ಇತ್ತೀಚಿಗೆ ರಶ್ಮಿಕಾ ರವರು ರಿಜೆಕ್ಟ್ ಮಾಡಿದ ಮೂರು ಸಿನೆಮಾಗಳ ಕಥೆ ಈಗ ಏನಾಗಿದೆ ಗೊತ್ತೇ?? ರಶ್ಮಿಕಾ ನಟಿಸಿದ್ದರೇ ಅದೃಷ್ಟ ಬದಲಾಗುತಿತ್ತಾ??
ರಶ್ಮಿಕಾ ಮಂದಣ್ಣ, ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಇಂದು ಪ್ಯಾನ್ ಇಂಫಿಯ ಹೀರೋಯಿನ್ ಆಗಿ ಸದ್ದು ಮಾಡುತ್ತಿರುವ ನಟಿ. ಪುಷ್ಪ ಸಿನಿಮಾ ಬಿಡುಗಡೆಯಾದ ನಂತರ ರಶ್ಮಿಕಾ ಅವರಿಗೆ ಇದ್ದ ಬೇಡಿಕೆ, ಜಮಪ್ರಿಯತೆ ಎಲ್ಲವೂ ದುಪ್ಪಟ್ಟಾಗಿದೆ ಎಂದರೆ ತಪ್ಪಾಗುವುದಿಲ್ಲ. ನ್ಯಾಷನಲ್ ಕ್ರಶ್ ಎಂದು ಫೇಮಸ್ ಆಗಿರುವ ರಶ್ಮಿಕಾ ಮಂದಣ್ಣ ಈಗ ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ಸಾಲು ಸಾಲು ಅವಕಾಶಗಳು ಬರುತ್ತಿದ್ದರೂ ಸಹ, ರಶ್ಮಿಕಾ ಮಾತ್ರ ಬಂದ ಎಲ್ಲಾ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿಲ್ಲ, ಪಾತ್ರದ ಆಯ್ಕೆಯಲ್ಲಿ ಬಹಳ ಸೆಲೆಕ್ಟಿವ್ ಆಗಿದ್ದಾರೆ. ರಶ್ಮಿಕಾ ಅಭಿನಯದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಅವರ ಪಾತ್ರಗಳು ಸಹ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಪುಷ್ಪ ಸಿನಿಮಾ ಯಶಸ್ಸಿನ ಬಳಿಕ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಒಂದು ಸಿನಿಮಾಗೆ ಬರೋಬ್ಬರಿ ಮೂರು ಕೋಟಿ ಸಂಭಾವನೆ ಚಾರ್ಜ್ ಮಾಡುತ್ತಿದ್ದಾರೆ ರಶ್ಮಿಕಾ. ಕಿರಿಕ್ ಪಾರ್ಟಿ ಸಿನಿಮಾ ಇಂದ ಶುರುವಾದ ಈ ಪಯಣ ಇಂದು ಈ ಹಂತಕ್ಕೆ ತಲುಪಿರುವುದು ನಿಜಕ್ಕೂ ಸಂತೋಷದ ವಿಚಾರ. ಪಾತ್ರದ ಆಯ್ಕೆಯಲ್ಲಿ ಚೂಸಿ ಆಗಿರುವ ರಶ್ಮಿಕಾ ಮಂದಣ್ಣ ಡೇಟ್ಸ್ ಇಲ್ಲದೆ ಅಥವಾ ಇನ್ನಿತರ ಕಾರಣಗಳಿಂದ ಕೆಲವು ಪಾತ್ರಗಳನ್ನು ಒಪ್ಪಿಕೊಂಡಿರಲಿಲ್ಲ, ಅದು ಈಗ ರಶ್ಮಿಕಾ ಪಾಲಿಗೆ ವರದಾನವೇ ಆಗಿದೆ, ಕಾರಣಾಂತರಗಳಿಂದ ರಶ್ಮಿಕಾ ಒಪ್ಪದೇ ರಿಜೆಕ್ಟ್ ಮಾಡಿರುವ ಪಾತ್ರಗಳು, ಸಿನಿಮಾಗಳು ಈಗ ಬಾಕ್ಸ್ ಆಫೀಸ್ ನಲ್ಲಿ ಸೋತಿವೆ. ಅಷ್ಟಕ್ಕೂ ಆ ಸಿನಿಮಾಗಳು ಯಾವುವು ಗೊತ್ತಾ? ತಿಳಿಸುತ್ತೇವೆ ನೋಡಿ..
