ಚಿರಂಜೀವಿ ರಾಮಚರಣ್ ರವರ ಬಹುನಿರೀಕ್ಷಿತ ಚಿತ್ರದ ಕಲೆಕ್ಷನ್ ಕಥೆ ಏನಾಗಿದೆ ಗೊತ್ತೇ?? ಎಷ್ಟು ಕೋಟಿ ನಷ್ಟ ಗೊತ್ತೇ??
ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಅವರು ಮತ್ತು ಅವರ ಮಗ ರಾಮ್ ಚರಣ್ ತೇಜ್ ಇಬ್ಬರು ಜೊತೆಯಾಗಿ ನಟಿಸಿದ ಸಿನಿಮಾ ಆಚಾರ್ಯ. ಇವರಿಬ್ಬರನ್ನು ಜೊತೆಯಾಗಿ ತೆರೆಮೇಲ್ ನೋಡಬೇಕು ಎನ್ನುವುದು ಅದೆಷ್ಟೋ ಅಭಿಮಾನಿಗಳ ಆಸೆಯಾಗಿತ್ತು. ಆಚಾರ್ಯ ಸಿನಿಮಾವನ್ನು, ತೆಲುಗಿನ ಖ್ಯಾತ ನಿರ್ದೇಶಕ ಕೊರಟಲ ಶಿವ ಅವರು ನಿರ್ದೇಶನ ಮಾಡಿದ್ದು, ಏಪ್ರಿಲ್ 29 ರಂದು ಸಿನಿಮಾ ತೆರೆಕಂಡಿತು. ಮೆಗಾಸ್ಟಾರ್ ಮತ್ತು ಮೆಗಾ ಪವರ್ ಸ್ಟಾರ್ ಜೊತೆಯಾಗಿ ನಟಿಸಿರುವ ಈ ಸಿನಿಮಾ ಕಲೆಕ್ಷನ್ ಹೇಗಿದೆ ಗೊತ್ತಾ?
ಆಚಾರ್ಯ ಸಿನಿಮಾದಲ್ಲಿ ಚಿರಂಜೀವಿ ಅವರು ಮಟ್ಟಿ ಅವರ ಮಗ ಜೊತೆಯಾಗಿ ನಟಿಸಿದ್ದಾರೆ ಎನ್ನುವ ಕಾರಣಕ್ಕೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಇತ್ತು. ಆದರೆ ಏಪ್ರಿಲ್ 29ರಂದು ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಸಿನಿಮಾದಲ್ಲಿ ಹೇಳಿಕೊಳ್ಳುವಂಥಹ ಯಶಸ್ಸಿನ ಅಂಶಗಳು ಏನು ಇಲ್ಲ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆ ಆಗುವ ಮೊದಲು ಸಹ ಹೆಚ್ಚಿನ ಕ್ರೇಜ್ ಏನು ಇರಲಿಲ್ಲ. ಇನ್ನು ಸಿನಿಮಾ ಬಿಡುಗಡೆಯಾದ ಮೇಲೆ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಸೋತು, ಕಳಪೆ ಮಟ್ಟದ ಹಣ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಆಚಾರ್ಯ ಸಿನಿಮಾವನ್ನು 140 ಕೋಟಿ ಖರ್ಚು ಮಾಡಿ, ದೊಡ್ಡ ದೊಡ್ಡ ಸೆಟ್ ಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಸಿನಿಮಾದಲ್ಲಿ ಆ ಕಲರ್ ಫುಲ್ ಫ್ರೆಮ್ ಬಿಟ್ಟರೆ ಇನ್ನೇನು ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.
ಟಾಲಿವುಡ್ ನ ಅನುಭವಿ ನಿರ್ದೇಶಕ ಕೊರಟಾಲ ಶಿವ ಇಂತಹ ಸಿನಿಮಾವನ್ನು ಯಾಕೆ ಮಾಡಿದರು ಎಂದು ಅಭಿಮಾನಿಗಳು ಬೇಸರ ಪಟ್ಟುಕೊಂಡಿದ್ದಾರೆ. ಸಿನಿಮಾದ ಕಲೆಕ್ಷನ್ ವಿಚಾರಕ್ಕೆ ಬರುವುದಾದರೆ, ಮೊದಲ ದಿನವೆ ಕಡಿಮೆ ಗಳಿಕೆ ಮಾಡಿದ್ದು, ಎರಡನೇ ದಿನಕ್ಕೆ ಗಳಿಕೆ 50% ಕಡಿಮೆಯಾಗಿತ್ತು. ಸಿನಿಮಾ ಬಿಡುಗಡೆಗಿಂತ ಮೊದಲು 130 ಕೋಟ್ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿತ್ತು ಎನ್ನಲಾಗಿದೆ. ಆದರೆ ಸಿನಿಮಾ ಬಿಡುಗಡೆಯಾದ ಮೇಲೆ 100 ಕೋಟ್ ಲಾಸ್ ನಲ್ಲಿದೆ ಎಂದು ತಿಳಿದುಬಂದಿದೆ. ಪ್ರಮುಖ ನಗರಗಳಲ್ಲಿ ಸಹ ಸಿನಿಮಾ ಕಲೆಕ್ಷನ್ ಡಲ್ ಆಗಿದೆ ಎಂದು ವರದಿಯ ಪ್ರಕಾರ ತಿಳಿದುಬಂದಿದೆ. ಚಿರಂಜೀವಿ ಅವರು ಈ ಸಿನಿಮಾ ಮೂಲಕ ಸೋಲನ್ನು ಕಂಡಿದ್ದಾರೆ. ವಿಮರ್ಶಕರು ಸಹ ಆಚಾರ್ಯ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
Comments are closed.