23 ವರ್ಷಗಳ ದಾಂಪಾಂತ್ಯ ಜೀವನದಲ್ಲಿ ವಿಚ್ಚೇದನ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಪ್ರತಿಕ್ರಿಯೆ ನೀಡಿದ ಸುಮಾ ಹೇಳಿದ್ದೇನು ಗೊತ್ತೇ??
ಸುಮಾ ಕನಕಲ, ಈ ಹೆಸರನ್ನು ಬಹುತೇಕರು ಕೇಳಿರುತ್ತಾರೆ. ಇವರು ತೆಲುಗಗಿನ ಬಹುಬೇಡಿಕೆ ಹೊಂದಿರುವ ನಿರೂಪಕಿ. ತೆಲುಗಿನ ಎಲ್ಲಾ ಸ್ಟಾರ್ ನಟರ ಸಿನಿಮಾಗಳ ಕಾರ್ಯಕ್ರಮಗಳನ್ನು ಸುಮಾ ಅವರೇ ನಿರೂಪಣೆ ಮಾಡುತ್ತಾರೆ. ಮೂಲತಃ ಮಲಯಾಳಿ ಆಗಿರುವ ಸುಮಾ ಅವರು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು ತೆಲುಗಿನಲ್ಲಿ, ತೆಲುಗು ಭಾಷೆಯಲ್ಲಿ ಸಾಕಷ್ಟು ಶೋಗಳನ್ನು ನಿರೂಪಣೆ ಮಾಡಿದ್ದಾರೆ, ಧಾರಾವಾಹಿಯಲ್ಲಿ ನಟಿಸಿದ್ದಾರೆ ಹಾಗೂ ಕೆಲವು ಸಿನಿಮಾಗಳಲ್ಲಿ ಸಹ ಸುಮಾ ಅವರು ನಟಿಸಿದ್ದಾರೆ. ಇವರು ತಮಾಷೆ ಭರಿತವಾಗಿ ಕಾರ್ಯಕ್ರಮ ನಿರೂಪಣೆ ಮಾಡುವ ಶೈಲಿಗೆ ಫಿದಾ ಆಗದೆ ಇರುವವರಿಲ್ಲ.
ಸುಮಾ ಅವರು ತೆಲುಗಿನ ಲಾಂಗೆಸ್ಟ್ ರನ್ನಿಂಗ್ ಗೇಮ್ ಶೋ ಸ್ಟಾರ್ ಮಹಿಳಾ ನಿರೂಪಕಿ, ಇದು ರೆಕಾರ್ಡ್ ಸಹ ಆಗಿದೆ. ಸುಮಾ ಅವರು ಮಲಯಾಳಂ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಅಚ್ಚುಕಟ್ಟಾಗಿ ಮಾತಮಾಡುತ್ತಾರೆ. 1985 ರಲ್ಲಿ ಬಾಲನಟಿಯಾಗಿ ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದ ಸುಮಾ ಅವರು, 1991ರ ನಂತರ ಟೆಲಿ ಫಿಲ್ಮ್ ಗಳು, ನಿರೂಪಣೆಯಲ್ಲಿ ಮುಂದುವರೆದರು. 1999ರಲ್ಲಿ ತೆಲುಗಿನ ಖ್ಯಾತ ನಟ ರಾಜೀವ್ ಕನಕಲ ಅವರೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಸುಮಾ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಸುಖವಾದ ಸಂಸಾರ ನಡೆಸುತ್ತಿದ್ದಾರೆ. ಇತ್ತೀಚೆಗೆ ಸುಮಾ ಅವರು ತಮ್ಮ ಪತಿ ರಾಜೀವ್ ಅವರಿಗೆ ವಿಚ್ಛೇದನ ನೀಡುತ್ತಾರೆ ಎನ್ನುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡಿತ್ತು. ಇದರ ಬಗ್ಗೆ ಸ್ವತಃ ಸುಮಾ ಅವರು ಸಂದರ್ಶನ ಒಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ..”ನಾನು ಗಂಡ ಹೆಂಡತಿ ಸಂಬಂಧದ ಬಗ್ಗೆ ಜೆನೆರಲ್ ಆಗಿ ಹೇಳಿದ ಸ್ಟೇಟ್ಮೆಂಟ್ ಅನ್ನು, ನನ್ನ ಸ್ಪೇಸ್ ಒಳಗೆ ಚೆನ್ನಾಗಿ ತೆಗೆದುಕೊಂಡು ಬಂದು, ವಿಚ್ಛೇದನ ತೆಗೆದುಕೊಳ್ಳುತ್ತಿರುವುದು ನಿಜ ಎಂದು ಸುಮ ಹೇಳಿದ್ದಾರೆ ಎನ್ನುವಂತೆ ಬರೆದಿದ್ದರು. ಈಗ ಹೇಳಿದ್ದನ್ನು ಕೂಡ ಸ್ವಲ್ಪ ಹೊತ್ತಿಗೆ ಬೇರೆ ರೀತಿ ಬರೆದಿರುತ್ತಾರೆ.
