Neer Dose Karnataka
Take a fresh look at your lifestyle.

ವಿಷ್ಣು ದಾದಾ ರವರ ಭೂತಯ್ಯನ ಮಗ ಅಯ್ಯ ಚಿತ್ರಕ್ಕೂ ಅಣ್ಣಾವ್ರಿಗೂ ಇರುವ ಸಂಬಂಧವೇನು ಗೊತ್ತೇ?? ತೆರೆಮರೆಯ ಹಿಂದಿನ ವಿಚಾರವೇನು ಗೊತ್ತೇ??

ಕನ್ನಡ ಚಿತ್ರರಂಗ ಎಂದು ಹೇಳಿದ ತಕ್ಷಣ ಎಲ್ಲರಿಗೂ ನೆನಪಾಗುವ ಹೆಸರು ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಉದಯ ಕುಮಾರ್, ರೆಬೆಲ್ ಸ್ಟಾರ್ ಅಂಬರೀಶ್, ಶಂಕರ್ ನಾಗ್, ಅನಂತ್ ನಾಗ್ ಹೀಗೆ ಪ್ರತಿಭಾನ್ವಿತ ನಟರು ನೆನಪಾಗುತ್ತಾರೆ. ಇವರೆಲ್ಲರೂ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆಗಳು ಅಪಾರವಾದದ್ದು. ಆಗಿನ ಕಾಲದಲ್ಲಿ ಇವರು ನಟಿಸಿರುವ ಸಿನಿಮಾಗಳು, ಇಂದಿಗೂ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಅಂಶಗಳನ್ನು ಒಳಗೊಂಡಿದೆ.

ಕನ್ನಡ ಚಿತ್ರರಂಗದ ಎರಡು ಮುಖ್ಯವಾದ ಪಿಲ್ಲರ್ ಗಳು ಎಂದು ಅಣ್ಣಾವ್ರು ಮತ್ತು ವಿಷ್ಣುದಾದ ಅವರನ್ನು ಕರೆಯಲಾಗುತ್ತಿತ್ತು. ಇವರಿಬ್ಬರಿಗೂ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಬಹಳ ಪ್ರೀತಿ, ಗೌರವ, ಅಭಿಮಾನ ಎಲ್ಲವು ಇತ್ತು. ಆದರೆ ಕೆಲವು ಕಿಡಿಗೇಡಿಗಳು ಇವರಿಬ್ಬರ ಬಗ್ಗೆ ಇಲ್ಲ ಸಲ್ಲದ ವಿಚಾರಗಳನ್ನು ಹಬ್ಬಸಿದ್ದರು. ಆದರೆ ವಿಷ್ಣುವರ್ಧನ್ ಅವರಿಗೆ ಅಣ್ಣಾವ್ರ ಮೇಲೆ ಅಥವಾ ಅಣ್ಣಾವ್ರಿಗೆ ವಿಷ್ಣುದಾದ ಅವರ ಮೇಲೆ ಯಾವುದೇ ಬೇಸರ ಇರಲಿಲ್ಲ. ಇದಕ್ಕೆ ಒಂದು ಉದಾಹರಣೆ ಸಹ ಇದೆ. ಗಂಧದಗುಡಿ ಸಿನಿಮಾದಲ್ಲಿ ನಡೆದ ಒಂದು ಘಟನೆಯಿಂದ ಅಣ್ಣಾವ್ರು ಮತ್ತು ವಿಷ್ಣುದಾದ ಅವರ ಬಗ್ಗೆ ಕೆಲವು ಕಿಡಿಗೇಡಿಗಳು ಬೇಡದ ಮಾತುಗಳನ್ನು ಹಬ್ಬಿಸಿದ್ದರು..

ಆದರೆ ಬೇಸರ ಅಥವಾ ಇನ್ನೇನು ಇವರಿಬ್ಬರ ನಡುವೆ ಇರಲಿಲ್ಲ. ಗಂಧದಗುಡಿ ಸಿನಿಮಾ ನಂತರ 1973 ರಲ್ಲಿ ವಿಷ್ಣುವರ್ಧನ್ ಅವರು ಅಭಿನಯಿಸಿದ ಭೂತಯ್ಯನ ಮಗ ಅಯ್ಯು ಸಿನಿಮಾ ತೆರೆಕಂಡಿತು. ಈ ಸಿನಿಮಾ ಬಗ್ಗೆ ಇಂದಿಗೂ ಸಾಕಷ್ಟು ಜನರು ಮಾತನಾಡುತ್ತಾರೆ. 70ರ ದಶಕದಲ್ಲಿ ತೆರೆಕಂಡ ಅದ್ಭುತವಾದ ಸಿನಿಮಾ ಇದು, ಇದರ ಪ್ರಮುಖ ಪಾತ್ರಗಳು ಭೂತಯ್ಯ, ಅಯ್ಯು ಮತ್ತು ಗುಳ್ಳ, ಈ ಮೂರು ಪಾತ್ರಗಳು ಹಲವು ಕಾರಣಗಳಿಂದ ಕೋರ್ಟ್ ಕಛೇರಿ ಅಲೆಯುವ ಹಾಗೆ ಆದಾಗ, ಏನೆಲ್ಲಾ ಆಯಿತು, ಇವರ ಸ್ನೇಹ ಸಂಬಂಧಗಳು ಹೇಗಿರುತ್ತದೆ ಎನ್ನುವುದನ್ನು ಅದ್ಭುತವಾಗಿ ತೋರಿಸಲಾಗಿದೆ.

