ತೆಲುಗಿನ ಸ್ಟಾರ್ ನಟ ಎನ್ಟಿಆರ್ ಸಿನಿಮಾ ದಿಂದ ಹಿಂದೆ ಸರಿ ಆಲಿಯಾ ಭಟ್, ಕನ್ನಡತಿಗೆ ಸಿಕ್ತು ಸಕತ್ ಚಾನ್ಸ್. ಅದೃಷ್ಟ ಕುಲಾಯಿಸಿ ಚಾನ್ಸ್ ಪಡೆದದ್ದು ಯಾರು ಗೊತ್ತೇ?
ಯಂಗ್ ಟೈಗರ್ ಜ್ಯೂನಿಯರ್ ಎನ್.ಟಿ.ಆರ್ ಅವರು ಆರ್.ಆರ್.ಆರ್ ಸಿನಿಮಾದ ಅದ್ವಿತೀಯ ಯಶಸ್ಸಿನಿಂದ ಅವರ ಬುತ್ತಿಗೆ ಮತ್ತೊಂದು ಬ್ಲಾಕ್ ಬಸ್ಟರ್ ಸೇರ್ಪಡೆಯಾಗಿದೆ. ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಆರ್.ಆರ್.ಆರ್ ಸಿನಿಮಾವನ್ನು ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ನಿರ್ದೇಶನ ಮಾಡಿದ್ದಾರೆ. ಕಳೆದ ತಿಂಗಳು ಬಿಡುಗಡೆಯಾದ ಆರ್.ಆರ್.ಆರ್ ಸಿನಿಮಾ ವಿಶ್ವಾದ್ಯಂತ ಬ್ಲಾಕ್ ಬಸ್ಟರ್ ಹಿಟ್ ಆಗಿ, 1000 ಕೋಟಿ ಹಣಗಳಿಸಿ ಹೆಸರು ಮಾಡಿದೆ.
ಆರ್.ಆರ್.ಆರ್ ಸಿನಿಮಾ ಬಳಿಕ ಜ್ಯೂನಿಯರ್ ಎನ್.ಟಿ.ಆರ್ ಅವರು ಕೊರಟಲ ಶಿವ ಅವರ ನಿರ್ದೇಶನದಲ್ಲಿ ಹೊಸ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇನ್ನು ಈ ಸಿನಿಮಾಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ಆಲಿಯಾ ಭಟ್ ಬಣ್ಣ ಹಚ್ಚುತ್ತಾರೆ ಎಂದು ಸಹ ಹೇಳಲಾಗಿತ್ತು. ಆರ್.ಆರ್.ಆರ್ ಸಿನಿಮಾದಲ್ಲಿ ರಾಮ್ ಚರಣ್ ಅವರಿಗೆ ನಾಯಕಿಯಾಗಿದ್ದ ಆಲಿಯಾ ಭಟ್, ಈ ಹೊಸ ಸಿನಿಮಾದಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಅವರಿಗೆ ನಾಯಕಿಯಾಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. #ಎನ್.ಟಿ.ಆರ್30 ಸಿನಿಮಾಗೆ ನಾಯಕಿಯಾಗಲಿದ್ದೇನೆ ಎಂದು ಆಲಿಯಾ ಭಟ್ ಅವರು ಸಹ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.
ಆದರೆ ಇದೀಗ ಆಲಿಯಾ ಭಟ್ ಅವರು ಈ ಹೊಸ ಸಿನಿಮಾ ಇಂದ ಹಿಂದಕ್ಕೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಆರ್.ಆರ್.ಆರ್ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿಲ್ಲ, ತೆಲುಗು ಸಿನಿಮಾಗಳಲ್ಲಿ ನಾಯಕಿಯ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇರುವುದಿಲ್ಲ, ಎನ್ನುವ ಕಾರಣ ನೀಡಿ ಆಲಿಯಾ ಭಟ್ ಅವರು ಜ್ಯೂನಿಯರ್ ಎನ್.ಟಿ.ಆರ್ ಅವರ ಹೊಸ ಸಿನಿಮಾ ಇಂದ ದೂರ ಸರಿದಿದ್ದಾರೆ ಎಂದು ನೆಟ್ಟಿಗರು ಕಮೆಂಟ್ಸ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ಚಿತ್ರತಂಡ ರಶ್ಮಿಕಾ ಮಂದಣ್ಣ ಅವರನ್ನು ಈ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಮಾಡಿದ್ದಾರಂತೆ. ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ಎನ್.ಟಿ.ಆರ್30 ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಸಧ್ಯಕ್ಕೆ ಸುದ್ದಿಯೊಂದು ದೊಡ್ಡದಾಗಿ ಸದ್ದು ಮಾಡುತ್ತಿದೆ.
Comments are closed.