Neer Dose Karnataka
Take a fresh look at your lifestyle.

ಅಣ್ಣಾವ್ರು ಮಾಡಿದ ಸಿನಿಮಾದಲ್ಲಿ ಸಾಕ್ಷಾತ್ಕಾರ ಇಷ್ಟವಾಗದ ಸಿನಿಮಾ ಎಂದಿದ್ದ ಪಾರ್ವತಮ್ಮ ರಾಜ್ ಕುಮಾರ್, ಕಾರಣವೇನಂತೆ ಗೊತ್ತೇ??

ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದ ಆಧಾರ ಸ್ಥಂಭ, ಕನ್ನಡ ಎಂದರೆ ಮೊದಲಿಗೆ ನಮ್ಮ ಮನಸ್ಸುಗಳಲ್ಲಿ ಮೂಡುವುದು ಇವರ ಹೆಸರು. ಅಣ್ಣಾವ್ರು ನಟನೆಯಲ್ಲಿ ತೊಡಗಿಕೊಂಡಿದ್ದ ಸಮಯದಲ್ಲಿ 205 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಣ್ಣಾವ್ರು ಅಭಿನಯದ ಬಹುತೇಕ ಎಲ್ಲಾ ಸಿನಿಮಾಗಳು ಸಹ ಜನಮನ್ನಣೆ ಗಳಿಸಿ, ಜನರಿಗೆ, ಸಮಾಜೆಕ್ಕೆ ಒಳ್ಳೆಯ ಸಂದೇಶ ನೀಡುತ್ತಿತ್ತು. ಅಂತಹ ಸಿನಿಮಾಗಳನ್ನೆ ಅಣ್ಣಾವ್ರು ಒಪ್ಪಿಕೊಳ್ಳುತ್ತಿದ್ದರು. ಅಣ್ಣಾವ್ರ ಸಿನಿಮಾ ಪಯಣದಲ್ಲಿ ಮಾಸ್ಟರ್ ಪೀಸ್ ಎಂದು ಕರೆಸಿಕೊಳ್ಳುವ ಸಿನಿಮಾಗಳಲ್ಲಿ ಒಂದು ಸಾಕ್ಷಾತ್ಕಾರ. ಇದು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರು ಡಾ.ರಾಜ್ ಕುಮಾರ್ ಅಗರಿಗಾಗಿ ಹೆಣೆದ ಕಥೆ.

ಈ ಸಿನಿಮಾಗೆ ನಾಯಕಿಯಾಗಿ ಬಹುಭಾಷಾ ನಟಿ ಜಮುನಾ ನಟಿಸಿದ್ದಾರೆ. ಸಿನಿಮಾದ ಪ್ರಮುಖ ಆಕರ್ಷಣೆ, ಬಾಲಿವುಡ್ ನ ಪ್ರಖ್ಯಾತ ನಟ ಪೃಥ್ವಿ ರಾಜ್ ಕಪೂರ್ ಅವರು ಈ ಸಿನಿಮಾದಲ್ಲಿ ನಟಿಸಿದ್ದು, ಡಾ.ರಾಜ್ ಕುಮಾರ್ ಅವರ ಸಿನಿಮಾ ಎನ್ನುವ ಕಾರಣಕ್ಕೆ ಪೃಥ್ವಿ ರಾಜ್ ಕಪೂರ್ ಅವರು ಕನ್ನಡಕ್ಕೆ ಬಂದು ಈ ಸಿನಿಮಾದಲ್ಲಿ ನಟಿಸಿದ್ದರು. ಸಾಕ್ಷಾತ್ಕಾರ ನಿಜಕ್ಕೂ ಒಂದು ಅದ್ಭುತವಾದ ಕಥೆ. ಇಂದಿಗೂ ಈ ಸಿನಿಮಾ ವೀಕ್ಷಿಸುವವರು ಭಾವುಕರಾಗದೆ ಇರಲು ಸಾಧ್ಯವಿಲ್ಲ. ಒಲವೇ ಜೀವನ ಸಾಕ್ಷಾತ್ಕಾರ ಹಾಡನ್ನು ಈಗಲೂ ಸಹ ಜನರು ಗುನುಗುತ್ತಾರೆ.

