ಗೆದ್ದರು ಕೂಡ ಸಿಟ್ಟು ಮಾಡಿಕೊಂಡ ಕೆ ಎಲ್, ರಾಹುಲ್. ಪಂದ್ಯ ಮುಗಿದ ಬಳಿಕ ಹೇಳಿದ್ದೇನು ಗೊತ್ತೇ??
ಈ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಲಕ್ನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ. ಗುಜರಾತ್ ತಂಡವು ಒಳ್ಳೆಯ ರೀತಿಯಲ್ಲಿ ಪ್ರದರ್ಶನ ನೀಡುತ್ತಿದ್ದು, ಕಳೆದ ಪಂದ್ಯವನ್ನು ಗೆದ್ದು 12 ಪಾಯಿಂಟ್ಸ್ ಗಳಿಸಿ, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ನಿನ್ನೆಯ ಪಂದ್ಯದಲ್ಲಿ ಲಕ್ನೌ ತಂಡದ ಬೌಲಿಂಗ್ ಪ್ರದರ್ಶನ ಅದ್ಭುತವಾಗಿತ್ತು, ಅದರಿಂದಾಗಿ ತಂಡ ಗೆಲುವನ್ನು ಸಾಧಿಸಿತು, ಅದರೆ ಬ್ಯಾಟಿಂಗ್ ಪ್ರದರ್ಶನ ಕಳಪೆಯಾಗಿದ್ದ ಕಾರಣ ಕಡಿಮೆ ರನ್ ಗಳನ್ನು ಗಳಿಸುವ ಹಾಗಾಯಿತು. ಇದರ ಬಗ್ಗೆ ತಂಡದ ನಾಯಕ ಕೆ.ಎಲ್.ರಾಹುಲ್ ಅವರು ಅಸಮಾಧಾನಗೊಂಡು ಕೆಲವು ಮಾತುಗಳನ್ನಾಡಿದ್ದಾರೆ..
ನಿನ್ನೆಯ ಪಂದ್ಯದಲ್ಲಿ ಲಕ್ನೌ ತಂಡ 153 ರನ್ ಗಳನ್ನು ಗಳಿಸಿತ್ತು, ಬೌಲಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನ ಉತ್ತಮವಾಗಿದ್ದ ಕಾರಣ ನಿನ್ನೆಯ ಪಂದ್ಯ ಗೆಲುವನ್ನು ಕಂಡಿತು. ಇದರ ಬಗ್ಗೆ ತಂಡದ ನಾಯಕ ಕೆ.ಎಲ್.ರಾಹುಲ್ ಮಾತನಾಡಿದ್ದು ಹೀಗೆ, “ಮೊದಲ ಇನ್ನಿಂಗ್ಸ್ ನಲ್ಲಿ ನಮ್ಮ ಪ್ರದರ್ಶನ ಕೆಟ್ಟದಾಗಿತ್ತು, ಅದೊಂದು ಮೂರ್ಖತನದ ಬ್ಯಾಟಿಂಗ್ ಆಗಿತ್ತು, ಅದರ ಬಗ್ಗೆ ನಾವು ಚರ್ಚೆ ನಡೆಸಬೇಕು..” ಎಂದಿದ್ದಾರೆ ರಾಹುಲ್. “ಇದು ಉತ್ತಮವಾದ ಪಿಚ್ ಅಲ್ಲ ಎನ್ನುವುದು ಗೊತ್ತಾಗಿತ್ತು, ಹಾಗಾಗಿ ಎರಡನೇ ಇನ್ನಿಂಗ್ಸ್ ಆರಂಭವಾಗುವ ಮೊದಲು 140 ರನ್ ಗಳ ಒಳಗೆ ಎದುರಾಳಿ ತಂಡವನ್ನು ಸೋಲಿಸಬೇಕು ಎಂದುಕೊಂಡಿದ್ದೆವು. ಉತ್ತಮವಾದ ಬೌಲಿಂಗ್ ಪ್ರದರ್ಶನ ತಂಡದ ಗೆಲುವಿಗೆ ಸಹಾಯ ಮಾಡಿತು.. ನಮ್ಮ ತಂಡದ ಬ್ಯಾಟಿಂಗ್ ಪ್ರದರ್ಶನ ಇನ್ನು ಸುಧಾರಿಸಬೇಕು. ಡಿಕಾಕ್ ಮತ್ತು ಹೂಡ ಬ್ಯಾಟಿಂಗ್ ಮಾಡುವಾಗ, 9 ಓವರ್ ಗಳಲ್ಲಿ 60 ಗಳಿಸಿದ್ದು ಮೆಚ್ಚಬೇಕಾದ ವಿಚಾರ..” ಎಂದಿದ್ದಾರೆ ರಾಹುಲ್.
“ಎದುರಾಳಿ ತಂಡವನ್ನು ಬೌಲಿಂಗ್ ಮೂಲಕ ಸೋಲಿಸಿದ್ದು ಅದ್ಭುತವಾಗಿತ್ತು. ಈ ಬಾರಿ ಕೃನಾಲ್ ಪಾಂಡ್ಯ ಅವರ ಬೌಲಿಂಗ್ ಪವರ್ ಫುಲ್ ಆಗಿತ್ತು, ಬೌಲಿಂಗ್ ಬಗ್ಗೆ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಮಧ್ಯಮ ಓವರ್ ನಡೆಯುವಾಗ ಅವರು ಎರಡು ಮೂರು ವಿಕೆಟ್ ಗಳನ್ನು ತೆಗೆದರು. ರವಿ ಬಿಶ್ನೋಯ್ ಅವರು ಸಹ ಉತ್ತಮವಾದ ಬೌಲರ್ ಆಗಿದ್ದಾರೆ..ಇವರು ಬೌಲಿಂಗ್ ಮಾಡುವಾಗ ಕೆಲವು 6 ಮತ್ತು 4 ಗಳು ಹೋದವು, ಆದರೆ ಅದು ವಿಕೆಟ್ ಕೀಳುವ ಪ್ರಯತ್ನವಾಗಿತ್ತು. ನಮ್ಮ ತಂಡದ ಫೀಲ್ಡಿಂಗ್ ಚೆನ್ನಾಗಿತ್ತು, ಕೆಟ್ಟದಾದ ಮೊದಲ ಇನ್ನಿಂಗ್ಸ್ ಇಂದ ಡೀಮೋಟಿವೇಟ್ ಆಗದೆ, ಎರಡನೇ ಇನ್ನಿಂಗ್ಸ್ ನಲ್ಲಿ ಉತ್ತಮವಾದ ಪ್ರದರ್ಶನ ಕಂಡುಬಂದಿತು. ಮೊದಲ ಇನ್ನಿಂಗ್ಸ್ ನಲ್ಲಿ ವಿಕೆಟ್ ನೀಡದೆ ತಡೆದಿಟ್ಟುಕೊಳ್ಳಬಹುದಿತ್ತು. ಹೊಸ ಬಾಲ್ ನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ, ಬಾಲ್ ಸ್ವಿಂಗ್ ಬೌನ್ಸ್ ಆಗುತ್ತದೆ. ಅದನ್ನು ಎಚ್ಚರಿಕೆಯಿಂದ ಗಮನಿಸಿದ್ದರೆ ಪಂದ್ಯವನ್ನು ಇನ್ನು ಚೆನ್ನಾಗಿ ಆಡಬಹುದಿತ್ತು..”, ಎಂದಿದ್ದಾರೆ ರಾಹುಲ್..
Comments are closed.