Neer Dose Karnataka
Take a fresh look at your lifestyle.

ಅಂದು ಬಿಗ್ ಬಾಸ್ ನಿರೂಪಕರಾಗಿ ಕಿಚ್ಚ ಸುದೀಪ್ ರವರು ಆಯ್ಕೆಯಾಗಿದ್ದು ಹೇಗೆ ಗೊತ್ತೇ?? ತೆರೆ ಹಿಂದೆ ನಡೆದದ್ದು ಏನು ಗೊತ್ತೇ??

ಕನ್ನಡ ಕಿರುತೆರೆಯಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ. ಈ ಶೋನ ಸೂತ್ರಧಾರಿ ಕಿಚ್ಚ ಸುದೀಪ್ ಅವರು, 8 ಸೀಸನ್ ಗಳನ್ನು ಸಹ ಸುದೀಪ್ ಅವರು ನಿರೂಪಣೆ ಮಾಡಿದ್ದಾರೆ. ಕಿಚ್ಚನ ನಿರೂಪಣೆ ನೋಡುವ ಸಲುವಾಗಿ ಅದೆಷ್ಟೋ ಜನರು ಬಿಗ್ ಬಾಸ್ ನೋಡುವುದು ಉಂಟು. ಸುದೀಪ್ ಅವರು ಈ ಶೋ ನಿರೂಪಕರಾಗಿ ಆಯ್ಕೆಯಾಗಿದ್ದು ಹೇಗೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಭಾರತದಲ್ಲಿ ಬಿಗ್ ಬಾಸ್ ಶೋ ಮೊದಲಿಗೆ ಶುರುವಾಗಿದ್ದು ಹಿಂದಿಯಲ್ಲಿ. ನಂತರ ಕನ್ನಡದಲ್ಲಿ ಶುರುವಾಯಿತು, ಈಗ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಶುರುವಾಗಿದೆ. ಈ ಶೋಗೆ ಸುದೀಪ್ ಅವರು ಆಯ್ಕೆಯಾಗಿದ್ದು ಹೇಗೆ ಎನ್ನುವ ಬಗ್ಗೆ ಒಂದು ಕಹಾನಿ ಇದೆ..

ಆಗ ಸುದೀಪ್ ಅವರು ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫ್ ಶೋ ನಿರೂಪಣೆ ಮಾಡುತ್ತಿದ್ದರು. ಆಗ ಸುದೀಪ್ ಅವರನ್ನು ರಾಘವೇಂದ್ರ ಹುಣಸೂರು ಅವರು ಭೇಟಿಯಾಗಿ ಬಿಗ್ ಬಾಸ್ ಶೋ ಬಗ್ಗೆ ಚರ್ಚೆ ಮಾಡಿದ್ದರಂತೆ. ಸುದೀಪ್ ಅವರು ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರಂತೆ, ಆದರೆ ಸುದೀಪ್ ಅವರು ಆ ರೀತಿ ಅಲ್ಲ, ತಮಗೆ ಕಾನ್ಸೆಪ್ಟ್ ಇಷ್ಟವಾದರೆ, ಎಕ್ಸೈಟಿಂಗ್ ಅನ್ನಿಸಿದರೆ, ತಕ್ಷಣವೇ ಅದನ್ನು ಒಪ್ಪಿಕೊಂಡು ಬಿಡುತ್ತಾರಂತೆ. ಬಿಗ್ ಬಾಸ್ ಕಾನ್ಸೆಪ್ಟ್ ಕೇಳಿದಾಗ ಸುದೀಪ್ ಅವರ ತಲೆಯಲ್ಲಿ ಕೆಲವು ವಿಚಾರಗಳು ಓಡುತ್ತಿದ್ದವು, ಅಷ್ಟು ಸಮಯ ಹೆಚ್ಚಾಗಿ ಸಿನಿಮಾದಲ್ಲೇ ನಟಿಸುತ್ತಿದ್ದರು, ಸಿನಿಮಾ ಬಿಟ್ಟರೆ ಮನೆ ಎಂದು ಇದ್ದರು. ಆಗಾಗ ಗೆಳೆಯರ ಜೊತೆ ಪಾರ್ಟಿ ಮಾಡುತ್ತಿದ್ದರು. ಅದನ್ನು ಬಿಟ್ಟು ಹೆಚ್ಚಾಗಿ ಏನನ್ನು ಮಾಡುತ್ತಿರಲಿಲ್ಲವಂತೆ ಕಿಚ್ಚ.

ಆ ಸಮಯದಲ್ಲಿ ಬಿಗ್ ಬಾಸ್ ನಿರೂಪಣೆ ಆಫರ್ ಬಂದಾಗ, ಬಹಳ ಸಂತೋಷದಿಂದ ಒಪ್ಪಿಕೊಂಡರಂತೆ. ಆದರೆ ಸುದೀಪ್ ಅವರು ಹಿಂದಿನ ಯಾವುದೇ ಸೀಸನ್ ಗಳನ್ನು ಎಪಿಸೋಡ್ ಗಳನ್ನು ನೋಡಿರಲಿಲ್ಲವಂತೆ, ರಾಘವೇಂದ್ರ ಹುಣಸೂರು ಅವರಃ ವಿಡಿಯೋ ಗಳನ್ನು ತೋರಿಸಲು ಶುರು ಮಾಡಿದಾಗ ಬೇಡ ಎಂದಿದ್ದರಂತೆ ಕಿಚ್ಚ. ತಮ್ಮದೇ ಆದ ಶೈಲಿಯಲ್ಲಿ ನಿರೂಪಣೆ ಮಾಡುವುದಾಗಿ ರಾಘವೇಂದ್ರ ಹುಣಸೂರು ಅವರ ಜೊತೆ ಹೇಳಿದ್ರಂತೆ ಸುದೀಪ್. ಅದು ಚೆನ್ನಾಗಿ ವರ್ಕ್ ಆಯ್ತಂತೆ. ಅದು ಜನರಿಗೆ ಇಷ್ಟ ಆಗಿರುವುದು, ನಮ್ಮ ಸಂಸ್ಕೃತಿ ನಮ್ಮ ಭಾವನೆ ಜನರಿಗೆ ಇಷ್ಟ ಆಗಿರುವುದಕ್ಕೆ ಸುದೀಪ್ ಅವರಿಗೆ ತುಂಬಾ ಸಂತೋಷ ಇದೆಯಂತೆ.  ಸುದೀಪ್ ಅವರ ಜೀವನ ನಿರೂಪಿಸಿಕೊಳ್ಳಲು ಬಿಗ್ ಬಾಸ್ ವೇದಿಕೆ ಸಹಾಯ ಮಾಡಿದೆಯಂತೆ, ಈ ಮಾಹಿತಿಗಳನ್ನು ಸ್ವತಃ ಸುದೀಪ್ ಅವರು ನೀಡಿದ್ದಾರೆ.

Comments are closed.