ಈ ಸಿನಿಮಾದಲ್ಲಿ ಅಣ್ಣಾವ್ರ ಅಭಿನಯ  ಪ್ರಬುದ್ಧತೆಯನ್ನು ಎಷ್ಟು ಹೊಗಳಿದರೂ ಸಾಲದು. ಕೆಲವೊಂದು ದೃಶ್ಯಗಳಲ್ಲಿ ಅಣ್ಣಾವ್ರು ಕಣ್ಣಲ್ಲೇ ತಮ್ಮೆಲ್ಲಾ ಭಾವನೆಯನ್ನು ವ್ಯಕ್ತಪಡಿಸುವುದನ್ನು ನೋಡಲು ಜನರಿಗೆ ಈ ಸಿನಿಮಾ ತುಂಬಾ ಆಪ್ತವಾಗುತ್ತದೆ. ಸಾಕ್ಷಾತ್ಕಾರ ಸಿನಿಮಾದಲ್ಲಿ ಅಣ್ಣಾವ್ರ ಮುಖದಲ್ಲಿ ಮೂಡುವ ಆ ಪ್ರೇಮದ ಭಾವನೆಗಳು, ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಅಣ್ಣಾವ್ರ ಅಭಿನಯ ಮನಮುಟ್ಟುವಂಥದ್ದು. ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರು ಅದ್ಭುತವಾದ ಕಥೆಯನ್ನು ಡಾ.ರಾಜ್ ಕುಮಾರ್ ಅವರಿಗೋಸ್ಕರ ತಯಾರಿಸಿದ್ದರು. ಕಥೆ, ಸಂಭಾಷಣೆ, ಸಂಗೀತ ಸಾಹಿತ್ಯ ಎಲ್ಲಾ ವಿಚಾರದಲ್ಲೂ ಈ ಸಿನಿಮಾ ಜನರ ಮೆಚ್ಚುಗೆ ಪಡೆದುಕೊಂಡಿತ್ತು.

ಕೆಲವರು ಈ ಸಿನಿಮಾ ಬಿಡುಗಡೆಯಾದಾಗ ಸೂಪರ್ ಹಿಟ್ ಆಗಿತ್ತು ಎಂದರೆ ಇನ್ನು ಕೆಲವರು ಸಿನಿಮಾ ಅಷ್ಟೇನು ಯಶಸ್ಸು ಕಾಣಲಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಹಣಗಳಿಕೆ ಮಾಡಿತು ಎನ್ನುವುದಕ್ಕಿಂತ ಈ ಸಿನಿಮಾ ಜನರ ಮನಸ್ಸನ್ನು ಮುಟ್ಟಿತು ಎನ್ನುವುದು ಮುಖ್ಯವಾಗಿತ್ತು. ಸಾಕ್ಷಾತ್ಕಾರ ಸಿನಿಮಾವನ್ನು ಮೆಚ್ಚಿಕೊಂಡರು ಆದರೆ ಕೆಲವರಿಗೆ ಸಾಕ್ಷಾತ್ಕಾರ ಸಿನಿಮಾ ಇಷ್ಟವಾಗಲಿಲ್ಲ, ಸಾಕ್ಷಾತ್ಕಾರ ಸಿನಿಮಾವನ್ನು ಇಷ್ಟಪಡದೆ ಇರುವವರಲ್ಲಿ ಅಣ್ಣಾವ್ರ ಪತ್ನಿ ಪಾರ್ವತಮ್ಮನವರು ಸಹ ಒಬ್ಬರು. ಪಾರ್ವತಮ್ಮನವರು, ನಮ್ಮ ಯಜಮಾನರು ಮಾಡಿದ ಸಿನಿಮಾಗಳಲ್ಲಿ ನನಗೆ ಇಷ್ಟವಾಗದೆ ಇದ್ದದ್ದು ಸಾಕ್ಷಾತ್ಕಾರ ಸಿನಿಮಾ ಎಂದು ಹೇಳಿದ್ದರು. ಇದಕ್ಕೆ ಕಾರಣ ಕೂಡ ಇದೆ.

