Neer Dose Karnataka
Take a fresh look at your lifestyle.

ಅದೊಂದು ಕಾರಣಕ್ಕೆ ವಿರಾಟ್ ಕೊಹ್ಲಿ ಮೇಲೆ ಬೇಸರ ಮಾಡಿಕೊಂಡಿದ್ದಾರೆ ಆರ್ಸಿಬಿ ಅಭಿಮಾನಿಗಳು. ಯಾಕಂತೆ ಗೊತ್ತೇ??

ಆರ್.ಸಿ.ಬಿ ತಂಡ ನಿನ್ನೆ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ನಂತರ ಅದು ಆರ್.ಸಿ.ಬಿ ತಂಡಕ್ಕೆ ಹ್ಯಾಟ್ರಿಕ್ ಸೋಲು ಆಗಿದೆ. ಈವರೆಗೂ ಆಡಿರುವ ಒಟ್ಟು 10 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು, 5 ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ. ಆರ್.ಸಿ.ಬಿ ತಂಡ ನಿನ್ನೆ ಸುಮಾರು 190 ರನ್ ಗಳನ್ನು ಗಳಿಸಿದ್ದರೆ, ಗೆಲ್ಲುತ್ತಿತ್ತು. ಆದರೆ ವಿರಾಟ್ ಕೋಹ್ಲಿ ಅವರ ಆಟದ ವೈಖರಿಯಿಂದ ಪಂದ್ಯ ಸೋತಿತು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಕೋಹ್ಲಿ ಅವರ ಮೇಲೆ ಆರ್.ಸಿ.ಬಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ..

ವಿರಾಟ್ ಕೋಹ್ಲಿ ಅವರು ಈ ವರ್ಷ ಫಾರ್ಮ್ ಕಳೆದುಕೊಂಡಿದ್ದರು, ಈವರೆಗೂ ಆಡಿದ ಪಂದ್ಯಗಳಲ್ಲಿ ವಿರಾಟ್ ಕೋಹ್ಲಿ ಅವರು ಕಳಪೆ ಪ್ರದರ್ಶನ ನೀಡಿದ್ದರು. ಗುಜರಾತ್ ಟೈಟನ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ, ವಿರಾಟ್ ಕೋಹ್ಲಿ ಅವರು 53 ಬಾಲ್ ಗಳಲ್ಲಿ 58 ರನ್ ಗಳನ್ನು ಗಳಿಸಿ, ಈ ಸೀಸನ್ ನ ಮೊದಲ ಅರ್ಧ ಶತಕ ಭಾರಿಸಿದ್ದಾರೆ. ವಿರಾಟ್ ಕೋಹ್ಲಿ ಅವರು ಸಧ್ಯ ಈಗಲಾದರೂ ಫಾರ್ಮ್ ಗೆ ಬಂದಿದ್ದಾರೆ ಎಂದು ಅವರ ಅಭಿಮಾನಿಗಳು ಸಂತೋಷ ಪಟ್ಟಿದ್ದಾರೆ. ಆದರೆ ವಿರಾಟ್ ಕೋಹ್ಲಿ ಅವರ ಬ್ಯಾಟಿಂಗ್ ಇಂದ ಆರ್.ಸಿ.ಬಿ ಅಭಿಮಾನಿಗಳಿಗೆ ಬೇಸರವಾಗಿದೆ. ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ನಿಧನಗತಿಯಾಗಿ ರನ್ ಗಳನ್ನು ಗಳಿಸಿದರು.

ಒಂದು ಜಡೆ ರಜತ್ ಪಟಿದಾರ್ ಅವರು ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರೆ, ವಿರಾಟ್ ಕೋಹ್ಲಿ ಅವರು ನಿಧಾನಗತಿಯ ಬ್ಯಾಟಿಂಗ್ ಇಂದಲೇ ಆರ್.ಸಿ.ಬಿ ತಂಡ ಸೋತಿತು ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಒಂದು ವೇಳೆ ವಿರಾಟ್ ಕೋಹ್ಲಿ ಅವರು ಈ ರೀತಿಯ ನೀರಸ ಪ್ರದರ್ಶನ ನೀಡದೆ ಹೋಗಿದ್ದರೆ, ಆರ್.ಸಿ.ಬಿ ಗೆಲ್ಲುತ್ತಿತ್ತು ಎನ್ನುವುದು ಅಭಿಮಾನಿಗಳ ಅಭಿಪ್ರಾಯ. ನಿನ್ನೆಯ ಟಾರ್ಗೆಟ್ ಅನ್ನು, ಗುಜರಾತ್ ಟೈಟನ್ಸ್ ತಂಡ ಇನ್ನು 3 ಬಾಲ್ ಗಳು ಇರುವಾಗಲೇ, ಪಂದ್ಯವನ್ನು ಮುಗಿಸಿತ್ತು. ವಿರಾಟ್ ಕೋಹ್ಲಿ ಅವರ ಸ್ಟ್ರೈಕ್ ರೇಟ್ 109 ಇದ್ದು, ಇದು ತುಂಬಾ ಕಡಿಮೆ ಸ್ಟ್ರೈಕ್ ರೇಟ್ ಎನ್ನಲಾಗುತ್ತಿದ್ದು, ವಿರಾಟ್ ಅವರಿಂದ ಆರ್.ಸಿ.ಬಿ ಪಂದ್ಯಗಳನ್ನು ಸೋಲುತ್ತಿವೆ ಎನ್ನುತ್ತಿದ್ದಾರೆ ಅಭಿಮಾನಿಗಳು.

Comments are closed.