎಪಿಸೋಡ್ ನಲ್ಲಿ ಹೇಳಿದ್ದು ಕೇಳಿಗಯೇ ಎಲ್ಲರೂ ಫಿದಾ ಆಗಿದ್ದರು. ಶಾಲೆಗೆ ಸೇರುವ ಮೊದಲೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿರುವ ವಂಶಿಕಾ, ತಂದೆಯ ಹಾಗೆ ಪ್ರತಿಭಾವಂತೆ. ಚಿಕ್ಕ ವಯಸ್ಸಿಗೆ ಎಲ್ಲಾ ಡೈಲಾಗ್ಸ್ ನೆನಪಿಟ್ಟುಕೊಂಡು ಹೇಳುವ ಬುದ್ಧಿವಂತೆ ವಂಶಿಕಾ. ಈ ಮುದ್ದು ಮತ್ತು ಅವರ ತಾಯಿ ಯಶಸ್ವಿನಿ ಇಬ್ಬರು ನನ್ನಮ್ಮ ಸೂಪರ್ ಸ್ಟಾರ್ ಶೋ ವಿನ್ನರ್ ಆಗಿ ಹೊರಹೊಮ್ಮಿದರು. ವಿನ್ನರ್ ಗಳಾಗಿ ಇವರಿಗೆ ಭಾರಿ ಮೊತ್ತ ಬಹುಮಾನವಾಗಿ ಸಹ ಸಿಕ್ಕಿದೆ. ಇದೀಗ ಈ ಅಮ್ಮ ಮಗಳು ಹೊಸ ಕಾರ್ ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ವಿಶೇಷ ಅಂದ್ರೆ ಇವರ ಜೊತೆ ನಿವೇದಿತಾ ಗೌಡ ಸಹ ಇದ್ದರು.
“ನನ್ನ ಹೊಸ ಸಾರಥಿ.. ನಿವೇದಿತಾ ಗೌಡ ತುಂಬಾ ಖುಷಿ ಆಯ್ತು ಮಾ ನೀನು ಬಂದಿದ್ದು..ಲವ್ ಯೂ ಬೇಬಿ..ವಂಶಿಕಾ ಅಪ್ಪನ ಮಗಳು ಫುಲ್ ಹ್ಯಾಪಿ.. ಲವ್ ಯೂ ಬುಡಕ್ಕ..” ಎಂದು ಬರೆದುಕೊಂಡಿದ್ದಾರೆ ಯಶಸ್ವಿನಿ. ಹೊಸ ಕಾರ್ ಖರೀದಿ ಮಾಡಿರುವ ಅಮ್ಮ ಮಗಳು ಇಬ್ಬರು ಸಹ ಬಹಳ ಸಂತೋಷಪಟ್ಟಿದ್ದಾರೆ. ಇನ್ನು ನನ್ನಮ್ಮ ಸೂಪರ್ ಸ್ಟಾರ್ ಶೋ ಸಕ್ಸಸ್ ನಂತರ, ವಂಶಿಕಾ ಈಗ ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದು, ವಂಶಿಕಾ ಡ್ರಾಮಾ ಮಾಡುತ್ತಿರುವ ಪರಿಗೆ ಜಡ್ಜ್ ಗಳೇ ಶಾಕ್ ಆಗಿದ್ದಾರೆ. ವಂಶಿಕಾ ಇರುವುದರಿಂದ ಗಿಚ್ಚಿ ಗಿಲಿ ಗಿಲಿ ಟಿ.ಆರ್.ಪಿ ಸಹ ಜಾಸ್ತಿಯಾಗಿದೆ ಎನ್ನುತ್ತಿದೆ ಚಾನೆಲ್ ನ ಮೂಲಗಳು, ಚಿಕ್ಕ ವಯಸ್ಸಿನಲ್ಲೇ ಇಷ್ಟು ಫೇಮಸ್ ಆಗಿರುವ ವಂಶಿಕಾ ಮುಂದೆ ಸಹ ಹೀಗೆ ಇರಲಿ ಎಂದು ಹಾರೈಸೋಣ.
Comments are closed.