ಸಿನಿಮಾದ ಕಥೆ ಕೇಳುವ ಸಮಯದಲ್ಲೇ ಅಣ್ಣಾವ್ರಿಗೆ ಈ ಕಥೆ ಆಸಕ್ತಿದಾಯಕ ಎನ್ನಿಸಿದರೆ, ಪಾರ್ವತಮ್ಮನವರಿಗೆ ಅಷ್ಟೇನು ಚೆನ್ನಾಗಿಲ್ಲ ಎನ್ನಿಸಿತ್ತಂತೆ, ಅಣ್ಣಾವ್ರ ಆಸಕ್ತಿ ನೋಡಿ ಪಾರ್ವತಮ್ಮನವರು ಸುಮ್ಮನಾಗಿದ್ದರಂತೆ. “ಸಿನಿಮಾದಲ್ಲಿ ಎಲ್ಲವೂ ಇದೆ, ಚಿತ್ರಕತೆಯೂ ಚೆನ್ನಾಗಿದೆ. ಆದರೆ ಕಥೆಯನ್ನು ಹಿಡಿದಿಡುವ ತಂತ್ರ ರೀತಿ ನನಗೆ ಇಷ್ಟವಾಗಲಿಲ್ಲ. ನಮ್ಮ ಯಜಮಾನರ ಉಳಿದ ಸಿನಿಮಾಗಳಲ್ಲಿ ಇರುವಂಥ ಅಂಶಗಳು, ಬೇರೆ ಸಿನಿಮಾಗಳು ಸಮಾಜದ ಮೇಲೆ ಬೀರುವ ಪರಿಣಾಮಗಳು, ಸಮಾಜಕ್ಕೆ ಕೊಡುವ ಸಂದೇಶಗಳು ಈ ಸಿನಿಮಾದಲ್ಲಿ ಅಷ್ಟೇನು ಕಾಣಿಸಲಿಲ್ಲ. ಹಾಗಾಗಿ ಕಥೆಯ ವಿಚಾರಕ್ಕೆ ಬರುವುದಾದರೆ ನಾನು ಇಷ್ಟಪಡದೆ ಇರುವ ನಮ್ಮ ಯಜಮಾನರ ಸಿನಿಮಾ ಸಾಕ್ಷಾತ್ಕಾರ…”

“ಅದಕ್ಕೆ ಕಾರಣಗಳು ಹಲವು ಇರಬಹುದು. ಒಂದು ಆ ಕಾಲಘಟ್ಟದಲ್ಲಿ ಅಂತಹ ಕಥೆಯನ್ನು ಪುಟ್ಟಣ್ಣ ಕಣಗಾಲ್ ಅವರು ಹೊಸೆದದ್ದು ಇರಬಹುದು. ಅಥವಾ ಆ ಕಥೆ ಯಾವ ಕಾಲ ಘಟ್ಟದಲ್ಲು ಘಟಿಸದೆ ಇರುವಂತಹ ಕಥೆ ಅದಾಗಿರಬಹುದು..” ಎಂದು ಪಾರ್ವತಮ್ಮ ಅವರು ಸಾಕ್ಷಾತ್ಕಾರ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಈಗಲೂ ಸಾಕ್ಷಾತ್ಕಾರ ಸಿನಿಮಾವನ್ನು ಇಷ್ಟಪಡುವ ಜನರು ಸಾಕಷ್ಟು ಇದ್ದಾರೆ.

Comments are closed.