Neer Dose Karnataka
Take a fresh look at your lifestyle.

ತಮಗಿಂತ ಹೆಚ್ಚಿನ ವಯಸ್ಸಿನ ಅಂತರವನ್ನು ಹೊಂದಿರುವ ಮಹಿಳೆಯರನ್ನು ಮದುವೆಯಾಗಿರುವ ರಾಜಕಾರಣಿಗಳು ಯಾರ್ಯಾರು ಗೊತ್ತೇ?? ವಯಸ್ಸಿನ ಅಂತರ ಎಷ್ಟಿದೆ ಗೊತ್ತೇ??

10

ನಮ್ಮ ದೇಶದಲ್ಲಿ ಸಾಕಷ್ಟು ರಾಜಕಾರಣಿಗಳಿದ್ದಾರೆ, ಹಲವರು ಅವರವರ ಹುದ್ದೆಗೆ, ಜನರಿಗೆ, ಅವರ ಆಡಳಿತ ಇರುವ ನಗರ ಪ್ರದೇಶಗಳಿಗೆ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಕೆಳವು ರಾಜಕಾರಣಿಗಳು, ಆಯಾ ರಾಜ್ಯ ಅಥವಾ ಆ ಪ್ರಾಂತ್ಯಗಳಿಗೆ ಮಾತ್ರ ಫೇಮಸ್ ಆಗಿದ್ದರೆ, ಇನ್ನು ಕೆಲವರು ಸೆಂಟ್ರಲ್ ಮಿನಿಸ್ಟರ್ ಗಳಾಗಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ರಾಜಕಾರಣಿಗಳು ಹಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಂದು ನಾವು ನಿಮಗೆ ರಾಜಕೀಯ ನಾಯಕರ ಬಗ್ಗೆ ಕೆಲವು ವಿಶಿಷ್ಟವಾದ ಮಾಹಿತಿ ನೀಡಲಿದ್ದೇವೆ..ಇದು ಅವರ ಕೆಲಸದ ಬಗ್ಗೆ ಅಲ್ಲ, ಬದಲಾಗಿ ತಮಗಿಂತ ಕಿರಿಯ ವಯಸ್ಸಿನ ಹುಡುಗಿ ಜೊತೆ ಮದುವೆ ಆಗಿರುವ ರಾಜಕಾರಣಿಗಳು ಯಾರ್ಯಾರು ಎನ್ನುವುದರ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ..

ಹೆಚ್.ಡಿ.ಕುಮಾರಸ್ವಾಮಿ :- ಕರ್ನಾಟಕದ ಮಾಜಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವವರು ಹೆಚ್.ಡಿ.ಕುಮಾರಸ್ವಾಮಿ. ಇವರು ಸ್ಯಾಂಡಲ್ ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಅವರ ಜೊತೆ ಎರಡನೇ ಮದುವೆಯಾದರು. ಹೆಚ್.ಡಿ.ಕೆ ಮತ್ತು ರಾಧಿಕಾ ಅವರಿಗೆ ಶಮಿಕಾ ಹೆಸರಿನ ಒಬ್ಬ ಮಗಳು ಸಹ ಇದ್ದಾರೆ. ಕುಮಾರಸ್ವಾಮಿ ಅವರು ರಾಧಿಕಾ ಅವರಿಗಿಂತ 27 ವರ್ಷಕ್ಕೆ ದೊಡ್ಡವರು. ಇಲ್ಲಿ ನೀವು ಗಮನಿಸಬೇಕಾದ ವಿಚಾರ ಏನೆಂದರೆ, ಕುಮಾರಸ್ವಾಮಿ ಅವರು ಮೊದಲ ಬಾರಿ ಮದುವೆಯಾದ ವರ್ಷವೇ ರಾಧಿಕಾ ಅವರು ಹುಟ್ಟಿದ್ದು.