ನಮ್ಮ ಹೊರಗೆ ಏನಿದೆ, ಅದು ಹೊರಗೇ ಇರುತ್ತದೆ. ಅದರ ಬಗ್ಗೆ ನಾನೇನು ಮಾಡಬಹುದು ಅಂದ್ರೆ, ನಾನೇನು ಮಾಡಲು ಸಾಧ್ಯವಿಲ್ಲ..ನಮ್ಮದು 23 ವರ್ಷದ ದಾಂಪತ್ಯ ಜೀವನ, ತುಂಬಾ ಸಂತೋಷವಾಗಿದ್ದೀವಿ. ಇತ್ತೀಚೆಗೆ ವಿಚ್ಛೇದನದ ಬಗ್ಗೆ ಸಾಕಷ್ಟು ಸುದ್ದಿಗಳು, ಥಂಬ್ ನೇಲ್ ಗಳು, ಟೆಕ್ಸ್ಟ್ ಗಳು ಬಂದವು, ಅದಕ್ಕೆಲ್ಲ ನಾವು ಹೇಗೆ Explanation ಕೊಡೋದು ಗೊತ್ತಿಲ್ಲ. ಒಂದು ಸಾರಿ ಹೊರಬಂದ ಒಂದು ಸುದ್ದಿ, ಒಂದು ತಿಂಗಳು, ಒಂದು ವರ್ಷದ ವರೆಗೆ ಸರ್ಕ್ಯುಲೇಟ್ ಆಗ್ತಾನೆ ಇರುತ್ತೆ. ಹಾಗಾಗಿ ನಾನು ಉತ್ತರ ಕೊಡೋದನ್ನೇ ನಿಲ್ಲಿಸಿದ್ದೀನಿ. ನಾನು ನನ್ನ ಮನೆಯವರು ಒಂದು ವಿಚಾರ ಅಂದುಕೊಳ್ತೀವಿ, ನನಗೆ ನೀನೇನು ಅಂತ ಗೊತ್ತು, ನಿನಗೆ ನಾನೇನು ಅಂತ ಗೊತ್ತು, ನಾವಿಬ್ಬರು ಇಲ್ಲೇ ಇದ್ದೀವಿ. ಸೆಲೆಬ್ರಿಟಿಗಳು ಅಂದಮೇಲೆ ಇದೆಲ್ಲ ಸಹಜ ಏನು ಮಾಡೋಕಾಗಲ್ಲ, ನಮ್ಮ ಮಕ್ಕಳಿಗೂ ಇದನ್ನೇ ಹೇಳಿಕೊಡ್ತೀವಿ. ನನ್ನ ಮಗ ಇದೇ ಫೀಲ್ಡ್ ಗೆ ಬರಬೇಕು ಅಂತ ಇದ್ದಾನೆ, ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯದು ಕೆಟ್ಟದ್ದು ಎಲ್ಲವೂ ಬರುತ್ತದೆ, ಹಾಗಾಗಿ ಎಲ್ಲವನ್ನು ಅರ್ಥಮಾಡಿಕೊಂಡು ಬರುವ ಹಾಗಿದ್ದರೆ ಬಾ ಎಂದು ಹೇಳಿದ್ದೇನೆ..”ಎಂದು ಹೇಳುವ ಮೂಲಕ ಎಲ್ಲಾ ವಿಚಾರಗಳಿಗೂ ಉತ್ತರ ನೀಡಿದ್ದಾರೆ ಸುಮಾ.
Comments are closed.