ಕಳೆದ ಶುಕ್ರವಾರ ಮೆಗಾಸ್ಟಾರ್ ಚಿರಂಜೀವಿ ಮತ್ತು ಅವರ ಮಗ ರಾಮ್ ಚರಣ್ ಅಭಿನಯದ ಆಚಾರ್ಯ ಸಿನಿಮಾ ತೆರೆಕಂಡು, ಬಾಕ್ಸ್ ಆಫೀಸ್ ನಲ್ಲಿ ಸೋತಿದೆ, ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಪಾತ್ರದಲ್ಲಿ ರಶ್ಮಿಕಾ ಅಭಿನಯಿಸಬೇಕು ಎಂದು ಚಿರಂಜೀವಿ ಅವರು ಸಜೆಸ್ಟ್ ಮಾಡಿದ್ದರು, ಆದರೆ ಡೇಟ್ಸ್ ಸಮಸ್ಯೆ ಇಂದ ರಶ್ಮಿಕಾ ಒಪ್ಪಿಗೆ ನೀಡಿರಲಿಲ್ಲ, ಪೂಜಾ ಹೆಗ್ಡೆ ಈ ಪಾತ್ರದಲ್ಲಿ ನಟಿಸಿದ್ದರು. ಪಾತ್ರಕ್ಕೂ ಪ್ರಾಮುಖ್ಯತೆ ಇರಲಿಲ್ಲ. ಇದೀಗ ಸಿನಿಮಾ ಮಕಾಡೆ ಮಲಗಿದೆ. ಇದೊಂದೇ ಅಲ್ಲದೆ, ವಿಜಯ್ ಅವರ ಬೀಸ್ಟ್ ಸಿನಿಮಾಗು ಮೊದಲು ಆಯ್ಕೆಯಾಗಿದ್ದು ರಶ್ಮಿಕಾ ಮಂದಣ್ಣ, ಕಾರಣಾಂತರಗಳಿಂದ ಬೀಸ್ಟ್ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ, ರಶ್ಮಿಕಾ ಮಾಡಬೇಕಿದ್ದ ಪಾತ್ರ ಪೂಜಾ ಹೆಗ್ಡೆ ಪಾಲಾಯಿತು, ಬೀಸ್ಟ್ ಸಿನಿಮಾ ಕೂಡ ಈಗ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ. ತೆಲುಗಿನ ಜೆರ್ಸಿ ಸಿನಿಮಾದ ಹಿಂದಿ ರಿಮೇಕ್ ನಲ್ಲಿ ಸಹ ರಶ್ಮಿಕಾ ನಟಿಸಬೇಕಿತ್ತು, ಆದರೆ ಈ ಸಿನಿಮಾವನ್ನು ಸಹ ರಶ್ಮಿಕಾ ರಿಜೆಕ್ಟ್ ಮಾಡಿದರು, ಜೆರ್ಸಿ ಸಿನಿಮಾ ಕೂಡ ಸೋಲನ್ನು ಕಂಡಿದೆ. ರಶ್ಮಿಕಾ ಲಕ್ ಇರಬಹುದು, ಅವರು ರಿಜೆಕ್ಟ್ ಮಾಡಿದ ಸಿನಿಮಾಗಳು ಸೋಲುತ್ತಿವೆ. ಪ್ರಸ್ತುತ ರಶ್ಮಿಕಾ ಸ್ಟಾರ್ ನಟರ ಸಿನಿಮಾಗಳಲ್ಲೇ ನಟಿಸುತ್ತಿದ್ದಾರೆ.
Comments are closed.