ಈ ಸಿನಿಮಾ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದಿರುವ ಕಾದಂಬರಿ ಆಧಾರಿತ ಸಿನಿಮಾ ಆಗಿತ್ತು, ಈ ಸಿನಿಮಾವನ್ನು ಬಂಗಾರದ ಮನುಷ್ಯ ಸಿನಿಮಾ ನಿರ್ದೇಶನ ಮಾಡಿದ್ದ ಸಿದ್ದಲಿಂಗಯ್ಯ ಅವರು ನಿರ್ದೇಶನ ಮಾಡಿದರು, ಸಿನಿಮಾ ಕೈಗೆತ್ತಿಕೊಂಡಾಗಲೇ, ಗುಳ್ಳ ಪಾತ್ರಕ್ಕೆ ವಿಷ್ಣುವರ್ಧನ್ ಅವರು, ಅಯ್ಯು ಪಾತ್ರಕ್ಕೆ ಲೋಕೇಶ್ ಅವರೇ ನಟಿಸಬೇಕು ಎಂದು ಸಿದ್ದಲಿಂಗಯ್ಯ ಅವರು ನಿರ್ಧಾರ ಮಾಡಿದ್ದರಂತೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಏನೆಂದರೆ, ಈ ಸಿನಿಮಾಗೆ ನಾಲ್ವರು ನಿರ್ಮಾಪಕರು.

ಎನ್.ವೀರಾಸ್ವಾಮಿ ಅವರು, ಚಂದುಲಾಲ್ ಜೈನ್ ಅವರು, ಸಿದ್ದಲಿಂಗಯ್ಯ ಅವರು ಹಾಗೂ ಮತ್ತೊಬ್ಬ ನಿರ್ಮಾಪಕರು ಎಸ್.ಪಿ.ವರದರಾಜ್ ಅವರು ಅಂದ್ರೆ ಅಣ್ಣಾವ್ರ ತಮ್ಮ ವರದಪ್ಪನವರು. ಒಂದು ವೇಳೆ ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಅವರ ನಡುವೆ ವೈಮನಸ್ಸು ಇತ್ತು ಎನ್ನುವುದಾದರೆ, ಅಣ್ಣಾವ್ರ ತಮ್ಮನೇ ನಿರ್ಮಾಪಕ ಆಗಿದ್ದ ಕಾರಣ, ವಿಷ್ಣುವರ್ಧನ್ ಅವರು ನಟಿಸುವುದು ಬೇಡ ಎಂದು ಅಣ್ಣಾವ್ರು ಹೇಳಬಹುದಿತ್ತು. ಅದೇ ರೀತಿ ವಿಷ್ಣುದಾದ ಅವರು ಸಹ ವರದಪ್ಪ ಅವರು ಸಿನಿಮಾ ನಿರ್ಮಾಪಕರಲ್ಲಿ ಒಬ್ಬತು ಎನ್ನುವುದಾದರೆ ನಾನು ನಟಿಸುವುದಿಲ್ಲ ಎಂದು ಹೇಳಬಹುದಿತ್ತು.

ಆದರೆ ಇಬ್ಬರು ಆ ರೀತಿ ಮಾಡಲಿಲ್ಲ, ಭೂತಯ್ಯನ ಮಗ ಅಯ್ಯು ಸಿನಿಮಾದ 100ನೇ ದಿನದ ಸಂಭ್ರಮಾಚಾರಣೆಗೆ ಅಣ್ಣಾವ್ರು ವಿಶೇಷ ಅತಿಥಿಯಾಗಿ ಬಂದಿದ್ದರು. ಇದೆಲ್ಲಾ ಕೇಳಿದರೆ ಗೊತ್ತಾಗುತ್ತದೆ. ಇವರಿಬ್ಬರ ನಡುವೆ ಯಾವ ವೈಮನಸ್ಸು ಅಥವಾ ಜಗಳ ಏನು ಇರಲಿಲ್ಲ. ಅದೆಲ್ಲವು ಕೆಲವು ಕಿಡಿಗೇಡಿಗಳು ಮಾಡಿದ ಕೆಲಸ, ಆದರೆ ಅದರಿಂದ ಈ ಇಬ್ಬರು ಕಲಾವಿದರಿಗೆ ನೋವಾಗಿದ್ದಂತೂ ಖಂಡಿತ.

Comments are closed.