ದೇಶದ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಒಂದೇ ದಿನದಲ್ಲಿ ಏನೆಲ್ಲಾ ತಿನ್ನುತ್ತಾರೆ ಗೊತ್ತೇ??
ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪುಷ್ಪ ಸಿನಿಮಾ ನಂತರ ರಶ್ಮಿಕಾ ಮಂದಣ್ಣ ಅವರಿಗೆ ಬೇಡಿಕೆ, ಜನಪ್ರಿಯತೆ ಎಲ್ಲವೂ ಹೆಚ್ಚಾಗಿದೆ. ಪುಷ್ಪ ಸಿನಿಮಾ ನಂತರ ರಶ್ಮಿಕಾ ಅವರು ಸಂಭಾವನೆಯನ್ನು ಸಹ ಹೆಚ್ಚಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ಸಿನಿಮಾ ಬಗ್ಗೆ, ನಿಜ ಜೀವನದಲ್ಲಿ ನಡೆಯುವ ಸಾಕಷ್ಟು ಘಟನೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ರಶ್ಮಿಕಾ ಅವರು, ಯೂಟ್ಯೂಬ್ ಚಾನೆಲ್ ಸಹ ಶುರು ಮಾಡಿ, ಅದರ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ..
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದರೆ, ಅವರ ದಿನನಿತ್ಯ ಜೀವನದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುತ್ತದೆ, ಬ್ಯೂಟಿ ಮೇನ್ ಟೈನ್ ಮಾಡಲು ಏನೆಲ್ಲಾ ಪ್ರಾಡಕ್ಟ್ ಗಳನ್ನು ಬಳಸುತ್ತಾರೆ. ಪ್ರತಿದಿನ ಏನೆಲ್ಲಾ ತಿನ್ನುತ್ತಾರೆ, ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಜನರಿಗೆ ಇರುತ್ತದೆ. ಇದೀಗ ರಶ್ಮಿಕಾ ಅವರು ತಮ್ಮ ದಿನನಿತ್ಯದ ಚಟುವಟಿಕೆಗಳ ಮಾಹಿತಿ ನೀಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ರಶ್ಮಿಕಾ ಮಂದಣ್ಣ ಅವರು ಹೊಸ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಆ ವಿಡಿಯೋದಲ್ಲಿ ಪ್ರತಿದಿನ ಏನು ತಿನ್ನುತ್ತಾರೆ ಎನ್ನುವುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ತಮ್ಮಿಷ್ಟದ ಆಹಾರ ಸಿಕ್ಕಾಗ, ರಶ್ಮಿಕಾ ಮಂದಣ್ಣ ಅವರು ಎಷ್ಟು ಸಂತೋಷವಾಗುತ್ತಾರೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ ರಶ್ಮಿಕಾ.
ಈ ವಿಡಿಯೋ ಸಧ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ರಶ್ಮಿಕಾ ಅವರ ಇಷ್ಟ ಪಟ್ಟು ತಿಂಡಿ ತಿನ್ನುತ್ತಿರುವುದನ್ನು ನೋಡಿ ಸಂತೋಷ ಪಟ್ಟಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಇದೀಗ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ದಳಪತಿ ವಿಜಯ್ ಅವರ ಮುಂದಿನ ಸಿನಿಮಾಗೆ ರಶ್ಮಿಕಾ ಅವರು ಆಯ್ಕೆಯಾಗಿದ್ದಾರೆ. ಅಲ್ಲದೆ, ಬಾಲಿವುಡ್ ನಲ್ಲಿ ರಶ್ಮಿಕಾ ಅಭಿನಯದ ಎರಡು ಸಿನಿಮಾಗಳು ಮಿಷನ್ ಮಜ್ನು ಮತ್ತು ಗುಡ್ ಬೈ ಸಿನಿಮಾ ಬಿಡುಗಡೆ ಆಗಲು ಸಜ್ಜಾಗಿದೆ. ಹಾಗೂ ಪುಷ್ಪ2 ಸಿನಿಮಾ ಕೆಲಸಗಳು ಸಹ ಶುರುವಾಗಬೇಕಿದೆ. ರಶ್ಮಿಕಾ ಪ್ರಸ್ತುತ ಸೌತ್ ಇಂಡಿಯಾ ಸಿನಿ ಇಂಡಸ್ಟ್ರಿಯ ಬಹುಬೇಡಿಕೆಯ ನಟಿಯಾಗಿದ್ದು, ಇದೀಗ ಇವರ ಈ ಯೂಟ್ಯೂಬ್ ವಿಡಿಯೋ ಭಾರಿ ವೈರಲ್ ಆಗಿದೆ.
https://youtube.com/shorts/CYHapAHED48?feature=sharehttps://youtube.com/shorts/CYHapAHED48?feature=share
Comments are closed.