Neer Dose Karnataka
Take a fresh look at your lifestyle.

ದಾಖಲೆ ಸೃಷ್ಟಿಸಿದ ಭಾರತದ GST ಆದಾಯ, ಒಂದೇ ತಿಂಗಳಲ್ಲಿ ಕಲೆಕ್ಷನ್ ಎಷ್ಟು ಕೋಟಿ ಗೊತ್ತೇ??

ಏಪ್ರಿಲ್ ತಿಂಗಳಿನಲ್ಲಿ ಸೇವಾ ಮತ್ತು ಸರಕು ಸಂಗ್ರಹ (GST) ಟ್ಯಾಕ್ಸ್ ಅತಿಹೆಚ್ಚು ಹಣ ಸಂಗ್ರಹಣೆ ಮಾಡಿದ್ದು, ಗರಿಷ್ಠ ಮೊತ್ತ ₹1.68 ಲಕ್ಷ ಕೋಟಿ ರೂಪಾಯಿ ಹಣ ಸಂಗ್ರಹಣೆ ಆಗಿದೆ. ಏಪ್ರಿಲ್ ತಿಂಗಳಿನಲ್ಲಿ ₹1.47 ಲಕ್ಷ ಕೋಟಿ ರೂಪಾಯಿಗಳು ಸಂಗ್ರಹವಾಗಿತ್ತು. ಈ ತಿಂಗಳು 25ಲಕ್ಷ ಕೋಟಿ ರೂಪಾಯಿ ಹೆಚ್ಚಿನ ಹಣ ಸಂಗ್ರಹಣೆ ಆಗಿದೆ. ಏಪ್ರಿಲ್ ತಿಂಗಳಿನಲ್ಲಿ ₹1.5 ಲಕ್ಷ ಕೋಟಿ ಹಣ ಸಂಗ್ರಹಣೆ ದಾಟಿ ದಾಖಲೆ ಮಾಡಿದೆ. ಇದೇ ಮೊದಲ ಬಾರಿಗೆ ಒಟ್ಟು ಜಿ.ಎಸ್.ಟಿ ಸಂಗ್ರಹ ₹1.5 ಲಕ್ಷ ಕೋಟಿ ದಾಟಿದೆ.

ಏಪ್ರಿಲ್ ತಿಂಗಳಿನಲ್ಲಿ ಸಂಗ್ರಹವಾಗಿರುವುದು ಒಟ್ಟು, ₹1,67, 540 ಲಕ್ಷ ಕೋಟಿ ರೂಪಾಯಿಗಳು. ಇದರಲ್ಲಿ ಸಿ.ಜಿ.ಎಸ್.ಟಿ ₹33,159 ಕೋಟಿ ರೂಪಾಯಿಗಳು, ಎಸ್.ಜಿ.ಎಸ್.ಟಿ ₹41,793 ಕೋಟಿ ರೂಪಾಯಿಗಳು, ಹಾಗೂ ಐ.ಜಿ.ಎಸ್.ಟಿ ₹81,939 ಕೋಟಿ ರೂಪಾಯಿಗಳು ಎಂದು ವರದಿಯ ಪ್ರಕಾರ ತಿಳಿದುಬಂದಿದೆ. 2021ರ ಏಪ್ರಿಲ್ ತಿಂಗಳ ಜಿ.ಎಸ್.ಟಿ ಮೊತ್ತಕ್ಕಿಂತ, ಈ ವರ್ಷ 2022ರ ಜಿ.ಎಸ್.ಟಿ ಹಣ ಸಂಗ್ರಹಣೆ 20% ಹೆಚ್ಚಾಗಿದೆ. ಆಮದು ಮತ್ತು ಸರಕುಗಳಿಂದ ಸಂಗ್ರಹವಾದ ಹಣ ಸುಮಾರು 30% ಹೆಚ್ಚಾಗಿದ್ದು, ದೇಶೀಯ ವಹಿವಾಟುಗಳಿಂದ ಸಂಗ್ರಹವಾದ ಹಣ, ಶೇ.17ರಷ್ಟು ಈ ತಿಂಗಳು ಹೆಚ್ಚಾಗಿದೆ. ಈ ತಿಂಗಳಲ್ಲಿ ಅತಿಹೆಚ್ಚು ತೆರಿಗೆ ಸಂಗ್ರಹ ಆಗಿರುವುದು ಏಪ್ರಿಲ್ 20ರಂದು ಎಂದು ತಿಳಿದುಬಂದಿದೆ.

ಈ ತಿಂಗಳು ಇಷ್ಟು ದೊಡ್ಡ ಮೊತ್ತದ ಹಣ ಸಂಗ್ರಹಣೆ ಆಗಲು ಮುಖ್ಯಕಾರಣ, ತೆರಿಗೆಗಾರರ ನಡವಳಿಕೆಯಲ್ಲಿ ಕಂಡುಬಂದಿರುವ ಸುಧಾರಣೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ತೆರಿಗೆ ಆಡಳಿತವು ತೆಗೆದುಕೊಂಡ ಹಲವು ಕ್ರಮಗಳ ಫಲವಾಗಿ ಈ ತಿಂಗಳು ದಾಖಲೆಯ ಮೊತ್ತದ ಜಿ.ಎಸ್.ಟಿ ಹಣ ಸಂಗ್ರಹಣೆಯಾಗಿದೆ ಎಂದು ವರದಿಯ ಮೂಲಕ ತಿಳಿದುಬಂದಿದೆ. ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವುದನ್ನು ಸುಲಭವಾಗಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಡೇಟಾ ಅನಾಲಿಸ್ಟ್ ಮತ್ತು ಕೃತಕ ಬುದ್ಧಿಮತೆಯ ಆಧಾರದ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಜಿ.ಎಸ್.ಟಿ ಸಂಗ್ರಹ ಜಾಸ್ತಿಯಾಗಿರುವ ಕಾರಣ, ತೆರಿಗೆಯ ದರವನ್ನು ತರ್ಕಬದ್ಧ ಮಾಡಲು ಸಚಿವಾಲಯ ನಿರ್ಧಾರ ಮಾಡಿದ್ದು, ಏಪ್ರಿಲ್ 25ರಂದು ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ದರಗಳ ಕುರಿತು ಚರ್ಚೆ ಮಾಡಲು, 2021ರ ಸೆಪ್ಟೆಂಬರ್ ನಲ್ಲಿ ರಚಿಸಲಾದ ತಂಡ ಇನ್ನು ಮಾಹಿತಿ ನೀಡಿಲ್ಲ ಎಂದು ತಿಳಿದುಬಂದೆ.

Comments are closed.