Neer Dose Karnataka
Take a fresh look at your lifestyle.

ಕೆಜಿಎಫ್ ಮೂಲಕ ದೇಶದ ಗಮನ ಸೆಳೆದಿರುವ ಪ್ರಶಾಂತ್ ನೀಲ್ ರವರ ಮುಂದಿನ ಸಿನಿಮಾ ಗಳು ಯಾವ್ಯಾವು ಗೊತ್ತೇ??

ಪ್ರಶಾಂತ್ ನೀಲ್, ಕೆಜಿಎಫ್ ಚಾಪ್ಟರ್2 ಮೂಲಕ ಭಾರತ ದೇಶದ ಸೆನ್ಸೇಷನ್ ಆಗಿರುವ ನಿರ್ದೇಶಕ ಇವರು. ಉಗ್ರಂ ಸಿನಿಮಾ ಇಂದ ಕನ್ನಡ ಸಿನಿಪ್ರಿಯರನ್ನು ಇಂಪ್ರೆಸ್ ಮಾಡಿದ್ದ ಪ್ರಶಾಂತ್ ಅವರು, ಭರವಸೆಯ ನಿರ್ದೇಶಕ ಎನ್ನಿಸಿಕೊಂಡಿದ್ದರು. ನಂತರ ಬಂದ ಕೆಜಿಎಫ್ ಚಾಪ್ಟರ್1 ಸಿನಿಮಾ ಇಂದ ಪ್ಯಾನ್ ಇಂಡಿಯಾ ನಿರ್ದೇಶಕರಾದರು ಪ್ರಶಾಂತ್ ನೀಲ. ಕೆಜಿಎಫ್2 ಬಿಡುಗಡೆಯಾದ ನಂತರ ಪ್ರಶಾಂತ್ ನೀಲ್ ಅವರಿಗಿದ್ದ ಬೇಡಿಕೆ, ಅಭಿಮಾನಿ ಬಳಗ, ಅವರಿಗೆ ಸಿಗುತ್ತಿರುವ ಗೌರವ ಎಲ್ಲವೂ ಹೆಚ್ಚಾಗಿದೆ. ಕನ್ನಡ ಚಿತ್ರರಂಗದ ಕಡೆ ಇಡೀ ದೇಶ ತಿರುಗಿ ನೋಡುವ ಹಾಗೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್.

ಸಧ್ಯಕ್ಕೆ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ ಪ್ರಶಾಂತ್ ನೀಲ್ ಅವರ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ.. ಕೆಜಿಎಫ್2 ನಂತರ ಪ್ರಶಾಂತ್ ನೀಲ್ ಅವರು ಸಲಾರ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ನಾಯಕ ಪ್ಯಾನ್ ಇಂಡಿಯಾ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಅವರು. ಬಾಹುಬಲಿ ಸಿನಿಮಾ ನಂತರ ಪ್ರಭಾಸ್ ಅವರ ಇನ್ಯಾವುದೇ ಸಿನಿಮಾ ಸಕ್ಸಸ್ ಕಂಡಿಲ್ಲ, ಅಭಿಮಾನಿಗಳು ಸಹ ಬೇಸರಗೊಂಡಿದ್ದರು. ಆದರೆ ಪ್ರಶಾಂತ್ ನೀಲ್ ಅವರು ಪ್ರಭಾಸ್ ಅವರಿಗೆ ನಿರ್ದೇಶನ ಮಾಡುತ್ತಾರೆ ಎಂದಾಗ, ಅಭಿಮಾನಿಗಳಿಗೆ ಸಿನಿಮಾ ಮೇಲಿನ ಆಸಕ್ತಿ ಹೆಚ್ಚಾಗಿದೆ. ಸಲಾರ್ ಪಕ್ಕಾ ಆಕ್ಷನ್ ಬೆಸ್ಡ್ ಸಿನಿಮಾ ಆಗಿರಲಿದೆ.

ಅದಾದ ಬಳಿಕ ಪ್ರಶಾಂತ್ ಅವರು ಜ್ಯೂನಿಯರ್ ಎನ್.ಟಿ.ಆರ್ ಅವರ ಜೊತೆ ಒಂದು ಸಿನಿಮಾ ಮಾಡಲಿದ್ದಾರೆ. ಆರ್.ಆರ್.ಆರ್ ಇಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಜ್ಯೂನಿಯರ್ ಎನ್.ಟಿ.ಆರ್ ಅವರ ಜೊತೆ ಹೊಸ ಸಿನಿಮಾ, ಸಲಾರ್ ನಂತರ ಶುರುವಾಗಲಿದೆ, ಈ ಸಿನಿಮಾ ನಿರ್ಮಾಪಕರು ಯಾರು, ಸಿನಿಮಾದ ಬೇರೆ ಸ್ಟಾರ್ ಕಾಸ್ಟ್ ನಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಒಟ್ಟಿನಲ್ಲಿ ಈ ಸಿನಿಮಾ ಸೆಟ್ಟೇರುವುದಂತೂ ಖಾತ್ರಿಯಾಗಿದೆ.

