ನಿಜಕ್ಕೂ ಪುಟ್ಟಕ್ಕನ ಮಗಳ ಪಾತ್ರದಲ್ಲಿ ನಟನೆ ಮಾಡ್ತಾರಾ? ಪಾರು ಮೋಕ್ಷಿತ ಪೈ?? ಕೊನೆಗೂ ಸಿಕ್ತು ಖಚಿತ ಮಾಹಿತಿ. ಏನು ಗೊತ್ತೇ?
ಕನ್ನಡ ಕಿರುತೆರೆಯಲ್ಲಿ ಪ್ರಸ್ತುತ ಬಹಳ ಫೇಮಸ್ ಆಗಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಟಿ.ಆರ್.ಪಿ ಮತ್ತು ಜನಪ್ರಿಯತೆ ಎರಡರಲ್ಲು ಮುಂದಿದೆ. ಪ್ರತಿವಾರ ಟಿ.ಆರ್.ಪಿ ಯಲ್ಲಿ ನಂಬರ್1 ಸ್ಥಾನ ಪಡೆಯುತ್ತಿದೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ. ಇದೀಗ ಈ ಧಾರಾವಾಹಿ ಬಗ್ಗೆ ಹೊಸದೊಂದು ಸುದ್ದಿ ಕೇಳಿಬರುತ್ತಿದ್ದು, ಜೀಕನ್ನಡ ವಾಹಿನಿಯ ಪಾರು ಧಾರಾವಾಹಿ ಖ್ಯಾತಿಯ ಮೊಕ್ಷಿತ ಪೈ ಅವರು ಪುಟ್ಟಕ್ಕನ ಮಗಳ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ.
ಹೌದು ಈ ಸುದ್ದಿ ನಿಜವೇ, ಮೊಕ್ಷಿತ ಪೈ ಅವರು ಪುಟ್ಟಕ್ಕನ ಮಗಳ ಪಾತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ, ಹಾಗಿದ್ದರೆ ಪಾರು ಧಾರಾವಾಹಿಯಿಂದ ಮೊಕ್ಷಿತಾ ಹೊರಬರುತ್ತಾರಾ ಎನ್ನುವ ಕುತೂಹಲ ಜನರಿಗಿದೆ. ಪಾರು ಧಾರಾವಾಹಿ ಜೊತೆಯೇ ಪುಟ್ಟಕ್ಕನ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮೊಕ್ಷಿತಾ. ಇದು ಹೇಗೆ ಎಂದು ಯೋಚನೆ ಮಾಡ್ತಾ ಇದ್ದೀರಾ? ತಿಳಿಸುತ್ತೇವೆ.. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೂಲತಃ ತೆಲುಗು ಧಾರಾವಾಹಿ, ರಾಧಮ್ಮ ಕೂತುರು ಹೆಸರಿನಲ್ಲಿ ಶುರುವಾದ ಈ ಧಾರಾವಾಹಿ ತೆಲುಗಿನಲ್ಲಿ ಸೂಪರ್ ಹಿಟ್ ಆಗಿದೆ. ಬಳಿಕ ಕನ್ನಡಕ್ಕೆ ರಿಮೇಕ್ ಆಯಿತು. ಕನ್ನಡದಲ್ಲಿ ಕೂಡ ಜನರಿಗೆ ತುಂಬಾ ಇಷ್ಟವಾಗಿದೆ. ಉಮಾಶ್ರೀ ಅವರ ಅಭಿನಯಕ್ಕೆ ಮಾರುಹೋಗದೆ ಇರುವವರಿಲ್ಲ. ಇನ್ನು ಮಲಯಾಳಂ ಭಾಷೆಗೂ ಸಹ ಈ ಧಾರಾವಾಹಿ ರಿಮೇಕ್ ಆಗಿದೆ.
ಮಲಯಾಳಂ ನಲ್ಲೂ ಒಳ್ಳೆಯ ಹೆಸರು ಪಡೆದುಕೊಂಡಿರುವ ಧಾರಾವಾಹಿಯನ್ನು ಈಗ ತಮಿಳು ಭಾಷೆಗೆ ರಿಮೇಕ್ ಮಾಡಲಾಗುತ್ತಿದೆ. ಪುಟ್ಟಕ್ಕನ ಮಕ್ಕಳು ತಮಿಳು ಅವತರಣಿಕೆ ಶೀಘ್ರದಲ್ಲೇ ಶುರುವಾಗಲಿದ್ದು, ಮೋಕ್ಷಿತ ಅವರು ತಮಿಳು ಅವತರಣಿಕೆಯಲ್ಲಿ ಪುಟ್ಟಕ್ಕನ ಮಗಳ ಪಾತ್ರದಲ್ಲಿ ನಟಿಸಲಿದ್ದಾರೆ. ಈ ರೀತಿಯಾಗಿ ಪಾರು ಧಾರಾವಾಹಿ ಯ ಪಾರು ಪಾತ್ರ ನಿರ್ವಹಿಸಿ ಫೇಮಸ್ ಆಗಿರುವ ಮೋಕ್ಷಿತ ಅವರು ತಮಿಳು ಕಿರುತೆರೆ ಲೋಕಕ್ಕೂ ಎಂಟ್ರಿ ಕೊಡುತ್ತಿದ್ದಾರೆ. ಪುಟ್ಟಕ್ಕನ ದೊಡ್ಡ ಮಗಳು ಸಹನ ಪಾತ್ರದಲ್ಲಿ ನಟಿಸಲಿದ್ದಾರೆ ಮೋಕ್ಷಿತ.
Comments are closed.