ದಿಗ್ವಿಜಯ್ ಸಿಂಗ್ :- ದಿಗ್ವಿಜಯ್ ಸಿಂಗ್ ಅವರ ಎರಡನೇ ಮದುವೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ. ಇವರ ಮೊದಲ ಪತ್ನಿ ಆಶಾದೇವಿ ಅವರು ಇನ್ನಿಲ್ಲವಾದ ನಂತರ 2015ರಲ್ಲಿ ಪತ್ರಕರ್ತೆ ಅಮೃತಾ ರಾಯ್ ಅವರೊಡನೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಇವರಿಬ್ಬರ ನಡುವೆ ಬರೊಬ್ಬರಿ 25 ವರ್ಷಗಳ ವಯಸ್ಸಿನ ವ್ಯತ್ಯಾಸ ಇದೆ.

ರಾಮ್ ವಿಲಾಸ್ ಪಾಸ್ವಾನ್ :- ಇವರು ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಲೋಕ್ ಶಕ್ತಿ ಪಾರ್ಟಿಯ ನಾಯಕರಾಗಿದ್ದಾರೆ. ಪಾಸ್ವಾನ್ ಅವರು 1981ರಲ್ಲಿ ಮೊದಲ ಪತ್ನಿ ರಾಜಕುಮಾರಿ ದೇವಿ ಅವರಿಗೆ ವಿಚ್ಛೇದನ ನೀಡುತ್ತಾರೆ. ನಂತರ 1983ರಲ್ಲಿ ರೀನಾ ಶರ್ಮಾ ಅವರ ಜೊತೆ ಮದುವೆಯಾಗುತ್ತಾರೆ. ರಾಮ್ ವಿಲಾಸ್ ಮತ್ತು ರೀನಾ ಶರ್ಮಾ ಅವರ ನಡುವೆ 19 ವರ್ಷಗಳ ವಯಸ್ಸಿನ ವ್ಯತ್ಯಾಸ ಇದೆ.

ಲಾಲೂ ಪ್ರಸಾದ್ ಯಾದವ್ :- ಇವರು ಬಿಹಾರದಲ್ಲಿ ಬಹಳ ಜನಪ್ರಿಯತೆ ಪಡೆದಿರುವ ಪ್ರಬಲವಾದ ರಾಜಕಾರಣಿ. ಇವರನ್ನು ಇಡೀ ಭಾರತ ದೇಶದಲ್ಲಿ ಗುರುತಿಸಲಾಗುತ್ತದೆ. ಸಧ್ಯಕ್ಕೆ ಇವರು ರಾಜಕೀಯದಿಂದ ದೂರವಾಗಿ, ಆಸ್ಪತ್ರೆಗೆ ದೂರವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾಲೂ ಪ್ರಸಾದ್ ಅವರು ರಬಡಿ ದೇವಿ ಅವರೊಡನೆ ವಿವಾಹವಾದರು. ಇವರಿಬ್ಬರ ನಡುವೆ 11 ವರ್ಷಗಳ ವಯಸ್ಸಿನ ವ್ಯತ್ಯಾಸ ಇದೆ.

ದೇವೇಂದ್ರ ಘಡ್ನವಿಸ್  :- ಇವರು ಮಹಾರಾಷ್ಟ್ರ ರಾಜ್ಯದ ಮಾಜಿ ಮುಖ್ಯಮಂತ್ರಿ, ಅಲ್ಲಿನ ಜನರಿಗೆ ಇವರನ್ನು ಕಂಡರೆ ಅಚ್ಚುಮೆಚ್ಚು. ಇವರು ಅಮೃತಾ ಅವರ ಜೊತೆ ಮದುವೆಯಾದರು. ಅಮೃತಾ ಅವರು ಸಿಂಗರ್ ಆಗಿ ಗುರುತಿಸಿಕೊಂಡಿದ್ದು, ಸಾಮಾಜಿಕ ಕಾರ್ಯಗಳಲ್ಲಿ ಸಹ ತೊಡಗಿಸಿಕೊಂಡಿದ್ದಾರೆ. ಇವರಿಬ್ಬರ ನಡುವೆ ಇರುವ ವಯಸ್ಸಿನ ವ್ಯತ್ಯಾಸ 9 ವರ್ಷಗಳು. ಈ ಜೋಡಿಯನ್ನು ಕಂಡರೆ ಅಲ್ಲಿನ ಜನತೆಗೆ ಅಚ್ಚುಮೆಚ್ಚು. ಈ ಜೋಡಿಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..

Leave A Reply

Your email address will not be published.