ಇನ್ನುಳಿದ ಹಾಗೆ ಕೆಜಿಎಫ್ ಚಾಪ್ಟರ್3, ಚಾಪ್ಟರ್2 ನೋಡಿದ ಪ್ರತಿಯೊಬ್ಬರಿಗೂ, ಎಂಡ್ ಕ್ರೆಡಿಟ್ಸ್ ನೋಡಿದ ನಂತರ ಚಾಪ್ಟರ್3 ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ಎರಡು ಬಿಗ್ ಸಿನಿಮಾಗಳನ್ನು ಮುಗಿಸಿದ ನಂತರ ಪ್ರಶಾಂತ್ ನೀಲ್ ಅವರು ಕೆಜಿಎಫ್3 ಶುರು ಮಾಡಲು ಇನ್ನು ಸಾಕಷ್ಟು ಸಮಯ ಹಿಡಿಸುತ್ತದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕೆಜಿಎಫ್3 ಬರುವುದು ಸಹ ಬಹುತೇಕ ಖಚಿತ ಎನ್ನುವ ಮಾಹಿತಿಯಂತೂ ಸಿಕ್ಕಿದೆ.

ಸೋಲಿನಿಂದ ಕಂಗೆಟ್ಟಿದ್ದ ನಟ ಮುರಳಿ ಅವರು ಹಿಟ್ ತಂದುಕೊಟ್ಟಿದ್ದು ಉಗ್ರಂ ಸಿನಿಮಾ. ಈ ಸಿನಿಮಾದ ಮುಂದುವರೆದ ಭಾಗ ಉಗ್ರಂ ವೀರಂ ಸಹ ಬರುತ್ತದೆ ಎನ್ನಲಾಗುತ್ತಿತ್ತು. ಉಗ್ರಂ ಮುಂದುವರೆದ ಭಾಗ ಬರುವುದು ಖಚಿತ ಎನ್ನುವ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ ಆ ಸಿನಿಮಾವನ್ನು ಪ್ರಶಾಂತ್ ನೀಲ್ ಅವರು ಇನ್ನು ಶುರು ಮಾಡಿಲ್ಲ. ಇನ್ನುಳಿದ ಹಾಗೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಒಂದು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ರೆಡಿ ಮಾಡಿಟ್ಟುಕೊಂಡಿದ್ದರು ನೀಲ್. ಆ ಸಿನಿಮಾ ಕೂಡ ಇನ್ನು ಉಳಿದಿದೆ.

ಇನ್ನುಳಿದ ಹಾಗೆ, ಶ್ರೀಮುರಳಿ ಅಭಿನಯದ ಭಗೀರ ಸಿನಿಮಾ ಸಹ ಒಂದು, ಈ ಸಿನಿಮಾವನ್ನು ನೀಲ್ ಅವರು ನಿರ್ದೇಶನ ಮಾಡುತ್ತಿಲ್ಲ, ಆದರೆ ಸಿನಿಮಾದ ಬರಹಗಾರರು ಇವರೇ, ಭಗೀರ ಸಿನಿಮಾವನ್ನು ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಇವರು ಈ ಮೊದಲು ಯಶ್ ಅವರ ಲಕ್ಕಿ ಸಿನಿಮಾ ನಿರ್ದೇಶನ ಮಾಡಿದ್ದರು, ಅಲ್ಲದೆ ಕೆಜಿಎಫ್ ಸಿನಿಮಾದ ಡೈಲಾಗ್ ರೈಟರ್ ಗಳಲ್ಲಿ ಇವರು ಸಹ ಒಬ್ಬರು. ಪ್ರಶಾಂತ್ ನೀಲ್ ಅವರಂತೂ ಈಗ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ತಾನು ಮಾಡುವ ಪ್ರತಿಯೊಂದು ಸಿನಿಮಾ ಕನ್ನಡ ಸಿನಿಮಾ ಆಗಿರುತ್ತದೆ, ನಾನು ಕನ್ನಡಿಗ ಎಂದು ಪ್ರಶಾಂತ್ ನೀಲ್ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದರು.

Comments are closed.